ನಟಿ ಸುಮಿತ್ರ ಇಬ್ಬರು ಮಕ್ಕಳು ಕೂಡ ಕನ್ನಡದ ನಟಿಯರು ಯಾರು ಗೊತ್ತಾ…?

in ಮನರಂಜನೆ/ಸಿನಿಮಾ 79 views

ಸುಮಿತ್ರ ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಜನಪ್ರಿಯ ನಟಿ. 1972ರಲ್ಲಿ ತೆರೆಕಂಡ ಮಲೆಯಾಳಂ ಚಿತ್ರ ನಿರ್ತನಸಾಲ ಎಂಬ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ನಂತರ 1973ರಲ್ಲಿ ನಿರ್ಮಾಲೈಂ ಎಂಬ ಮಲಯಾಳಂ ಚಿತ್ರದ ಮೂಲಕ ನಾಯಕ ನಟಿಯಾದರು. ನಂತರ ಹಲವಾರು ಮಲಯಾಳಂ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ತೆಲುಗು, ತಮಿಳು, ಕನ್ನಡ ಈ ಎಲ್ಲಾ ಭಾಷೆಯ ಚಿತ್ರಗಳಲ್ಲಿ ಸುಮಿತ್ರ ನಟಿಸಿದ್ದರು. ಕನ್ನಡದಲ್ಲಿ 1976 ರಲ್ಲಿ ‘ಮುಗಿಯದ ಕಥೆ’ ಚಿತ್ರದ ಮೂಲಕ ಕನ್ನಡದ ಖ್ಯಾತ ನಟ ರಾಜೇಶ್ ರವರ ಜೊತೆ ನಾಯಕಿಯಾಗಿ ನಟಿಸಿದರು. 1980 ರಲ್ಲಿ ‘ಮಕ್ಕಳ ಸೈನ್ಯ’ ಚಿತ್ರದಲ್ಲಿ ವಿಷ್ಣುವರ್ಧನ್ ರವರ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ಜೈಜಗದೀಶ್, ಟೈಗರ್ ಪ್ರಭಾಕರ್, ಅಶೋಕ್ ಇನ್ನೂ ಮುಂತಾದ ಕನ್ನಡ ನಾಯಕ ನಟರ ಜೊತೆ ಸುಮಿತ್ರ ನಟಿಸಿದ್ದಾರೆ. ತಮಿಳಿನಲ್ಲಿ ಶಿವಾಜಿ ಗಣೇಶನ್, ರಜನಿಕಾಂತ್, ಕಮಲ ಹಾಸನ್ ಇನ್ನೂ ಮುಂತಾದ ನಾಯಕ ನಟರ ಜೊತೆ ನಟಿಸಿ ದಕ್ಷಿಣ ಭಾರತದ ಖ್ಯಾತ ನಟಿಯಾದರು.

Advertisement

Advertisement

ಕಾಲಾಂತರದಲ್ಲಿ ಸುಮಿತ್ರರವರು ಪೋಷಕ ನಟಿಯಾಗಿ ಗುರುತಿಸಿಕೊಂಡರು. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಈ ಎಲ್ಲಾ ಭಾಷೆಗಳಲ್ಲೂ ಪೋಷಕ ನಟಿಯಾಗಿ ನಟಿಸಿದ್ದಾರೆ. ವಿಷ್ಣುವರ್ಧನ್ ಹಾಗೂ ಕಮಲ ಹಾಸನ್ ರವರಿಗೆ ನಾಯಕಿಯಾಗಿ ಹಾಗೂ ನಂತರದಲ್ಲಿ ತಾಯಿಯಾಗಿ ಕೂಡ ಪಾತ್ರ ನಿರ್ವಹಿಸಿದ್ದಾರೆ.  ಕ್ರೇಜಿ಼ಸ್ಟಾರ್ ರವಿಚಂದ್ರನ್ ರವರ ರಾಮಾಚಾರಿ ಚಿತ್ರದಲ್ಲಿ ರವಿಚಂದ್ರನ್ ರವರಿಗೆ ತಾಯಿಯಾಗಿ ಅಮೋಘ ಅಭಿನಯ ನೀಡಿದ್ದರು. ಸುಮಿತ್ರರವರು ಕನ್ನಡದ ಖ್ಯಾತ ನಿರ್ದೇಶಕ ಡಿ. ರಾಜೇಂದ್ರ ಬಾಬುರವರ ಪತ್ನಿ. ಡಿ. ರಾಜೇಂದ್ರ ಬಾಬುರವರು 2013 ರಲ್ಲಿ ನಿಧನ ಹೊಂದಿದರು. ಡಿ. ರಾಜೇಂದ್ರ ಬಾಬುರವರ ಯುಗಪುರುಷ, ರಾಮಾಚಾರಿ, ಪ್ರೀತ್ಸೆ ಈ ರೀತಿಯಾಗಿ ಇನ್ನೂ ಮುಂತಾದ ಹಿಟ್ ಚಿತ್ರಗಳನ್ನು ಕನ್ನಡಕ್ಕೆ ನೀಡಿದ್ದಾರೆ.

Advertisement

Advertisement

ಇನ್ನು ಸುಮಿತ್ರ ಹಾಗೂ ಡಿ. ರಾಜೇಂದ್ರ ಬಾಬು ದಂಪತಿಗೆ ಉಮಾಶಂಕರಿ ಹಾಗೂ ನಕ್ಷತ್ರ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಇಬ್ಬರು ಸಹ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಚಿತ್ರಗಳಲ್ಲಿ ನಾಯಕಿ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಉಮಾಶಂಕರಿಯವರು ಕನ್ನಡದಲ್ಲಿ ಉಪ್ಪಿದಾದ MBBS ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಮುಖ್ಯ ಚಿತ್ರವಾಗಿದೆ. ನಕ್ಷತ್ರರವರು ಗೋಕುಲ, ಹರೇ ರಾಮ ಹರೇ ಕೃಷ್ಣ, ಫೇರ್ ಅಂಡ್ ಲವ್ಲಿ ಸೇರಿದಂತೆ ಇನ್ನು ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

– ಸುಷ್ಮಿತಾ

Advertisement
Share this on...