ಸ್ಯಾಂಡಲ್ ವುಡ್ ನ ಅತ್ಯುತ್ತಮ ನಿರ್ದೇಶಕ ಎಂದ ಅನುಪ್ರಭಾಕರ್ ಗೆ ಸುದೀಪ್ ಹೇಳಿದ್ದೇನು ?

in ಸಿನಿಮಾ 77 views

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಜೊತೆಗೆ ನಿರ್ದೇಶನದಲ್ಲೂ ಗುರುತಿಸಿಕೊಂಡಿದ್ದಾರೆ. ಅನೇಕ ಸಿನಿಮಾಗಳನ್ನ ನಿರ್ದೇಶನ ಮಾಡಿ ಉತ್ತಮ ನಿರ್ದೇಶಕ ಅನ್ನಿಸಿಕೊಂಡಿದ್ದಾರೆ. ಅಭಿಮಾನಿಗಳು ಸಹ ಕಲಾವಿದರು ಕೂಡ ಕಿಚ್ಚನ ನಿರ್ದೇಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ನಟಿ ಅನು ಪ್ರಭಾಕರ್ ಮುಖರ್ಜಿ ಸುದೀಪ್ ಓರ್ವ ಉತ್ತಮ ನಿರ್ದೇಶಕ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

 

Advertisement

Advertisement

 

Advertisement

ನಟ ಸುದೀಪ್ ಅನೇಕ ವರ್ಷಗಳ ಹಿಂದೆಯೇ # 73 ಶಾಂತಿನಿವಾಸ ಸಿನಿಮಾವನ್ನ ನಿರ್ದೇಶಿಸಿದ ಯಶಸ್ವಿ ಕಂಡಿದ್ದರು. ಅಂದಿಗೆ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. # 73 ಶಾಂತಿ ನಿವಾಸ ಸಿನಿಮಾ 2007ರಲ್ಲಿ ರಿಲೀಸ್ ಆಗಿದ್ದು ಮನೆಮಂದಿಯಲ್ಲಾ ಕುಳಿತು ಕೊಂಡು ನೋಡಬಹುದಾದ ಸಿನಿಮಾವಾಗಿತ್ತು. ಸುದೀಪ್ ಅವರ ಸರಳ ನಿರೂಪಣೆ ಹಾಗೂ ತಾಜಾತನದ ಸರಳ ಹಾಸ್ಯ ಸಂಭಾಷಣೆಯಿಂದ ಶಾಂತಿನಿವಾಸ ಸಿನಿಮಾ ಒಂದು ಉತ್ತಮ ಸದಭಿರುಚಿ ಹೊಂದಿರುವ ಚಿತ್ರ ಅಂತ ಮೂಡಿಬಂದಿತ್ತು. ಹೀಗಾಗಿ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಯನ್ನ ಗಳಿಸಿತು.

 

 

ಅಹಂಕಾರದಿಂದ ಇದ್ದ ಒಂದು ಕುಟುಂಬವನ್ನ ಮನೆಗೆ ಬರುವ ಅಡುಗೆಯವನೊಬ್ಬ ಸರಿಪಡಿಸುವ ಕಥೆಯೇ ಶಾಂತಿನಿವಾಸ ಚಿತ್ರವಾಗಿದೆ. ಚಿತ್ರದಲ್ಲಿ ಸುದೀಪ್ ಅಡುಗೆ ಭಟ್ಟರಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ # 73 ಶಾಂತಿ ನಿವಾಸ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಈ ಚಿತ್ರವನ್ನು ನೋಡಿದ ಅಭಿಮಾನಿಯೊಬ್ಬರು ಅನುಪ್ರಭಾಕರ್ ಗೆ ಟ್ವೀಟ್ ಮಾಡಿ ನಿಮ್ಮ ಅಭಿನಯ ಅದ್ಬುತವಾಗಿದೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

ಅಭಿಮಾನಿಯ ಟ್ವೀಟ್ ಗೆ ಪ್ರತಿಕ್ರಿಯಿಸಿದ ಅನುಪ್ರಭಾಕರ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. # 73 ಶಾಂತಿನಿವಾಸ ಸಿನಿಮಾವನ್ನ ತುಂಬಾ ಪ್ರೀತಿಸಿದ್ದೇನೆ. ನನ್ನ ಸಿನಿಮಾ ವೃತ್ತಿ ಜೀವನದಲ್ಲಿ ನಾನು ಕೆಲಸ ಮಾಡಿದ ಅತ್ಯುತ್ತಮ ನಿರ್ದೇಶಕರಲ್ಲಿ ಕಿಚ್ಚ ಸುದೀಪ್ ಒಬ್ಬರು. ಈ ಬಗ್ಗೆ ನಾನು ಅನೇಕ ಬಾರಿ ಹೇಳಿದ್ದೇನೆ ಅಂತ ಖುಷಿಯಿಂದ ಸುದೀಪ್ ನಿರ್ದೇಶನದ ಬಗ್ಗೆ ತಿಳಿಸಿದ್ದರು. ಅನುಪ್ರಭಾಕರ್ ಟ್ವೀಟ್ ನೋಡಿದ ಸುದೀಪ್ ನೀವು ತುಂಬಾ ಅತ್ಯುತ್ತಮ ನಟಿ ಅನುಪ್ರಭಾಕರ್. ಹೀಗಾಗಿ ಶೀಘ್ರದಲ್ಲಿ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ.

 

 

# 73 ಶಾಂತಿನಿವಾಸ ಸಿನಿಮಾ ನನಗೆ ಯಾವಾಗಲೂ ಉತ್ತಮ ಆಯ್ಕೆಯಾಗಿದೆ. ನೀವೆಲ್ಲರೂ ಅದ್ಬುತ ನಟರು, ನನಗೆ ಜೀವನ ಕೊಟ್ಟವರು ಅಂತ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಸಿನಿಮಾದಲ್ಲಿ ಅಭಿನಯಿಸಿದ ಮಾಸ್ಟರ್ ಹಿರಣ್ಣಯ್ಯ ಸರ್ ಮತ್ತು ಶಾಲಿನಿ ಮೇಡಂರವರನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಪ್ರತಿಯೊಬ್ಬ ಕಲಾವಿದರೂ ಅದ್ಭುತವಾಗಿ ನಟಿಸಿದ್ದಾರೆ ಅಂತ ಸಿನಿಮಾದ ಬಗ್ಗೆ ಸುದೀಪ್ ತಿಳಿಸಿದ್ದಾರೆ. ಚಿತ್ರದಲ್ಲಿ ಸುದೀಪ್, ಮಾಸ್ಟರ್ ಹಿರಣ್ಣಯ್ಯ, ಶ್ರೀನಿವಾಸಮೂರ್ತಿ, ರಮೇಶ್ ಭಟ್, ಅನುಪ್ರಭಾಕರ್, ಕೋಮಲ್, ವೈಶಾಲಿ ಕಾಸರವಳ್ಳಿ, ಚೈತ್ರ ಶಣೈ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.

 

 

ಸೋಮವಾರವಷ್ಟೇ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರದ ಆಕಾಶಾನೆ ಅಧರಿಸುವ ಹಾಡು ಬಿಡುಗಡೆಯಾಗಿದ್ದು ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. ಆನಂದ್ ಆಡಿಯೋದ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾದ ಮೊದಲ ಲಿರಿಕಲ್ ವಿಡಿಯೋ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಬಿಡುಗಡೆಯಾದ ಒಂದೇ ದಿನದಲ್ಲಿ ಹಾಡು 75 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದಿದೆ. ಲಾಕ್ ಡೌನ್ ಕಾರಣದಿಂದ ಬೇಸರದಲ್ಲಿದ್ದ ಅಭಿಮಾನಿಗಳು ಈ ಹಾಡನ್ನ ಹೆಚ್ಚಾಗಿ ವೀಕ್ಷಿಸಿದ್ದಾರೆ. ಲಿರಿಕಲ್ ವಿಡಿಯೋದ ಹಾಡಿನ ಸಾಲುಗಳು ಅದರಲ್ಲಿನ ಕಿಚ್ಚ ಸುದೀಪ್ ವಿಭಿನ್ನ ಗೆಟಪ್ ಗಳು ಅಭಿಮಾನಿಗಳಿಗೆ ಖುಷಿ ನೀಡಿದೆ. ಅರ್ಜುನ್ ಜನ್ಯ ಸಂಗೀತದಲ್ಲಿರುವ ಈ ಚಿತ್ರದ ಹಾಡನ್ನ ವಿ. ನಾಗೇಂದ್ರ ಪ್ರಸಾದ್ ಬರೆದಿದ್ದು ಈ ಹಾಡು ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ.

– ಸುಷ್ಮಿತಾ

Advertisement
Share this on...