ಮರುಭೂಮಿಯಲ್ಲಿ ಸಿಕ್ಕ ಈ ಕಲ್ಲಿನ ಬೆಲೆ 18 ಕೋಟಿ.. ಕಾರಣ ಗೊತ್ತಾದ್ರೆ ಬೆರಗಾಗ್ತೀರಾ..?

in ಕನ್ನಡ ಮಾಹಿತಿ 116 views

ಈ ಪ್ರಪಂಚದಲ್ಲಿ ನಾವು ಮುಟ್ಟದ ನಾವು ನೋಡದ ಹತ್ತಾರು ವಿಸ್ಮಯಗಳು ಇವೆ. ಆದರೆ ಅವುಗಳನ್ನು ಮುಟ್ಟಬೇಕು ಅಂದರೆ ಹಣ ಬೇಕು. ಇದು ವಜ್ರ ಅಥವಾ ಬಂಗಾರ ಕಲ್ಲು ಅಲ್ಲ. ಆದರೆ ಇದರ ಬೆಲೆ 18 ಕೋಟಿ. ಕೇಳುವುದಕ್ಕೆ ವಿಚಿತ್ರವಾಗಿದೆಯಲ್ಲವೇ..? ಈ ಕಲ್ಲಿನ ಬಗ್ಗೆ ತಿಳಿದರೆ ಒಮ್ಮೆ ಇದನ್ನು ಮುಟ್ಟಿದರೆ ಸಾಕು ಎನಿಸುತ್ತದೆ. ಅಷ್ಟಕ್ಕೂ ಈ ಕಲ್ಲಿಗೆ ಇರುವ ವೈಶಿಷ್ಟ ಏನು..? ಇದು ಎಲ್ಲಿಂದ ಬಂದಿದೆ ಗೊತ್ತಾ..? ಈ ಭೂಮಿಗೆ ಸೇರಿದ್ದಲ್ಲದ ಯಾವುದಾದರೂ ವಸ್ತು ನಿಮ್ಮಲ್ಲಿ ಇದ್ದೀಯಾ? ಇದ್ರೆ ಎಷ್ಟು ತ್ರಿಲ್ ಇರುತ್ತೆ. ಅಲ್ಲವೇ ಎರಡು ವರ್ಷದ ಹಿಂದೆ ಸಹರಾ ಮರುಭೂಮಿಯಲ್ಲಿ ಸಿಕ್ಕ ಈ ಕಲ್ಲಿನ ತುಕ 13.5 ಕೆಜಿ ಹಾಗೂ ಇದರ ಪ್ರಾರಂಭಿಕ ಬೆಲೆ 18 ಕೋಟಿ 71ಲಕ್ಷ. ಈ ಕಲ್ಲಿಗೆ ಅಷ್ಟೊಂದು ಬೆಲೆ ಯಾಕೆ ಗೊತ್ತಾ? ಈ ಕಲ್ಲು ಭೂಮಿಯದು ಅಲ್ಲ. ಚಂದ್ರನಿಂದ ಭೂಮಿಗೆ ಬಂದ ಕಲ್ಲು. ಚಂದ್ರನಿಂದ ಭೂಮಿಯ ಮೇಲೆ ಕಲ್ಲು ಬರಲು ಹೇಗೆ ಸಾಧ್ಯ ಎಂದು ಆಲೋಚನೆ ಮಾಡುತ್ತಿದ್ದೀರಾ? ಅದು ಹೇಗೆ ಅನ್ನುವ ಇಂಟ್ರೆಸ್ಟಿಂಗ್ ಸುದ್ದಿ ಗೊತ್ತಾ..?

Advertisement

Advertisement

ಸಾವಿರಾರು ವರ್ಷಗಳ ಹಿಂದೆ ಚಂದ್ರನಿಗೆ ಧೂಮಕೇತು ಡಿಕ್ಕಿ ಹೊಡೆದಾಗ ಚಂದ್ರನ ಕಲ್ಲುಗಳು ಚೂರುಚೂರಾಗಿ ಅದರಲ್ಲಿ ಕೆಲವು ಕಲ್ಲಿನ ಚೂರುಗಳು ಭೂಮಿಯ ಮೇಲೆ ಬಂದು ಬಿದ್ದಿವೆ. ಇದನ್ನು ಉಲ್ಕಾಶಿಲೆ ಅಥವಾ ಚಂದ್ರನ ಶಿಲೆ ಎಂದು ಕರೆಯಲಾಗುತ್ತದೆ. ಈಗ ಚಂದ್ರನಿಂದ ಕಲ್ಲುಗಳು ಬರುವುದು ಕಡಿಮೆಯಾಗಿದೆ. ಆದರೆ ಸಾವಿರಾರು ವರ್ಷಗಳ ಹಿಂದೆ ಹೆಚ್ಚಾಗಿ ಬರುತ್ತಿತ್ತು. ಇಲ್ಲಿಯವರೆಗೆ ಚಂದ್ರನಿಂದ ಭೂಮಿಗೆ ಬಂದ ಮೂವತ್ತು ಕಲ್ಲುಗಳನ್ನು ಶೇಖರಣೆ ಮಾಡಲಾಗಿದೆ. ಅದರಲ್ಲಿ ಈ ಕಲ್ಲು ಕೂಡ ಒಂದು.
ಈ ಕಲ್ಲು ಎರಡು ವರ್ಷಗಳ ಹಿಂದೆ ಸಹಾರ ಮರುಭೂಮಿಯಲ್ಲಿ ಸಿಕ್ಕಿದ್ದು. ಇದರ ತೂಕ 13.5 ಕೆಜಿ. ಈಗ ಇದನ್ನು ಕ್ರಿಸ್ಟಿ ಎನ್ನುವ ಸಂಸ್ಥೆ ಹರಾಜಿನ ಮೂಲಕ ಮಾರಾಟ ಮಾಡಲು ಮುಂದಾಗಿದ್ದು. ಇದರ ಆರಂಭಿಕ ಬೆಲೆಯನ್ನು 18 ಕೋಟಿ 71 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

Advertisement

Advertisement

ಇದು ಪ್ರಪಂಚದಲ್ಲೇ ಅತ್ಯಂತ ವಿರಳವಾಗಿ ಸಿಗುವ ಕಲ್ಲು. ಹಾಗಾಗಿ ಇದನ್ನು ತಮ್ಮ ಬಳಿ ಇರಿಸಿಕೊಳ್ಳಲು ಇದನ್ನು ಖರೀದಿ ಮಾಡಲು ಶ್ರೀಮಂತರು ಮುಗಿ ಬೀಳುತ್ತಿದ್ದಾರೆ. ಭೂಮಿಗೆ ಸೇರಿದ್ದಲ್ಲದ ಕಲ್ಲನ್ನು ನೇರವಾಗಿ ನೋಡುವುದಕ್ಕೂ ಮುಟ್ಟುವುದಕ್ಕೂ ಯಾರಿಗೆ ಆದರೂ ಸಕ್ಕತ್ ತ್ರಿಲ್ ಕೊಡುವುದಂತೂ ನಿಜ. ಹಾಗೆಯೇ ಈ ಕಲ್ಲು ಯಾವುದಾದರೂ ಶ್ರೀಮಂತನ ಪಾಲಾಗುವುದು ನಿಜ.

– ಸುಷ್ಮಿತಾ

Advertisement
Share this on...