ಈ ಖ್ಯಾತ ನಟಿಯ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ ಏನು ಗೊತ್ತಾ ?

in Uncategorized/ಮನರಂಜನೆ 50 views

ಮನುಷ್ಯನಿಗೆ ಛಲ ಇದ್ದರೆ ಎಂತಹ ಕಷ್ಟವನ್ನಾದರೂ ಕೂಡ ಮೆಟ್ಟಿ ನಿಲ್ಲಬಹುದು ಎಂಬುದನ್ನು ಈ ಖ್ಯಾತ ನಟಿ ನಿರೂಪಿಸಿದ್ದಾರೆ. ಈ ನಟಿಗೆ ಒಂದು ಕಾಲಿಲ್ಲ ಆದರೂ ಕೂಡ ಭಾರತ ನಾಟ್ಯವನ್ನು ಮಾಡುತ್ತಾರೆ. ಭಾರತದ ಎಲ್ಲ ಭಾಷೆಗಳಲ್ಲಿ  ಎಲ್ಲಾ ಖ್ಯಾತ ನಟರುಗಳ ಜತೆ  ಚೆನ್ನಾಗಿ ನಟಿಸಿ ಅವರಿಗಿಂತಲೂ ಕೂಡ ಚೆನ್ನಾಗಿ ಡ್ಯಾನ್ಸ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹೆಚ್ಚು ಜನರಿಗೆ ಈ ನಟಿಗೆ ಕಾಲಿಲ್ಲ ಎಂಬುದೇ ಗೊತ್ತಿಲ್ಲ. ಅಷ್ಟು ಚೆನ್ನಾಗಿ ಸಾಮಾನ್ಯರಂತೆ ನಡೆಯಬಲ್ಲರು.  ಅಷ್ಟಕ್ಕೂ ಆ ನಟಿ ಯಾರೆಂದರೆ ಕನ್ನಡದಲ್ಲಿ ಒಲವಿನ ಆಸರೆ, ಬಿಸಿಲು ಬೆಳದಿಂಗಳು ಇನ್ನು ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ ನಟಿ ಸುಧಾ ಚಂದ್ರನ್. ಕಲಾಲೋಕದಲ್ಲಿ ಹತ್ತಾರು ಕನಸುಗಳನ್ನು ಕಂಡ ಸುಧಾಚಂದ್ರನ್ ಚಿಕ್ಕ ವಯಸ್ಸಿನಲ್ಲಿಯೇ ಭರತನಾಟ್ಯವನ್ನು ಅದ್ಭುತವಾಗಿ ಕಲಿತು ದೊಡ್ಡ ದೊಡ್ಡ ಸ್ಟೇಜ್ ಗಳಲ್ಲಿ ಪ್ರದರ್ಶನವನ್ನು ಕೊಡುತ್ತಿದ್ದರು. ಕೇವಲ ಹದಿನಾರು ವರ್ಷಕ್ಕೆ ಪ್ರಸಿದ್ಧಿಯನ್ನು ಕೈವಶ ಮಾಡಿಕೊಂಡಂತಹ ಸುಧಾ ಚಂದ್ರನ್ ಅವರನ್ನು ನೋಡಿ ವಿಧಿಗೆ ಸಹಿಸಲಾಗಲಿಲ್ಲ ಹೀಗಾಗಿ 1981 ರಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಒಂದು ಭೀಕರ  ಅಪಘಾತದಿಂದಾಗಿ  ಅವರ ಬಲಗಾಲಿಗೆ ಬಹಳ ಪೆಟ್ಟಾಯಿತು.

Advertisement

 

Advertisement

Advertisement

ಹೀಗಾಗಿ ಡಾಕ್ಟರ್ ಕೆಲವು ಕಾಲ ಚಿಕಿತ್ಸೆ ಕೊಟ್ಟ ನಂತರ  ಬಲಗಾಲನ್ನು ತೆಗೆಯಬೇಕು ಎಂಬುದಾಗಿ ಹೇಳಿದರು . ಆಗ ಬೇರೆ ವಿಧಿಯೇ ಇಲ್ಲದೆ ಸುಧಾಚಂದ್ರನ್ ತಮ್ಮ ಕಾಲನ್ನು ಕಳೆದುಕೊಂಡರು. ವಿಧಿಯ ಶಾಪದಿಂದಾಗಿ ಹದಿನಾರು ವರ್ಷದ ಈ  ಹುಡುಗಿ ತನ್ನ ಡ್ಯಾನ್ಸ್ ಮೂಲಕ ಸ್ಟೇಜ್ ಅನ್ನು ಅಲುಗಾಡಿಸುತ್ತಿದ್ದ ಹುಡುಗಿ ಇನ್ನೆಂದೂ ಡ್ಯಾನ್ಸ್ ಮಾಡಲಾಗದ ಸ್ಥಿತಿಗೆ ತಲುಪಿದ್ದರು.  ಆ ನಂತರ ಹೇಗಾದರೂ ಮಾಡಿ ನಾನು ಮತ್ತೆ ಡ್ಯಾನ್ಸ್ ಮಾಡಲೇಬೇಕು ಎಂದು ನಿರ್ಧರಿಸಿದರು.   ಸುಧಾಚಂದ್ರನ್ ಜೈಪುರ ಫುಟ್ ಅನ್ನು ಕಾಲಿಗೆ ಅಳವಡಿಸಿಕೊಂಡು ಸಾಮಾನ್ಯರಂತೆ ನಡೆಯಲು ಸತತ ಪ್ರಯತ್ನವನ್ನು ನಡೆಸಿದರು . ಸುಧಾ ಚಂದ್ರನ್ ಅವರ ಸತತ ಪ್ರಯತ್ನ ಮತ್ತು ಛಲದ ಮುಂದೆ ವಿಧಿಯ ಕೈವಾಡವೇನೂ ನಡೆಯಲಿಲ್ಲ.ಜೈಪುರ್ ಫುಟ್  ಅನ್ನು ಧರಿಸಿಕೊಂಡೆ ಭರತನಾಟ್ಯ ಡ್ಯಾನ್ಸ್ ಮಾಡಲು ಪ್ರಾರಂಭಿಸಿದರು. ಇದುವರೆಗೆ ಇವರು ಸುಮಾರು ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಅಲ್ಲದೆ ಅರವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

Advertisement

ಒಂದು ಕಾಲನ್ನು ಕಳೆದುಕೊಂಡ ಮೇಲೂ ಕೂಡ  ಒಬ್ಬ ಟಾಪ್ ನಟಿಯಾಗಿ ಮೆರೆದ ಈ ನಟಿಯ ಧೈರ್ಯಕ್ಕೆ ಮೆಚ್ಚಲೇಬೇಕು. 54 ವರ್ಷದ ಈ ನಟಿ ಇಂದಿಗೂ ಕೂಡ ನಟಿಸುತ್ತಿದ್ದಾರೆ. ಇಂದಿಗೂ ದೊಡ್ಡ ದೊಡ್ಡ ಸ್ಟೇಜ್ ಗಳಲ್ಲಿ  ಹಲವಾರು ಪ್ರದರ್ಶನವನ್ನು ನೀಡುತ್ತಿದ್ದಾರೆ. ಇವರ ಡ್ಯಾನ್ಸ್ ಅನ್ನು ನೋಡಿದ ಹೆಚ್ಚು ಜನರಿಗೆ ಇವರಿಗೆ ಒಂದು ಕಾಲಿಲ್ಲ ಎಂಬುದೇ ಗೊತ್ತಾಗುವುದಿಲ್ಲ ಅಷ್ಟು ಸ್ವಾಭಾವಿಕವಾಗಿ ಡ್ಯಾನ್ಸ್ ಮಾಡುತ್ತಾರೆ ಮತ್ತು ಸಾಮಾನ್ಯರಂತೆ ನಡೆಯುತ್ತಾರೆ. ಒಂದು ಕಾಲನ್ನು ಕಳೆದುಕೊಂಡ ಮೇಲೂ ಜೀವನಕ್ಕೆ ಸವಾಲೆಸೆದ ಸುಧಾ ಚಂದ್ರನ್ ಅವರ ಛಲವನ್ನು ಎಲ್ಲರೂ ಅಳವಡಿಸಿಕೊಂಡರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು

Advertisement
Share this on...