ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸುಮನಾ ಕಿತ್ತೂರು…ಪತಿ ಯಾರು ಗೊತ್ತಾ…?

in ಮನರಂಜನೆ 29 views

ಕನ್ನಡ ಚಿತ್ರರಂಗ ಕಂಡ ಕೆಲವೇ ಕೆಲವು ಮಹಿಳಾ ನಿರ್ದೇಶಕಿಯರಲ್ಲಿ ಸುಮನಾ ಕಿತ್ತೂರು ಕೂಡಾ ಒಬ್ಬರು. ಚೇತನ್ ಅಭಿನಯದ ‘ಆ ದಿನಗಳು’ ಚಿತ್ರದ ಮೂಲಕ ಸಹಾಯಕ ನಿರ್ದೇಶಕಿಯಾಗಿ ಆ್ಯಕ್ಷನ್-ಕಟ್ ಕೆಲಸ ಆರಂಭಿಸಿದ ಸುಮನಾ ಏಪ್ರಿಲ್​ 17 ರಂದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ವಿಷಯ ಎಲ್ಲರಿಗೂ ತಡವಾಗಿ ತಿಳಿದುಬಂದಿದೆ.ಪಾಂಡಿಚೆರಿಯಲ್ಲಿ ಸಾಫ್ಟ್​​ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಾ ಅಲ್ಲೇ ನೆಲೆಸಿರುವ ಶ್ರೀನಿವಾಸ್ ಎಂಬುವವರನ್ನು ಸುಮನಾ ವರಿಸಿದ್ದಾರೆ. ಸುಮನಾ ಕೂಡಾ ಕೆಲವು ವರ್ಷಗಳಿಂದ ಪಾಂಡಿಚೆರಿಯಲ್ಲಿ ವಾಸವಿದ್ದರು. ಶ್ರೀನಿವಾಸ್ ಮೂಲತ: ಶಿವಮೊಗ್ಗದವರು. ಕುಪ್ಪಳ್ಳಿಗೆ ಬಂದು ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎಂಬುದು ಸುಮನಾ ಅವರ ಆಸೆಯಾಗಿತ್ತಂತೆ. ಆದರೆ ಲಾಕ್​​​ಡೌನ್​​ನಿಂದ ಅದು ಸಾಧ್ಯವಾಗಿರಲಿಲ್ಲ. ಆದ್ದರಿಂದ ಪಾಂಡಿಚೆರಿಯಲ್ಲಿರುವ ಶ್ರೀನಿವಾಸ್ ಅವರ ಮನೆಯಲ್ಲೇ ಈ ಮದುವೆ ಸರಳವಾಗಿ ನೆರವೇರಿದೆ.

Advertisement

 

Advertisement

Advertisement

 

Advertisement

ಮೈಸೂರಿನ ಪಿರಿಯಾಪಟ್ಟಣದ ಕಿತ್ತೂರು ಎಂಬ ಹಳ್ಳಿಯಲ್ಲಿ ಸುಮನಾ ಜನಿಸಿದರು. ಅವರ ತಂದೆ ಅದೇ ಹಳ್ಳಿಯಲ್ಲಿ ಸಿನಿಮಾ ಟೆಂಟ್ ನಡೆಸುತ್ತಿದ್ದರು. ಬಹುಶ: ಇದು ಸುಮನಾ ಅವರಲ್ಲಿ ಚಿತ್ರರಂಗದ ಬಗ್ಗೆ ಆಸಕ್ತಿ ಬೆಳೆಯಲು ಕಾರಣವಿರಬಹುದು. ಪದವಿ ನಂತರ ಪತ್ರಕರ್ತ, ನಿರ್ದೇಶಕ ಅಗ್ನಿ ಶ್ರೀಧರ್ ಅವರ ಸಹಾಯದಿಂದ ಬೆಂಗಳೂರಿಗೆ ಬಂದು ಕೆಲವು ದಿನಗಳ ಕಾಲ ಪತ್ರಕರ್ತೆಯಾಗಿ ಕೆಲಸ ಮಾಡಿದರು. ‘ಆ ದಿನಗಳು’ ಚಿತ್ರದಿಂದ ಸಹಾಯಕ ನಿರ್ದೇಶಕಿಯಾಗಿ ಕೆಲಸ ಆರಂಭಿಸಿದ್ದ ಸುಮನಾ ನಂತರ ದುನಿಯಾ ವಿಜಯ್ ಅಭಿನಯದ ‘ಸ್ಲಂಬಾಲಾ’ ಚಿತ್ರದಿಂದ ಸ್ವತಂತ್ಯ್ರ ನಿರ್ದೇಶಕಿಯಾದರು. ನಂತರ ‘ಕಳ್ಳರ ಸಂತೆ’, ‘ಎದೆಗಾರಿಕೆ’, ‘ಕಿರಗೂರಿನ ಗಯ್ಯಾಳಿಗಳು’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

 

 

ಕೆಲವೇ ದಿನಗಳಲ್ಲಿ ಪಾಂಡಿಚೆರಿಯಲ್ಲಿರುವ ಸುಮನಾ ಪತಿ ಅವರ ಕಾಂಟ್ಯ್ರಾಕ್ಟ್​ ಮುಗಿಯಲಿದೆಯಂತೆ. ನಂತರ ಮೈಸೂರಿಗೆ ಬಂದು ನೆಲೆಸುವ ಆಸೆ ವ್ಯಕ್ತಪಡಿಸಿದ್ದಾರೆ ದಂಪತಿ. ಸುಮನಾ ಅವರ ಮದುವೆ ವಿಚಾರ ತಿಳಿದ ಸಿನಿಮಾ ಗಣ್ಯರು, ಅಭಿಮಾನಿಗಳು ಅವರಿಗೆ ಶುಭ ಕೋರಿದ್ದಾರೆ. ಸುಮನಾ ವೈವಾಹಿಕ ಜೀವನ ಸಂತೋಷವಾಗಿರಲಿ, ಕನ್ನಡ ಚಿತ್ರರಂಗಕ್ಕೆ ಹೆಚ್ಚಿನ ಚಿತ್ರಗಳನ್ನು ನೀಡುವಂತಾಗಲಿ ಎಂದು ಹಾರೈಸೋಣ.

Advertisement
Share this on...