ಯಶಸ್ಸು ಕಾಣಲೇಬೇಕೆಂದು ಹಪಹಪಿಸುವವರು ಇದನ್ನು ಮರೆಯದೆ ಓದಿ…

in ಕನ್ನಡ ಮಾಹಿತಿ 118 views

ಖ್ಯಾತ ಹಣಕಾಸು ತಜ್ಞ, ಫೈನಾನ್ಶಿಯಲ್ ಫ್ರೀಡಂ ಆಪ್ ನಿರ್ಮಾಣದ ರೂವಾರಿ ಸಿ.ಎಸ್. ಸುಧೀರ್ ಅವರು ಈ ಲೇಖನದಲ್ಲಿ ಜೀವನದಲ್ಲಿ ಹೊಸ ಹೊಸ ಅವಕಾಶಗಳನ್ನು ಹೇಗೆ ಪಡೆಯಬೇಕು? ಜೀವನ ಕಟ್ಟಿಕೊಳ್ಳವುದಕ್ಕೆ ಇರುವ ಮಾರ್ಗಗಳೇನು? ಹೆಚ್ಚು ಹಣ ಸಂಪಾದನೆ ಮಾಡಬೇಕೆಂದರೆ ನಾವು ಮೊದಲು ಏನು ಮಾಡಬೇಕು? ಎಂಬಿತ್ಯಾದಿಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದು, ಯಶಸ್ಸು ಕಾಣಲೇಬೇಕೆಂದು ಹಪಹಪಿಸುವವರು ಇದನ್ನು ಮರೆಯದೆ ಓದಿ
ಒಬ್ಬರು ಪ್ರೊಫೆಸರ್ ಇದ್ದರು. ರಿಸರ್ಚ್ ಮಾಡೋಕೆ ಶುರು ಮಾಡಿದರು. ಒಂದು ದೊಡ್ಡ ಫಿಶ್ ಟ್ಯಾಂಕ್’ನೊಳಗೆ ಶಾರ್ಕ್ ಮೀನನ್ನು ತಂದುಬಿಟ್ಟರು. ಶಾರ್ಕ್ ಮೀನನ್ನು ಬಿಟ್ಟ ಮೇಲೆ ಒಂದಷ್ಟು ಸಣ್ಣ ಸಣ್ಣ ಮೀನುಗಳನ್ನು ತಂದು ಬಿಟ್ಟರು. ಈ ಸಣ್ಣ ಮೀನುಗಳನ್ನು ಹಾಕುತ್ತಿದ್ದ ಹಾಗೆ ಶಾರ್ಕ್ ಮೀನಿಗೆ ಬಹಳ ಖುಷಿಯಾಗುತ್ತದೆ. ಆಗ ಶಾರ್ಕ್ ರಭಸದಿಂದ ಹಾರಿ ಆ ಸಣ್ಣ ಸಣ್ಣ ಮೀನುಗಳನ್ನು ಒಂದೊಂದಾಗಿ ತಿನ್ನುತ್ತದೆ. ಸ್ವಲ್ಪ ಸಮಯದ ನಂತರ ಈಗ ಪ್ರೊಫೆಸರ್ ಆ ದೊಡ್ಡ ಫಿಶ್ ಟ್ಯಾಂಕ್’ ಅನ್ನು ಪಾರ್ಟಿಶನ್ ಮಾಡ್ತಾರೆ. ಒಂದು ಶಾರ್ಕ್’ಗೆ, ಇನ್ನೊಂದು ಸಣ್ಣ ಮೀನುಗಳಿಗೆ. ವಿಶೇಷವೆಂದರೆ ಆ ಪಾರ್ಟಿಶನ್ ಗೋಡೆ ಟ್ರಾನ್ಸಪರೆಂಟ್ ಆಗಿರುತ್ತದೆ. ಈಗ ಶಾರ್ಕ್ ಎದುರಿಗಿರುವ ಸಣ್ಣ ಮೀನುಗಳು ತಿನ್ನಲು ಮತ್ತೆ ಹೋದಾಗ ಆ ಪಾರ್ಟಿಶನ್’ಗೆ ಡಿಕ್ಕಿ ಹೊಡೆದು ಬೀಳುತ್ತದೆ. ಹೀಗೆ ಪದೇ ಪದೇ ತಿನ್ನಲು ಹೋಗಿ ಡಿಕ್ಕಿ ಹೊಡೆದು ಬೀಳುತ್ತದೆ.

Advertisement

 

Advertisement

Advertisement

ಕೊನೆಗೆ ಶಾರ್ಕ್ ಸೈಲೆಂಟ್ ಆಗುತ್ತದೆ. ಸ್ವಲ್ಪ ಹೊತ್ತಾದ ಮೇಲೆ ಆ ಪ್ರೊಫೆಸರ್ ಭಾಗ ಮಾಡಿದ ಆ ಪಾರ್ಟಿಶನ್ ಅನ್ನು ನಿಧಾನವಾಗಿ ತೆಯುತ್ತಾರೆ. ಪಾರ್ಟಿಶನ್ ತೆಗೆದ ಮೇಲೆ ಸಣ್ಣ ಮೀನುಗಳು ಶಾರ್ಕ್ ಪಕ್ಕದಲ್ಲೇ ಓಡಾಡಿಕೊಂಡು ಇರುತ್ತವೆ. ಮೈ ಮೇಲೆ ಹರಿದಾಡಿದರೂ ಆ ಶಾರ್ಕ್’ನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಯಾಕೆಂದರೆ ಶಾರ್ಕ್ ಮನಸ್ಸಿನಲ್ಲಿ ಗೋಡೆ ಕಟ್ಟಿಕೊಂಡಿರುತ್ತದೆ “ನಾನು ಸಣ್ಣ ಮೀನುಗಳನ್ನು ತಿನ್ನಲು ಹೋದರೆ ಆ ಪಾರ್ಟಿಶನ್ ಅಡ್ಡಿಯಾಗಿ ನಾನು ಬೀಳುತ್ತೇನೆ ಎಂದು ಭಾವಿಸುತ್ತದೆ. ಆದ್ದರಿಂದ ಶಾರ್ಕ್ ಮೇಲೆ ಸಣ್ಣ ಮೀನುಗಳು ಹರಿದರೂ ಅದು ತಿನ್ನುವುದಿಲ್ಲ”. ಇದನ್ನು ಹೇಳಲು ಕಾರಣ ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಹೊರಡುತ್ತೇವೆ.ಆದರೆ ಅದಕ್ಕೆ ಅಡೆತಡೆ ಇರುತ್ತವೆ.

Advertisement

ಫೈನಾನ್ಶಿಯಲ್ ಫ್ರೀಡಂ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಶ್ರೀಮಂತಿಕೆಯ ಪ್ರಯಾಣ ಶುರು ಮಾಡಿ. ಡೌನ್‌ಲೋಡ್ ಮಾಡಲು ಡಿಸ್ಕ್ರಿಪ್ಷನ್ ಬಾಕ್ಸ್ ನಲ್ಲಿರುವ ಲಿಂಕ್ ಕ್ಲಿಕ್ ಮಾಡಿ  https://indianmoney.com/ffa/FmCuN6axIk

ಸ್ವತಃ ತಮ್ಮ ಜೀವನದ ಉದಾಹರಣೆ ಕೊಟ್ಟಿಕೊಂಡಿರುವ ಸಿ.ಎಸ್.ಸುಧೀರ್ ಅವರು “ ನನ್ನದು ಚಿಕ್ಕ ಹಳ್ಳಿ. ನಾನು 5-6 ನೇ ತರಗತಿಯಲ್ಲಿದ್ದಾಗ ನಮ್ಮ ಹಳ್ಳಿಗೆ ವಿದ್ಯುತ್ ಸಂಪರ್ಕ ಬಂತು. ಓದಿದವರ ಸಂಖ್ಯೆಯೂ ಕಡಿಮೆ.ದೊಡ್ಡದಾಗಿ ಯೋಚಿಸುವವರ ಸಂಖ್ಯೆಯೂ ಕಡಿಮೆ. ನಾನು ಅಲ್ಲಿಂದ ಹೊರಬರಬೇಕಾದರೆ ಈ ತರಹದ ಗೋಡೆಗಳನ್ನು ಒಡೆದು ಹೊರಬರಬೇಕಿತ್ತು. ಉದಾಹರಣೆಗೆ ನಮ್ಮ ಅಪ್ಪ ಏನೋ ಮಾಡಲು ಪ್ರಯತ್ನಿಸಿರುತ್ತಾರೆ. ಆದರೆ ಅದು ಅವರ ಕೈಯ್ಯಲ್ಲಿ ಮಾಡಲಿಕ್ಕೆ ಆಗಿರುವುದಿಲ್ಲ. ಅವರ ಆಗುವುದಿಲ್ಲ ಎಂಬ ಗೋಡೆಯನ್ನೇ ನಮಗೂ ಕಟ್ಟಿರುತ್ತಾರೆ. ಅಪ್ಪ ಅಂತಲೇ ಅಲ್ಲ, ಅಣ್ಣ, ಅಕ್ಕ, ತಂಗಿ , ಅಮ್ಮ ಹೀಗೆ ಪ್ರತಿಯೊಬ್ಬರು ಏನೋ ಒಂದು ಪ್ರಯತ್ನ ಮಾಡುತ್ತಿರುತ್ತಾರೆ. ಅದರಲ್ಲಿ ಅವರು ಯಶಸ್ವಿ ಕಾಣದಿದ್ದರೆ ನಮ್ಮ ತಲೆಯಲ್ಲಿ ಅದೇ ಗೋಡೆಯನ್ನು ಕಟ್ಟಿಬಿಡುತ್ತಾರೆ. ಇದು ಆಗಲ್ಲ, ಅದು ಆಗಲ್ಲ, ಅದು ತಪ್ಪು, ಇದು ಸರಿ ಹೀಗೆ ಈ ಎಲ್ಲಾ ತರಹದ ಗೋಡೆಗಳನ್ನು ಕಟ್ಟುತ್ತಾರೆ.

ಆದರೆ ನೀವು ಗೆಲ್ಲಬೇಕೆಂದರೆ ಆ ಎಲ್ಲಾ ಗೋಡೆಗಳನ್ನು ಒಡೆಯಬೇಕು. ಗೋಡೆಗಳನ್ನಿಟ್ಟುಕೊಂಡು ಜೀವನ ಮಾಡಿದರೆ ಗೆಲುವು ಕನಸಾಗುತ್ತದೆ. ಯಶಸ್ಸು ನಿಮ್ಮದಾಗಬೇಕಾದರೆ ಆ ಗೋಡೆಗಳನ್ನು ಒಡೆದು ಒಮ್ಮೆ ಪ್ರಪಂಚ ನೋಡಿ. ನಾನು ಕೂಡ ಗೋಡೆಗಳನ್ನು ಒಡೆದ ಮೇಲೆ ದೊಡ್ಡ ದೊಡ್ಡ ಅವಕಾಶಗಳು ಕಣ್ಣಿಗೆ ಕಂಡವು. ನಾನು ಮಾತ್ರವಲ್ಲ, ಎಷ್ಟೋ ಸಾಧಕರನ್ನು ಭೇಟಿಯಾದಗಲೂ ಅವರಿಂದ ಬಂದ ಉತ್ತರ ಒಂದೇ ಅದು “ನಾನು ಊರು ಬಿಟ್ಟು ಬಂದ ಮೇಲೆ ಒಳ್ಳೆದಾಯಿತು” ಎಂದು. ಮೊನ್ನೆ ರಾಜಕಾರಣಿ ಮುರುಗೇಶ್ ನಿರಾಣಿ ಸಂದರ್ಶನ ನೋಡುತ್ತಿದ್ದೆ. ಅವರು ಕಬ್ಬು ಬೆಳೆದಿದ್ದರಂತೆ. ಆ ಕಬ್ಬನ್ನು ಶುಗರ್ ಫ್ಯಾಕ್ಟರಿಗೆ ಕೊಡಲು ಹೋದಾಗ ಬೇಡ ಅಂದ್ರಂತೆ. ಶಿಫಾರಸ್ಸು ಮಾಡಿರುವ ಪತ್ರ ಕೊಟ್ಟರೂ ಅದನ್ನು ಅವರ ಎದುರು ಹರಿದರಂತೆ. ಆಗ ಅವರು ಅವರ ತಂದೆಯ ಬಳಿ ಹೋಗಿ. ನಮ್ಮದೇ 500 ಎಕರೆ ಜಮೀನಿದೆ. ನಾವೇ ಶುಗರ್ ಫ್ಯಾಕ್ಟರಿ ಮಾಡೋಣ ಎಂದಾಗ ತಂದೆ ನಿನಗೆ ಕಾರು ಬೇಕಾದ್ರೆ ತಗೊ, ಮತ್ತೇನಾದ್ರೂ ಬೇಕಾದ್ರೆ ತಗೊ. ಆದರೆ ಈ ಶುಗರ್ ಫ್ಯಾಕ್ಟರಿ ಮಾಡೋದು ಬೇಡ. ಮಾಡಲೇಬೇಕು ಅಂದ್ರೆ ಹೊರಗಡೆ ಹೋಗು ಅಂದರಂತೆ. ಇವರು ಒಂದು ವೇಳೆ ಅಪ್ಪನ ತಲೆಯಲ್ಲಿದ್ದ ಆ ಬೇಡ ಎಂಬ ಗೋಡೆಯನ್ನು ಒಡೆದು ಹೊರಬರದಿದ್ದರೆ ಇಂದು ವರ್ಷಕ್ಕೆ 3 ಸಾವಿರ ಕೋಟಿ ವಹಿವಾಟು ಮಾಡುವ ಆ ಶುಗರ್ ಫ್ಯಾಕ್ಟರಿ, ಸಿಮೆಂಟ್ ಫ್ಯಾಕ್ಟರಿ ಹೀಗೆ ಅನೇಕ ಫ್ಯಾಕ್ಟರಿಗಳನ್ನು ತೆರೆಯುವುದಕ್ಕೆ ಆಗುತ್ತಿರಲಿಲ್ಲ. ಇದು ಹೇಗೆ ಸಾಧ್ಯವಾಯಿತು ಅಂದ್ರೆ ಅವತ್ತು, ಅಪ್ಪ ಗದರಿದ ಕೂಡಲೇ ಸುಮ್ಮನಾಗದೆ, ಬಾಡಿಗೆ ಮನೆ ಮಾಡಿ, ಜೀವನ ಮಾಡಿ ಸಾಧನೆ ಮಾಡಿದ್ರು.


ಸಾಧಕ ವಿಜಯ್ ಸಂಕೇಶ್ವರ್ ಅವರ ಕಥೆಯೂ ಅಷ್ಟೇ. ಹೀಗೆ ಪ್ರತಿಯೊಬ್ಬ ಸಾಧಕನು ಮನೆ ಬಿಟ್ಟು ಬಂದು ಯಶಸ್ಸು ಗಳಿಸಿರುವುದನ್ನು ನೀವು ನೋಡಿರಬಹುದು. ಧೀರೂ ಬಾಯಿ ಅಂಬಾನಿ ಕಥೆಯೂ ಅಷ್ಟೇ. ಇವರ ತಂದೆ ಸ್ಕೂಲ್ ಟೀಚರ್. ಆದರೆ ಅಂಬಾನಿ ಇಮನ್ ದೇಶಕ್ಕೆ ಪೆಟ್ರೋಲ್ ಬ್ಯಾಂಕ್ ಅಟೆಂಡೆಂಟ್ ಆಗಿ ಹೋಗ್ತಾರೆ. ಯಾಕಂದ್ರೆ ಇವರಿಗೆ ಓದು ಬರಹ ತಲೆಗೆ ಹತ್ತುವುದಿಲ್ಲ. ಆಮೇಲೆ ಇವರ ಮದುವೆಯಾಗುತ್ತದೆ. ಆ ನಂತರ ಹೆಂಡತಿ ಕರೆದುಕೊಂಡು ಏಕಾಏಕಿ ಬಾಂಬೆಗೆ ಗೋಗುತ್ತಾರೆ. ಈಗ ಅವರು ಏನಾಗಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತಿದೆ.

ಫೈನಾನ್ಶಿಯಲ್ ಫ್ರೀಡಂ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಶ್ರೀಮಂತಿಕೆಯ ಪ್ರಯಾಣ ಶುರು ಮಾಡಿ. ಡೌನ್‌ಲೋಡ್ ಮಾಡಲು ಡಿಸ್ಕ್ರಿಪ್ಷನ್ ಬಾಕ್ಸ್ ನಲ್ಲಿರುವ ಲಿಂಕ್ ಕ್ಲಿಕ್ ಮಾಡಿ  https://indianmoney.com/ffa/FmCuN6axIk

ಹೀಗೆ ಗೋಡೆಗಳನ್ನು ಒಡೆದುಹಾಕಿದವರೆಲ್ಲಾ ಮುಂದೆ ಬಂದಿದ್ದಾರೆ. ನೀವು ಕೂಡ ಮುಂದೆ ಬರಬೇಕೆಂದರೆ ನಿಮ್ಮ ತಲೆಯಲ್ಲಿ ಆಗಲ್ಲ ಎನ್ನುವ ಗೋಡೆಯನ್ನು ತೆಗೆದು ಹಾಕಿ. ಅಂದುಕೊಂಡಿದ್ದೆಲ್ಲಾ ಸಾಧನೆ ಮಾಡಬಹುದು. ನಾನು ಕೂಡ ಫೈನಾನ್ಷಿಯಲ್ ಫ್ರೀಡಂ ಆಪ್ ಶುರು ಮಾಡಿದ್ದೇ ಈ ಸಲುವಾಗಿ. ಜನರ ತಲೆಯಲ್ಲಿರುವ ಗೋಡೆಗಳನ್ನು ಒಡೆದು ಹಾಕಿ ಅವರಿಗೆ ಹೊಸ ಹೊಸ ಅವಕಾಶಗಳನ್ನು ಮಾಡಿಕೊಡಬೇಕು. ಜೀವನ ಕಟ್ಟಿಕೊಳ್ಳುವುದಕ್ಕೆ ಮಾರ್ಗಗಳನ್ನು ಹುಡುಕಿಕೊಡಬೇಕು. ಇದೆಲ್ಲಾ ಆಗಬೇಕು ಅಂದ್ರೆ ಬುದ್ಧಿವಂತರಾಗಬೇಕು, ಬುದ್ಧಿವಂತರಾದಾಗ ಖಂಡಿತ ಶ್ರೀಮಂತರಾಗುತ್ತೀರಿ”.

ಫೈನಾನ್ಷಿಯಲ್ ಫ್ರೀಡಂ ಆಪ್ ಸುಮಾರು 28 ಕೋಚ್’ಗಳನ್ನ ರೆಡಿ ಮಾಡಿದ್ದು, ಹೂಡಿಕೆ, ಕರಿಯರ್ ಬಿಲ್ಡ್ ಹೀಗೆ ಪ್ರತಿಯೊಂದ ಬಗ್ಗೆ ಮಾಹಿತಿ ಇರುತ್ತದೆ. ನೀವು ರೈತನಾಗಿದ್ದರೂ ಸಹ ಆ ಕ್ಷೇತ್ರದ ಬಗ್ಗೆ ಮಾಹಿತಿ ಕೊಡಲಾಗುತ್ತದೆ. ನೀವು ಕೂಡ ಬುದ್ಧಿವಂತರಾಗಿ, ನಿಮ್ಮ ಶ್ರೀಮಂತಿಕೆಯ ಪಯಣ ಶುರು ಮಾಡಲೂ ನಿಮ್ಮ ಹಣಕಾಸಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈಗಲೇ ಇಂಡಿಯನ್ ಮನಿ.ಕಾಂ ಯೂಟ್ಯೂಬ್ ಗೆ ಸಬ್ ಸ್ಕ್ರೈಬ್ ಮಾಡಿ. ಫೈನಾನ್ಶಿಯಲ್ ಫ್ರೀಡಂ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಶ್ರೀಮಂತಿಕೆಯ ಪ್ರಯಾಣ ಶುರು ಮಾಡಿ. ಡೌನ್‌ಲೋಡ್ ಮಾಡಲು ಡಿಸ್ಕ್ರಿಪ್ಷನ್ ಬಾಕ್ಸ್ ನಲ್ಲಿರುವ ಲಿಂಕ್ ಕ್ಲಿಕ್ ಮಾಡಿ  https://indianmoney.com/ffa/FmCuN6axIk  ಡಿಸ್ಕ್ರಿಪ್ಷನ್ ಬಾಕ್ಸ್’ನಲ್ಲಿ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ. ಫೈನಾನ್ಷಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ.
All Rights reserved Namma Kannada Cinema.

Advertisement
Share this on...