ಸುಧಾಮೂರ್ತಿ ಅವರ ಪುಸ್ತಕ ಓದಿ ಈ ಮಲಯಾಳಂ ನಟಿ ಏನು ಮಾಡಿದ್ದಾರೆ ಗೊತ್ತಾ?

in ಕನ್ನಡ ಮಾಹಿತಿ/ಮನರಂಜನೆ 194 views

ಕರ್ನಾಟಕದ ಈಗಿನ ಮಹಿಳೆಯರಲ್ಲಿ ಅತ್ಯಂತ ಹೆಚ್ಚಿನ ಜನಪ್ರಿಯತೆ, ಗೌರವ ಮತ್ತು ಸಮಾಜ ಸೇವಾ ಕೆಲಸಗಳಲ್ಲಿ ಮಹತ್ವ ಪಡೆದಿರುವವರು ಎಂದರೆ ಅದು ಡಾ. ಸುಧಾಮೂರ್ತಿಯವರು. ಅಲ್ಲದೇ ಸರಳತೆಯಿಂದಲೂ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಶ್ರೀಮಂತಿಕೆಯನ್ನು ಕಾರು ಬಟ್ಟೆ ಒಡವೆಗಳಲ್ಲಿ ಪ್ರದರ್ಶಿಸುವ ಇಂದಿನ ದಿನಗಳಲ್ಲಿ, ಅಪಾರ ಹಣವಿದ್ದರೂ ಅದನ್ನು ಉಡುಗೆಗಳಲ್ಲಿ ತೋರ್ಪಡಿಸದ, ಅವರ ಸರಳತೆ ಜನರಲ್ಲಿ ಅವರ ಬಗ್ಗೆ ಅಭಿಮಾನ ಮೂಡಿಸಿದೆ. ಈಗಾಗಲೇ ಅವರ ಸಾಧನೆ, ಸಾಹಿತ್ಯ ಮತ್ತು ಇತರ ಚಟುವಟಿಕೆಗಳಿಂದ ಎಲ್ಲರ ಮನಸಲ್ಲಿ ನೆಲೆಸಿರುವ ಅವರು, ಭಾರತದ ಶ್ರೀಮಂತ ಸಂಸ್ಥೆಗಳಲ್ಲಿ ಒಂದಾದ ಇನ್ಫೋಸಿಸ್ ಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿ ಅವರ ಪತ್ನಿಯಾಗಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾಗಿ ತಮ್ಮ ಮಾತು ಮತ್ತು ನಡವಳಿಕೆಯಿಂದ ಬಹುತೇಕ ಕನ್ನಡ ನಾಡಿನ ಜನರಿಗೆ ಚಿರಪರಿಚಿತರಾಗಿದ್ದಾರೆ. ತಮಗೆ ಒಲಿದು ಬಂದ ಆರ್ಥಿಕ ಹರಿವನ್ನು ಈ ಸಮಾಜದ ಅನೇಕ ಸಂಕಷ್ಟಗಳಿಗೆ ಒಂದಷ್ಟು ದಾನ ಮಾಡುತ್ತಿದ್ದಾರೆ. ಆ ಕಾರಣಕ್ಕಾಗಿ ಅವರ ತೂಕದ ವ್ಯಕ್ತಿತ್ವ ಬಹಳ ಜನರನ್ನು ಆಕರ್ಷಿಸುತ್ತಿದೆ.

Advertisement

Advertisement

ಇನ್ನು ಹೆಣ್ಣೊಬ್ಬಳ ಕಷ್ಟ ಹೆಣ್ಣಿಗೆ ಮಾತ್ರವೇ ಅರ್ಥವಾಗುತ್ತದೆ ಎಂಬಂತೆ ಸುಧಾ ಮೂರ್ತಿ ಅವರು ಇನ್ಫೋಸಿಸ್ ಮುಖ್ಯಸ್ಥೆಯಾದಾಗ ವಿವಿಧ ರಾಜ್ಯಗಳಲ್ಲಿ ಹದಿನಾರು ಸಾವಿರ ಶೌಚಾಲಯಗಳನ್ನು ಕಟ್ಟಿಸಿದ್ದಾರೆ. ಅವರು ಮಾಡಿರುವ ಸಾಧನೆಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ ಬಿಡಿ. ಇನ್ನು ಸುಧಾಮೂರ್ತಿ ಅವರು ಸಾಹಿತಿಯಾಗಿಯೂ ರಾಷ್ಟ್ರ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ. ಅವರಿಗದ ತಮ್ಮದೇ ಆದ ಓದುಗರ ಬಳಗವಿದೆ. ಇದೀಗ ಮಲಯಾಳಂ ಚಿತ್ರರಂಗದ ಖ್ಯಾತ ನಟಿಯೊಬ್ಬರು ಸುಧಾಮೂರ್ತಿ ಅಮ್ಮನವರು ರಚಿಸಿರುವ ಪುಸ್ತಕವನ್ನು ಓದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ ಕೂಡ ಹಂಚಿಕೊಂಡಿದ್ದು, ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಇನ್ನು ಈ ಮಲಯಾಳಂ ನ ಬೆಡಗಿಯ ಹೆಸರು ಮಂಜಿಮಾ ಮೋಹನ್ ಎಂದು.

Advertisement

Advertisement

 

ಸುಧಾಮೂರ್ತಿ ಅವರು ಬರೆದಿರುವ ‘ತ್ರೀ ಥೌಸಂಡ್ ಸ್ಟಿಚಸ್’ ಪುಸ್ತಕವನ್ನು ಓದಿ ಮೆಚ್ಚಿಕೊಂಡಿದ್ದು, ಈ ಬರಹಗಾರ್ತಿಯನ್ನು ಮನಸಾರೆ ಹೊಗಳಿದ್ದಾರೆ.’ಆತ್ಮವಿಶ್ವಾಸವೆಂದರೆ ಎಲ್ಲವೂ ನೀವು ಅಂದುಕೊಂಡಂತೆ ಆಗುವುದಲ್ಲ, ಸೋಲುಗಳನ್ನು ಸಹ ಒಪ್ಪಿಕೊಂಡು ಆಶಾಭಾವನೆ, ಭರವಸೆಗಳೊಂದಿಗೆ ಮುಂದಕ್ಕೆ ನಡೆಯುವದೇ ಆಗಿದೆ’ ಎಂಬ ಸುಧಾಮೂರ್ತಿ ಅವರ ಪುಸ್ತಕದ ಸಾಲುಗಳನ್ನು ಬರೆದುಕೊಂಡಿದ್ದಾರೆ. ಮಲಯಾಳಂ ನಟಿ ಮಂಜಿಮಾ ಮೋಹನ್ ಅವರು ಕೇವಲ ಮಲೆಯಾಳಂ ಚಿತ್ರಗಳಲ್ಲಿ ಮಾತ್ರವಲ್ಲದೆ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ. ಎನ್‌ಟಿಆರ್ ಮಹಾನಾಕಡು, ಸಾಹಸಂ ಸ್ವಾಸಗಾ ಸಾಗಿಪೋ, ಜಾಮ್ ಜಾಮ್ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ.

ರಮೇಶ್ ಅರವಿಂದ್ ನಿರ್ದೇಶಿಸಿರುವ ಕ್ವೀನ್ ಚಿತ್ರದ ಮಲೆಯಾಳಂ ರೀಮೇಕ್‌ನಲ್ಲಿ ಮಂಜಿಮಾ ಮೋಹನ್ ನಟಿಸಿದ್ದಾರೆ. ಇದಕ್ಕೆ ಜಾಮ್ ಜಾಮ್ ಎಂದು ಹೆಸರಿಡಲಾಗಿದೆ. ಮಲೆಯಾಳಂ ನ ಖ್ಯಾತ ನಟಿಯರಲ್ಲಿ ಒಬ್ಬರು ಮಂಜಿಮಾ.ಇನ್ನು ಸುಧಾಮೂರ್ತಿ ಅಮ್ಮನವರು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ 30 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ ಮಕ್ಕಳ ಸಾಹಿತ್ಯವೂ ಸೇರಿದೆ. ಡಾಲರ್ ಬಹು, ದಿ ಮದರ್ ಐ ನೆವರ್ ನ್ಯೂ, ದಿ ಡಾಟ್ ಫ್ರಮ್ ಎ ವಿಶಿಂಗ್ ಟ್ರೀ ಇನ್ನೂ ಹಲವನ್ನು ಹೆಸರಿಸಬಹುದು.

Advertisement
Share this on...