ಸುಧಾರಾಣಿಯವರು ಚಿತ್ರರಂಗಕ್ಕೆ ಬರಲು ಕಾರಣವಾಗಿದ್ದು ಇದೇ ಕಾರ್ಯಕ್ರಮನಾ ?

in ಸಿನಿಮಾ 210 views

ಚಂದನವನ ಕಂಡ ಅತ್ಯಂತ ಸುಂದರವಾದ ನಟಿಮಣಿಯರಲ್ಲಿ ಜಯಶ್ರಿ ಅಲಿಯಾಸ್ ಸುಧಾರಾಣಿ ಅವರು ಕೂಡ ಒಬ್ಬರು. ಮೂರನೇ ವಯಸ್ಸಿಗೆ ರೂಪದರ್ಶಿಯಾಗಿ ನಂತರ ಕನ್ನಡ, ತೆಲುಗು, ತಮಿಳು, ಮತ್ತು ಮಲೆಯಾಳಂ  ಸಿನಿಮಾಗಳಲ್ಲಿ ಅಭಿನಯಿಸಿ ತನ್ನದೆ ಆದ ಛಾಪು ಮೂಡಿಸಿರುವ ಇವರು, ಸಿನಿ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಚಿಕ್ಕ ವಯಸ್ಸಿಂದಲೂ ವರನಟ ಡಾಕ್ಟರ್ ರಾಜ್ ಎಂದರೆ ಸುಧಾರಾಣಿ ಅವರಿಗೆ ಬಹಳ ಅಚ್ಚುಮೆಚ್ಚು. ಕಾಕತಾಳೀಯ ಎಂಬಂತೆ ಸುಧಾರಾಣಿ ಅವರ ಸಿನಿ ಜೀವನ ಪ್ರಾರಂಭವಾಗಿದ್ದೆ, ಅಪ್ಪಾಜಿ ಅವರ ಕುಟುಂಬದಿಂದ..ಸಂಗೀತಂ ಶ್ರೀನಿವಾಸ್ ರಾವ್ ಅವರು ನಿರ್ದೇಶಿಸಿದ್ದ ಆನಂದ್ ಸಿನಿಮಾದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ  ಸುಧಾರಾಣಿ ಅವರು.. ಸುಧಾರಾಣಿ ಅವರನ್ನು ಅದೃಷ್ಟ ಲಕ್ಷ್ಮಿ ಅಂತಾನೇ ಹೇಳಬಹುದು ಯಾಕೆಂದರೆ ಶಿವಣ್ಣ ಮತ್ತು ಸುಧಾರಣೆ ಅವರ ಕಾಂಬಿನೇಷನ್ನಲ್ಲಿ ಮೂಡಿ ಬಂದ ಸಿನಿಮಾಗಳೆಲ್ಲ ಯಶಸ್ವಿ ಪ್ರದರ್ಶನಗಳನ್ನು ಕಂಡು ಸೂಪರ್ ಹಿಟ್ ಆಗಿ ನಿರ್ಮಾಪಕರ ಜೇಬು ತುಂಬಿಸಿದ್ದವು.. ಇನ್ನು ತಮ್ಮ ಮೊದಲ ಸಿನಿಮಾದಿಂದಲೇ ಎಲ್ಲರ ಮನಸ್ಸನ್ನು ಗೆದ್ದು ಕರುನಾಡ ಮನೆಯ ಮಗಳಾಗಿ ಮೆರೆದರು ಸುಧಾರಾಣಿ ಅವರು..

Advertisement

 

Advertisement

Advertisement

ಚಿಕ್ಕ ವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿ ,ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ ಸುಧಾರಾಣಿ ಅವರು ಶಿವಣ್ಣ ಅವರ ಜೊತೆ ಬರೋಬರಿ ಹನ್ನೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ ..ಒಂದು ಕಾಲದಲ್ಲಿ ಚಿತ್ರರಂಗದ ಫೇವರಿಟ್ ಜೋಡಿಗಳಾಗಿದ್ದರು.ಗೋಪಾಲಕೃಷ್ಣ ಮತ್ತು ನಾಗಲಕ್ಷ್ಮಿ ಎಂಬ ದಂಪತಿಗಳಿಗೆ ಪುತ್ರಿಯಾಗಿ ಜಯಶ್ರೀ ಎಂಬ ನಾಮಂಕಿತದಲ್ಲಿ 1973 ರಂದು ಜನಿಸುತ್ತಾರೆ. ಚಿಕ್ಕ ವಯ್ಯಸ್ಸಿನಿಂದಲೇ ಜಯಶ್ರಿ ಬಹಳ ಚೂಟಿಯಾಗಿದ್ದರು ಅಲ್ಲದೇ ಚಂದನವನದ ಹೆಮ್ಮೆಯ ಸಾಹಿತಿ ಚಿ.ಉದಯ್ ಶಂಕರ್ ಅವರ ಸಂಬಂಧಿ. ಇನ್ನು ಜಯಶ್ರಿ ಅವರು ತಾನು 3ನೇ ವಯಸ್ಸಿನವಳಾಗಿದ್ದಾಗಲೆ, ಮುದ್ರಣ ಮಾಧ್ಯಮದ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಮೂಲಕ ತಮ್ಮ ಮಾಡೆಲಿಂಗ್ ಆರಂಭಿಸಿದರು.  5ನೇ ವಯಸ್ಸಿಗೆ ತಮ್ಮ ಮಗಳನ್ನು  ನೃತ್ಯ ತರಬೇತಿ ತರಗತಿಗೆ ಸೇರಿಸುತ್ತಾರೆ. ನಂತರ ಏಳನೇ ವಯಸ್ಸಿಗೆ ಕೂಚುಪುಡಿ ಹಾಗೂ ಭರತನಾಟ್ಯವನ್ನು ಕೂಡ ಕಲೆತು ಅದರಲ್ಲಿ ಪ್ರವೀಣೆಯಾಗುತ್ತಾರೆ.

Advertisement

 

ಬಾಲ್ಯದಿಂದಲೇ ಒಂದೊಂದೇ ವಿಧ್ಯೆಯನ್ನು ಕರಗತ ಮಾಡಿಕೊಳ್ಳುತ್ತ ದೊಡ್ಡ ಕನಸು ಕಾಣುತ್ತಿದ್ದ ಜಯಶ್ರಿಗೆ ಸಹೋದರ ಕಿರುಚಿತ್ರವನ್ನು ನಿರ್ಮಿಸಿ ಅಭಿನಯಿಸಲು ಅವಕಾಶ ನೀಡುತ್ತಾರೆ.ಈ ಮಕ್ಕಳ ಕಿರು ಚಿತ್ರದ ಹೆಸರು ಚೈಲ್ಡ್ ಇಸ್ ಹಿಯರ್ ಎಂಬುದಾಗಿದ್ದು , ಈ ಕಿರುಚಿತ್ರ ಅಂತಾರಾಷ್ಟ್ರೀಯ ಪ್ರಶಸ್ತಿಗೂ ಸಹ ಭಾಜನವಾಗಿತ್ತು.ಒಮ್ಮೆ ಪಾರ್ವತಮ್ಮ ರಾಜ್ ಕುಮಾರ್ ಅವರು ಉಪನಯನ ಸಮಾರಂಭದ ವಿಡಿಯೋವನ್ನು ವೀಕ್ಷಿಸಿಸುತಿರುತ್ತಾರೆ. ಈ ಸಂದರ್ಭದಲ್ಲಿ ಜಯಶ್ರಿಯವರನ್ನು ಅವರು ಗಮನಿಸುತ್ತಾರೆ. ಆಗ ಜಯಶ್ರೀ ಅವರು ವಯಸ್ಸು ಕೇವಲ 12ವರ್ಷ. ಜಯಶ್ರೀ ಬಹಳ ಇಷ್ಟವಾಗಿ ನಂತರ ಆನಂದ್ (1986) ಸಿನಿಮಾಕ್ಕೆ ಜಯಶ್ರೀಯನ್ನು ನಾಯಕಿಯಾಗಿ ಆಗಿ ಆಯ್ಕೆ ಮಾಡುತ್ತಾರೆ.

ಆನಂದ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆ ನಾಯಕಿಯಾಗಿ  ಅಭಿನಯಿಸಿದ ನಂತರ ಮನ ಮೆಚ್ಚಿದ ಹುಡುಗಿ, ಸಮರ, ಆಸೆಗೊಬ್ಬ ಮೀಸೆಗೊಬ್ಬ, ಅಣ್ಣ ತಂಗಿ, ಮಿಡಿದ ಶ್ರುತಿ ಸಿನಿಮಾದಲ್ಲಿ ನಟಿಸಿದ್ದರು.. ಹೀಗೆ ನಾಯಕಿ ನಟಿಯಾಗಿ ಗುರುತಿಸಿಕೊಂಡ ಸುಧಾರಾಣಿ ಕನ್ನಡ ಚಿತ್ರರಂಗದ ಅಪರೂಪದ ಮತ್ತು ಚೆಲುವಿನ ನಟಿ 90ರ ದಶಕದಲ್ಲಿ ಬೇಡಿಕೆಯ ಉತ್ತುಂಗದಲ್ಲಿದ್ದರು.. ನಂತರ ತಮಿಳು ತೆಲುಗು ಮಲೆಯಾಳಂ ಚಿತ್ರಗಳಲ್ಲೂ ಕೂಡ ಬೇಡಿಕೆ ನಟಿಯಾಗಿ ಎಲ್ಲರ ಮನೆಯ ಮಗಳಾದರು. ಹೀಗೆ ರೂಪದರ್ಶಿ ಇಂದ ಹಿಡಿದು ಪೋಷಕ ಪಾತ್ರದವರೆಗೂ ಜಯಶ್ರಿ ಅಲಿಯಾಸ್ ಸುಧಾರಾಣಿ ಅವರ ಹೆಜ್ಜೆ ಶ್ಲಾಘನೀಯವಾದುದ್ದು.

Advertisement
Share this on...