ಸುಹಾಸಿನಿ ತಂಗಿ ಕೂಡ ಕನ್ನಡದ ಖ್ಯಾತ ನಟಿ ! ತುಂಬಾ ಜನಕ್ಕೆ ಈ ವಿಷಯ ಗೊತ್ತಿಲ್ಲ..

in ಮನರಂಜನೆ/ಸಿನಿಮಾ 423 views

ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ನಟರುಗಳ ಜತೆ ಅಭಿನಯಿಸಿ ಸೈ ಎನ್ನಿಸಿಕೊಂಡ  ನಟಿ  ಸುಹಾಸಿನಿ. ದಕ್ಷಿಣ ಭಾರತದ ಖ್ಯಾತ ನಟಿ. ತಮ್ಮ ನೈಜವಾದ ನಟನೆಯಿಂದಲೇ ಅಭಿಮಾನಿಗಳ ಮನಸ್ಸನ್ನು ಗೆದ್ದವರು. 1980 ರಲ್ಲಿ ತಮಿಳು ಸಿನಿಮಾದ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದರು . 15  ಆಗಸ್ಟ್  1961 ರಲ್ಲಿ ತಮಿಳುನಾಡಿನ ಚೆನ್ನೈ ನಲ್ಲಿ ಜನಿಸಿದರು. ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಾಜೇಂದ್ರಸಿಂಗ್ ಬಾಬು ಅವರ ನಿರ್ದೇಶನದಲ್ಲಿ ತೆರೆ ಕಂಡ ಕನ್ನಡದ ಅತ್ಯುತ್ತಮ ಚಿತ್ರವಾದ ಬಂಧನ ಸಿನಿಮಾದಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಡಾಕ್ಟರ್ ವಿಷ್ಣುವರ್ಧನ್ ಅವರ ಜೊತೆ ಮುತ್ತಿನ ಹಾರ ಸಿನಿಮಾದಲ್ಲಿ ಅತ್ಯುತ್ತಮವಾಗಿಅಭಿನಯಿಸಿದ್ದಾರೆ. ಬೆಂಕಿಯಲ್ಲಿ ಅರಳಿದ ಹೂವು, ಹಿಮಪಾತ ಯಾರಿಗೆ ಸಾಲತ್ತೆ ಸಂಬಳ,  ಮಾತಾಡ್ ಮಾತಾಡ್ ಮಲ್ಲಿಗೆ, ಅಮೃತವರ್ಷಿಣಿ ಇತ್ತೀಚೆಗಷ್ಟೇ ಬಿಡುಗಡೆಯಾದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಭಿನಯದ ಅಂಬಿ ನಿನಗೆ ವಯಸ್ಸಾಯ್ತೋ ಸಿನಿಮಾದಲ್ಲೂ ಕೂಡ ನಟಿಸಿದ್ದಾರೆ. ಅದರಲ್ಲೂ ಸುಪ್ರಭಾತ, ಅಮೃತವರ್ಷಿಣಿ, ಬಂಧನ ಸಿನಿಮಾಗಳು ಅವಿಸ್ಮರಣೀಯ ದೃಶ್ಯ ಕಾವ್ಯಗಳಾಗಿ ಹೊರಹೊಮ್ಮಿದವು . “ಸಿಂಧು ಭೈರವಿ”  ಎಂಬ ಚಿತ್ರದಲ್ಲಿ ಅವರ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಬಂದಿದೆ.

Advertisement

Advertisement

ಸುಹಾಸಿನಿ ಅವರು ನಟಿ,  ನಿರ್ದೇಶಕಿ,  ನಿರ್ಮಾಪಕಿ,  ಬರಹಗಾರ್ತಿ ಕೂಡ ಆಗಿದ್ದು “ಇಂದಿರಾ”  ಎಂಬ ಚಿತ್ರವನ್ನು ಮತ್ತು ಮನ್ “ಪೆಣ್” ಎಂಬ ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದಾರೆ. ದಕ್ಷಿಣ ಭಾರತದ ಕಲಾವಿದರಾದ ವಿಷ್ಣುವರ್ಧನ್, ರಜನಿಕಾಂತ್, ಅಂಬರೀಶ್ ,ರಮೇಶ್ ಅರವಿಂದ್,  ಮೋಹನ್ ಲಾಲ್, ಅನಂತ್ ನಾಗ್,  ಮುಮ್ಮುಟಿ,  ಚಿರಂಜೀವಿ  ಇಂತಹ ಮುಂತಾದ ಪ್ರಸಿದ್ಧ ನಟರುಗಳ ಜತೆ ಅಭಿನಯಿಸಿದ್ದಾರೆ ಅಲ್ಲದೆ ಎಲ್ಲ ಪ್ರಸಿದ್ಧ ನಿರ್ದೇಶಕರುಗಳ ಜೊತೆ ಕೆಲಸ ಮಾಡಿದ್ದಾರೆ .1988 ರಲ್ಲಿ ದಕ್ಷಿಣ ಭಾರತದ ಖ್ಯಾತ ಚಲನಚಿತ್ರ  ನಿರ್ದೇಶಕ ಮಣಿರತ್ನಂ ಅವರ ಜತೆ ಮದುವೆಯಾದರು.

Advertisement

Advertisement

ಉತ್ತಮ ನಿರ್ದೇಶಕ ಮಣಿರತ್ನಂ ಅವರೊಂದಿಗೆ ಚಿತ್ರಗಳ ನಿರ್ಮಾಣದಲ್ಲೂ ಕೂಡ ಸಹ ಭಾಗಿಯಾಗಿದ್ದಾರೆ . ಮುಕ್ತ ಚಿಂತನೆ , ನೇರ ನುಡಿ , ಸ್ನೇಹಶೀಲ ಪ್ರವೃತ್ತಿ,  ಸೃಜನಶೀಲ,  ಚಟುವಟಿಕೆಯಿಂದ ಸುಹಾಸಿನಿ ಇಂದಿಗೂ ಜನರ ಮೆಚ್ಚಿನ ನಟಿಯಾಗಿದ್ದಾರೆ.

ಸುಹಾಸಿನಿಯಂತೆ ಅವರ ತಂಗಿ ಕೂಡ ಒಬ್ಬ ಫೇಮಸ್ ನಟಿ ಎಂಬುದು ಯಾರಿಗೂ ಸರಿಯಾಗಿ ಗೊತ್ತಿಲ್ಲ. ಸುಹಾಸಿನಿ ಅವರ ಚಿಕ್ಕಪ್ಪನ ಮಗಳು ಅಂದರೆ ಕಮಲಾ ಹಾಸನ್  ಸುಹಾಸಿನಿಗೆ ಚಿಕ್ಕಪ್ಪ ನಾಗಬೇಕು. ಕಮಲ್ ಹಾಸನ್ ಅವರ ಸಹೋದರನಾದ ಚಂದ್ರ ಹಾಸನ್ ರವರ ಮಗಳು ಅನು ಹಾಸನ್.

ಈ ಅನು ಹಾಸನ್ ತಮಿಳಿನಲ್ಲಿ ದೊಡ್ಡ ನಟಿ ಮತ್ತು ಖ್ಯಾತ ನಿರೂಪಕಿ ಕೂಡ ಹೌದು . ಕಿರುತೆರೆಯ ಮೂಲಕ ನಟನೆಯನ್ನು ಆರಂಭಿಸಿ ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಇವರು ಸುಮಾರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಅಲ್ಲದೇ ಕನ್ನಡದ ಗೋಲ್ಮಾಲ್ ಮತ್ತು ಗೌರಮ್ಮ ಎಂಬ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅನು ಹಾಸನ್ ಅವರು ಅಕ್ಕನಂತೆ ನಾನೂ ಒಬ್ಬ ನಟಿ ಎಂಬುದನ್ನು ನಿರೂಪಿಸಿದ್ದಾರೆ. ಸುಹಾಸಿನಿ ಮತ್ತು ಅನು ಹಾಸನ್ ಅವರ ಅಭಿನಯ ನಿಮಗೆ ಇಷ್ಟವಾಗಿದೆಯಾ ತಿಳಿಸಿ.

Advertisement
Share this on...