ನಟನಾಗಿ ಮಾತ್ರವಲ್ಲದೇ ಸಂಕಲನಕಾರ, ನಿರ್ದೇಶಕರಾಗಿಯೂ ಸಹ ಗುರುತಿಸಿಕೊಂಡಿದ್ದಾರೆ ನಾಗೇಂದ್ರ ಅರಸ್

in ಮನರಂಜನೆ/ಸಿನಿಮಾ 450 views

ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಹೀರೋಗಳಷ್ಟೇ ಹೆಸರು ಮಾಡಿದ ವಿಲನ್ ಗಳಲ್ಲಿ ನಟ ಸುಂದರ್ ಕೃಷ್ಣ ಅರಸ್ ಅವರು ಕೂಡ ಒಬ್ಬರು. ಕೇವಲ 52 ವರ್ಷ ಬದುಕಿದ್ದ ನಟ ಸುಂದರ್ ಕೃಷ್ಣ ಅರಸ್ ಚಿತ್ರರಂಗದಲ್ಲಿ ತಮ್ಮ ನಟನೆಯಲ್ಲಿ ಹೆಸರು ಮಾಡಿದ್ದು ಮಾತ್ರ ತುಂಬಾ ದೊಡ್ಡ ಮಟ್ಟದಲ್ಲಿ. ಸುಂದರ್ ಕೃಷ್ಣ ಅರಸ್ ಅವರ ತುಂಬಾ ಚಿಕ್ಕ ಬದುಕಿನಲ್ಲಿ ಅತಿ ದೊಡ್ಡ ಹೆಸರು ಮಾಡಿದ್ದರು ಈ ಖಳ ನಟ. ಅವರ ಸಂಭಾಷಣಾ ಶೈಲಿ ಅವರ ಕಂಠ ಅಂದಿನ ಜನರಿಗೆ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿತ್ತು. ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟ ಸುಂದರ್ ಕೃಷ್ಣ ಅರಸ್ ಅವರು ನಟಿಸಿ ಸಿನಿಮಾರಸಿಕರನ್ನು ರಂಜಿಸಿದರು. ಕೆರಳಿದ ಸರ್ಪ, ಸಂಘರ್ಷ, ಇನ್ಸ್ಪೆಕ್ಟರ್ ವಿಕ್ರಂ, ಸಂಯುಕ್ತ, ಧರ್ಮಯುದ್ಧ, ಅಂತ, ಇಬ್ಬನಿ ಕರಗಿತು, ಗೆಜ್ಜೆ ಪೂಜೆ, ಸೀತಾ ರಾಮು, ನ್ಯಾಯ ಎಲ್ಲಿದೆ, ಒಂದಾನೊಂದು ಕಾಲದಲ್ಲಿ, ಹುಲಿ ಹೆಬ್ಬುಲಿ, ಸಿಂಹದ ಮರಿ ಸೈನ್ಯ, ಪುಟಾಣಿ ಏಜೆಂಟ್ 123 ಸೇರಿದಂತೆ ಕನ್ನಡದಲ್ಲಿ 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟ ಸುಂದರ್ ಕೃಷ್ಣ ಅರಸ್ ಅವರು ಖಳ ನಟರಾಗಿ, ಪೋಷಕ ನಟರಾಗಿ ಅಭಿನಯಿಸಿದ್ದಾರೆ.

Advertisement

Advertisement

1978 ರಲ್ಲಿ ತೆರೆಕಂಡ ಒಂದಾನೊಂದು ಕಾಲದಲ್ಲಿ ಎಂಬ ಸಿನಿಮಾದಲ್ಲಿ ನಟ ಸುಂದರ್ ಕೃಷ್ಣ ಅರಸ್ ಅವರ ನಟನೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಹ ದೊರಕಿದೆ.
ಇನ್ನು ಸುಂದರ್ ಕೃಷ್ಣ ಅರಸ್ ಅವರ ಮಗ ಕೂಡ ಬಹುಮುಖ ಪ್ರತಿಭಾವಂತರು. ಅವರೇ ನಾಗೇಂದ್ರ ಅರಸ್. ನಾಗೇಂದ್ರ ಅರಸ್ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಖ್ಯಾತ ಹೆಸರನ್ನು ಗಳಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಸಂಕಲನಕಾರ ಆಗಿರುವ ನಾಗೇಂದ್ರ ಅರಸ್ ಅವರು ಕೆಲವು ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ ಹಾಗೂ ಕೆಲವು ಚಿತ್ರಗಳಲ್ಲಿಯೂ ಸಹ ನಾಗೇಂದ್ರ ಅರಸ್ ಅವರು ನಟಿಸಿದ್ದಾರೆ. 2008 ರಲ್ಲಿ ತೆರೆಕಂಡ ನವಗ್ರಹ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಯಲ್ಲಿ ಖಳ ನಟನಾಗಿ ಅಮೋಘವಾಗಿ ನಟಿಸಿದ್ದಾರೆ. ಈ ಸಿನಿಮಾ ಸೂಪರ್- ಡೂಪರ್ ಹಿಟ್ ಸಹ ಆಗಿತ್ತು.

Advertisement

ಗುನ್ನ, ರಾಮ-ಶಾಮ-ಭಾಮ, ಆ ದಿನಗಳು ಇನ್ನು ಮುಂತಾದ ಹಲವು ಸಿನಿಮಾಗಳಲ್ಲಿ ಸಂಕಲನಕಾರರಾಗಿ ಹಾಗೂ ಜಸ್ಟ್ ಲವ್, ರಾಕಿ, ಮೇ 1st, ವರ್ಧನ, ಒಂದು ಚಾನ್ಸ್ ಕೊಡಿ, ಶಂಭೋ ಮಹದೇವ ಇನ್ನೂ ಮುಂತಾದ ಸಿನಿಮಾಗಳಿಗೆ ನಿರ್ದೇಶನವನ್ನು ಸಹ ಮಾಡಿದ್ದಾರೆ. ನಾಗೇಂದ್ರ ಅರಸ್ ಅವರು ಕನ್ನಡ ಚಿತ್ರರಂಗದಲ್ಲೀ ಕೇವಲ ನಟನಾಗಿ ಮಾತ್ರವಲ್ಲದೇ ಸಂಕಲನಕಾರರಾಗಿ, ನಿರ್ದೇಶಕರಾಗಿಯೂ ಸಹ ಗುರುತಿಸಿಕೊಂಡಿದ್ದಾರೆ. ಇಂತಹ ಪ್ರತಿಭಾವಂತರಾದ ನಟ ನಾಗೇಂದ್ರ ಅರಸ್ ಅವರು ಕನ್ನಡ ಚಿತ್ರರಂಗದಲ್ಲಿ ಇನ್ನೂ ಹೆಚ್ಚು ಯಶಸ್ಸು, ಕೀರ್ತಿ ಗಳಿಸಲು ಎಂಬುದೇ ನಮ್ಮ ಆಶಯ.

Advertisement

– ಸುಷ್ಮಿತಾ

Advertisement
Share this on...