ಸುಮಲತಾ ಅವರ ತಂದೆ ಆಗಿನ ಕಾಲದ ದೊಡ್ಡ ಸ್ಟಾರ್ ನಟ..! ಯಾರು ಗೊತ್ತಾ…?

in ಕನ್ನಡ ಮಾಹಿತಿ 98 views

ಖ್ಯಾತ ಚಿತ್ರ ನಟ ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ರವರ ಪತ್ನಿ ಸುಮಲತಾ. ಸುಮಲತಾ ಅಂಬರೀಶ್ ರವರು ಸಹ ಖ್ಯಾತ ನಟಿ ಹಾಗೂ ಮಂಡ್ಯ ಕ್ಷೇತ್ರದ ಹಾಲಿ ಸಂಸದೆ. ಇದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಸುಮಲತಾರವರ ತಂದೆ ಕೂಡ ಚಿತ್ರರಂಗದ ದೊಡ್ಡ ಸ್ಟಾರ್ ಆಗಿದ್ದವರು ಎಂಬುದು ನಿಮಗೆ ಗೊತ್ತೆ?

Advertisement

 

Advertisement


ಸುಮಲತಾ ಅಂಬರೀಶ್ ಅವರ ಕೌಟುಂಬಿಕ ಹಿನ್ನೆಲೆಯನ್ನು ಹುಡುಕಿದಾಗ ಕನ್ನಡ ಚಿತ್ರರಂಗದ ರೆಬಲ್ ಸ್ಟಾರ್ ಖ್ಯಾತಿಯ ಅಂಬರೀಶ್ ರವರ ಧರ್ಮಪತ್ನಿ ಹಾಗೂ ಇವರಿಬ್ಬರಿಗೆ ಅಭಿಷೇಕ್ ಎಂಬ ಮಗನಿದ್ದಾನೆ ಎಂಬ ಪ್ರಾಥಮಿಕ ಮಾಹಿತಿ ಅಷ್ಟೇ ಸಿಗುತ್ತದೆ. ಸುಮಲತಾ ಮೂಲತಃ ಆಂಧ್ರದವರು ಎನ್ನುವುದು ಬಿಟ್ಟರೆ ಅವರ ತಂದೆ-ತಾಯಿ ಹಾಗೂ ಅವರ ಕೌಟುಂಬಿಕ ಹಿನ್ನೆಲೆ ಏನು ಸಿಗುವುದಿಲ್ಲ. ಕುತೂಹಲಕಾರಿ ವಿಚಾರವೆನೆಂದರೆ ಸುಮಲತಾರವರ ತಂದೆ ಸಿನಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದರು. ಆಗಿನ ಕಾಲಕ್ಕೆ ಅವರು ಕೂಡ ದೊಡ್ಡ ಸ್ಟಾರ್ ಆಗಿದ್ದರು. ತಮಿಳು, ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ ವಿ. ಮದನ್ ಮೋಹನ್ ತುಂಬಾ ಬೇಡಿಕೆಯುಳ್ಳ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು. ಅಷ್ಟಕ್ಕೂ ಯಾರು ಈ ಮದನ್ ಮೋಹನ್? ಯಾವ ಕೆಲಸ ಮಾಡುತ್ತಿದ್ದರು?

Advertisement

 

Advertisement


ವಿ.ಮದನ್ ಮೋಹನ್ ಮತ್ತು ರೂಪಾ ದಂಪತಿಯ ಐದು ಮಕ್ಕಳಲ್ಲಿ ನಾಲ್ಕನೆಯವರು ಸುಮಲತಾ. ಚೆನ್ನೈನಲ್ಲಿ ಹುಟ್ಟಿದ ಇವರು ಮುಂಬೈನಲ್ಲಿ ನೆಲೆಸಿದ್ದರು. ರೇಣುಕಾ, ರೋಹಿಣಿ ಅಕ್ಕಂದಿರು ಅಣ್ಣ ರಾಜೇಂದ್ರಪ್ರಸಾದ್ ತಂಗಿ ಕೃಷ್ಣಪ್ರಿಯ. ಇಂದಿನ vfx ಹಾಗೂ ಸೀರಿ ಕೆಲಸಗಳನ್ನು ಆಗ ಸ್ಪೆಷಲ್ ಎಫೆಕ್ಟ್ ಎನ್ನುತ್ತಿದ್ದರು. ಈ ಮದನ್ ಮೋಹನ್ ರವರು ಯು.ಕೆ ದೇಶದಲ್ಲಿ ತರಬೇತಿ ಪಡೆದು ಬಂದಿದ್ದ ಭಾರತದ ಏಕೈಕ ವ್ಯಕ್ತಿಯಾಗಿದ್ದರು. ಪ್ರಸಾದ್ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದರು. ಹಿಂದಿ, ತಮಿಳು ಅನೇಕ ಚಿತ್ರಗಳಲ್ಲಿ ಟೈಟಲ್ ಹಾಗೂ ಸ್ಪೆಷಲ್ ಎಫೆಕ್ಟ್ಸ್ ಮಾಡುತ್ತಿದ್ದರು. ಸುಮಲತಾರವರಿಗೆ ಏಳು ವರ್ಷವಿದ್ದಾಗ ಅವರ ತಂದೆ ತೀರಿಕೊಂಡರು.

 

ಮದನ್ ಮೋಹನ್ ರವರು ಮಕ್ಕಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕುಟುಂಬ ಮತ್ತು ಮಕ್ಕಳಿಗೆ ಹೆಚ್ಚು ಸಮಯವನ್ನು ಕೊಡುತ್ತಿದ್ದರು. ಎಷ್ಟೇ ಕೆಲಸವಿದ್ದರೂ ಮದನ್ ಮೋಹನ್ ರವರು ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದರು. ಮದನ್ ಮೋಹನ್ ರವರು ಫೋಟೋಗ್ರಫಿ ಹಾಗೂ ಸಂಗೀತದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಇನ್ನೂ ಆ ಕಾಲದಲ್ಲಿ ಭಾರತದಲ್ಲಿ ಸ್ಪೆಷಲ್ ಎಫೆಕ್ಟ್ಸ್ ತಂತ್ರಜ್ಞರು ಯಾರು ಇರಲಿಲ್ಲ ಆದ್ದರಿಂದ ಸುಮಲತಾರವರ ತಂದೆ ಮದನ್ ಮೋಹನ್ ರವರು ಆ ಕಾಲದಲ್ಲಿ ಸ್ಪೆಷಲ್ ಎಫೆಕ್ಟ್ ನಲ್ಲಿ ದೊಡ್ಡ ಸ್ಟಾರ್ ರಂತೆ ಚಿತ್ರರಂಗದಲ್ಲಿ ಹೆಸರು ಮಾಡಿದ್ದರು.

– ಸುಷ್ಮಿತಾ

Advertisement
Share this on...