ಸುಧಾಮೂರ್ತಿ ರವರು ಸಿದ್ಧಪಡಿಸಿರುವ ಕೋವಿಡ್ ಕೇರ್ ಸೆಂಟರ್ ನ ವೆಚ್ಚ ಎಷ್ಟು ಗೊತ್ತಾ ?

in ಕನ್ನಡ ಮಾಹಿತಿ/ಮನರಂಜನೆ 79 views

ಒಂದು ಕಾಲದಲ್ಲಿ ಅಡಿಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಈಗ ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಿಗೆ ಸಮನಾಗಿ ನಿಂತಿದ್ದಾಳೆ. ಸಾಹಿತ್ಯ, ಸಂಗೀತ, ವೈಧ್ಯಕೀಯ, ವಿಜ್ಞಾನ, ಧಾರ್ಮಿಕ, ರಾಜಕೀಯ, ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದ್ದಾಳೆ. ಜೊತೆಗೆ ವಿದ್ಯೆ, ಕ್ರೀಡೆ,  ಕಲೆ ಹೀಗೆ ಬಹುತೇಕ ಕ್ಷೇತ್ರಗಳಲ್ಲೂ ಕೂಡ ಪುರುಷರಿಗೆ ಸರಿಸಮನಾಗಿ ನಿಂತು ಸ್ವತಂತ್ರರಾಗಿ, ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಆದುದರಿಂದ ಮಹಿಳೆಯರನ್ನು ಗೌರವಿಸುವುದು ನಮ್ಮ ಕರ್ತವ್ಯ. ಆದರೆ ಪುರುಷರು ಅದನ್ನು ಮರೆತೇ ಹೋಗಿದ್ದೇವೆ. ಮೊದಲು ಪೋಷಕರು ತಮ್ಮ ಗಂಡು ಮಕ್ಕಳಿಗೆ ಹೆಣ್ಣನ್ನು ಗೌರವಿಸುವುದನ್ನು ಹೇಳಿಕೊಡಬೇಕು. ತಮ್ಮ ತಂದೆ, ತಾಯಿಯನ್ನು ಹೇಗೆ ನಡೆಸಿಕೊಳ್ಳುತ್ತಾರೋ, ಮಗನೂ ಅದನ್ನೇ ಕಲಿಯುತ್ತಾನೆ ಹಾಗೂ ಅಳವಡಿಸಿಕೊಳ್ಳುತ್ತಾನೆ. ಆದ್ದರಿಂದ ಮನೆಯಿಂದಲೇ ಒಳ್ಳೆಯ ಶಿಕ್ಷಣ ಆರಂಭವಾಗಬೇಕು. ಬರೀ ವ್ಯಕ್ತಿ, ಮನೆ ಅಷ್ಟೇ ಇದ್ದರೆ ಸಾಲದು, ನಮ್ಮ ಕಾನೂನು ಕೂಡ ಮಹಿಳೆಯರ ವಿಚಾರದಲ್ಲಿ ತುಂಬಾ ಕಠಿಣವಾಗಿ ಕೆಲಸ ನಿರ್ವಹಿಸಬೇಕು.

Advertisement

Advertisement

ಪ್ರತಿಯೊಬ್ಬರ ಬದುಕಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ದೊಡ್ಡದು. ಆಕೆಗಿರುವ ಸ್ಥೈರ್ಯ, ಧೈರ್ಯಕ್ಕೆ ಸರಿಸಾಟಿಯಿಲ್ಲ. ಒಬ್ಬ ಮಗಳಾಗಿ, ಮಡದಿಯಾಗಿ, ತಾಯಿಯಾಗಿ, ಮನೆಗೆ ಆಳಾಗಿ, ಹೊರಗಡೆ ದುಡಿಯುವ ಮಹಿಳೆಯಾಗಿ ಹೀಗೆ ಮಹಿಳೆ ಹತ್ತು ಹಲವು ಪಾತ್ರಗಳನ್ನು ಒಟ್ಟಿಗೆ ಮಾಡುತ್ತಾಳೆ. ಆಕೆಯ ಸಾಮಾರ್ಥ್ಯಕ್ಕೆ ಅಕೆನೇ ಸರಿಸಾಟಿ.
ನಿಮ್ಮ ಬದುಕಿನಲ್ಲಿ ಆಕೆಯ ಮಾತ್ರ ಮಹತ್ವವಾಗಿರುತ್ತದೆ. ಆಕೆ ಗೃಹಿಣಿಯಾಗಿರಬಹುದು ಅಥವಾ ಹೊರಗಡೆ ದುಡಿಯುವ ಮಹಿಳೆಯಾಗಿರಬಹುದು, ಇಬ್ಬರಲ್ಲಿ ಯಾರು ಮೇಲಲ್ಲ, ಯಾರೂ ಕೀಳಲ್ಲ. ಇಬ್ಬರ ಪಾತ್ರಗಳು ನಿಮ್ಮ ಸಂಸಾರ ತೂಗಿಸಲು ಬಹುಮುಖ್ಯ. ಆಕೆ ನಿಮಗಾಗಿ ದುಡಿಯುತ್ತಾಳೆ, ಇಡೀ ಬದುಕನ್ನು ನಿಮಗಾಗಿ ಮೀಸಲಿಡುತ್ತಾಳೆ. ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಹತ್ತು ಹಲವಾರು. ಸಮಾಜ, ಕುಟುಂಬ, ವಿದ್ಯಾಸಂಸ್ಥೆ, ದುಡಿಯುವ ಸ್ಥಳಗಳು ಹೀಗೆ ಎಲ್ಲೆಡೆ ಸ್ತ್ರೀ ಅವಮಾನಕ್ಕೆ, ದೌರ್ಜನಕ್ಕೆ ಗುರಿಯಾಗುತ್ತಲೇ ಇರುತ್ತಾಳೆ. ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಮಹಿಳೆ ಅದರ ವಿರುದ್ಧ ನಿರಂತರ ಹೋರಾಟಗಳನ್ನೂ ಸಹ ನಡೆಸುತ್ತಿದ್ದಾಳೆ.  ಈ ರೀತಿಯ ಎಲ್ಲಾ ಮಹಿಳೆಯರಿಗೂ ಸ್ಪೂರ್ತಿ ಇನ್ಪೋಸಿಸ್ ಅಧ್ಯಕ್ಷೆ  ಸುಧಾಮೂರ್ತಿ ಅಮ್ಮನವರು.

Advertisement

Advertisement

 

ಸುಧಾಮೂರ್ತಿ ಅಮ್ಮನವರು ತಮ್ಮ ಜೀವನವನ್ನೆ ಸಮಾಜಕ್ಕಾಗಿ ಮುಡುಪಿಟ್ಟಿದ್ದಾರೆ. ಅವರು ಮಾಡುವ ಸಮಾಜಮುಖಿ ಕೆಲಸಗಳು, ಮಹಿಳೆಯರಿಗಾಗಿ ಮಾಡವ ನಿಯಮಗಳು ಮತ್ತು ಸಹಾಯಗಳು ಒಂದಾ ಎರಡಾ. ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಕೂಡ ಖ್ಯಾತಿ ಗಳಿಸಿದ್ದಾರೆ. ಇವರು ಮಾಡುವ ಅರ್ಧದಷ್ಟು ಕಾರ್ಯವನ್ನು ನಮ್ಮ ದೇಶವನ್ನು ಆಳುವ ನಾಯಕರು ಮಾಡಿದ್ದರೆ,  ನಮ್ಮ ದೇಶ ಆರ್ಥಿಕತೆಯಲ್ಲೂ ಮುಂದುವರಿಯುತ್ತಿತ್ತು ಮತ್ತು ಬಡತನ ನಿರ್ಮೂಲನೆ ಆಗುತ್ತಿತ್ತು ಅಲ್ಲವೇ?

ಇದೀಗ ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ಸೊಂಕಿನ ಅಟ್ಟಹಾಸ ಬಾರಿ ಪ್ರಮಾಣದಲ್ಲಿ ದೊಡ್ಡದಾಗಿದ್ದು, ಅನೇಕರು ಬೆಂಗಳೂರಿನ ಸಹವಾಸವೇ ಬೇಡ ಎಂದು ನಿರ್ದರಿಸಿ ಮನೆ ಮಠ ಎಲ್ಲವನ್ನು ಖಾಲಿ ಮಾಡಿಕೊಂಡು ತಮ್ಮ ಹುಟ್ಟೂರಿಗೆ ತೆರಳುತ್ತಿದ್ದಾರೆ. ಮುಂದೆ ಬೆಂಗಳೂರಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ಇದೀಗ ಹೆಚ್ಚಾಗುತ್ತಿರುವ ಕೊರೋನಾ ಪ್ರಕರಣವನ್ನು ಪರಿಗಣಿಸಿ ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿ ಬಿಬಿಎಂಪಿ ಗೆ ಸೇರಿದ ಕಟ್ಟಡವನ್ನು ಕೊರೋನಾ ಅಸ್ಪತ್ರೆಯನ್ನಾಗಿ ಸಿದ್ಧಪಡಿಸಿದ್ದಾರೆ.

ಹೊಸದಾದಂತಹ ಕೊರೋನಾ  ಆಸ್ಪತ್ರೆಗೆ ಇನ್ಫೋಸಿಸ್ ಸಂಸ್ಥೆ  ತನ್ನ ನೆರವನ್ನು ನೀಡಿರುವ ವಿಚಾರವನ್ನು ಖುದ್ದು ಸಚಿವರೇ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಈಗಾಗಲೇ ಕೊರೋನಾ ಸಂಕಷ್ಟ ಇರುವ ಕಾರಣ ರಾಜ್ಯ ಸರ್ಕಾರಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡಿರುವ ಇನ್ಫೋಸಿಸ್ ಸಂಸ್ಥೆ, ಮತ್ತೊಮ್ಮೆ ನೆರವಿಗೆ ನಿಂತಿದೆ.  ಇದೀಗ ಜನರ ಹಿತಕ್ಕಾಗಿ ಇನ್ಫೋಸಿಸ್ ಸಂಸ್ಥೆಯೂ ಹೊಸ ಆಸ್ಪತ್ರೆಗೆ ಮೂಲ ಸೌಕರ್ಯಗಳನ್ನು ಒದಗಿಸಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ  ಇದೀಗ  ದೊಡ್ಡದಾಗಿ ಹರಿದಾಡುತ್ತಿದ್ದು, ಇನ್ಫೋಸಿಸ್ ಸಂಸ್ಥೆಯು ಈ ಹೊಸ ಕೋವಿಡ್ ಆಸ್ಪತ್ರೆಗೆ 30 ಕೋಟಿ ವೆಚ್ಚದಲ್ಲಿ ಮೂಲ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಹೇಳಲಾಗುತ್ತಿದೆ.  ಈ ಕುರಿತು ಮಾಧ್ಯಮಗಳಲ್ಲಿ ಮಾತನಾಡಿದ  ಸುಧಾಮೂರ್ತಿ ಅಮ್ಮನವರು ನಗರದ  ಜನರು ಈ ಮಾರಣಾಂತಿಕ ಕಾಯಿಲೆ ಕೊರೊನಾದಿಂದ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಅಲೆದಾಡುವಂತೆ ಆಗಿದೆ. ಅವರಿಗೆ ನೆರವು ಸಿಗಲಿ ಎಂದು ಇಂತಹ ಒಂದು ಪ್ರಯತ್ನ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.

Advertisement
Share this on...