ದೇವರು ಸುಂದರವಾದ ಮಗಳನ್ನ ಕೊಟ್ಟ, ಸುಂದರವಾದ ಜೀವನ ಕೊಡಲಿಲ್ಲ: ಸುಂದರ್ ರಾಜ್

in ಮನರಂಜನೆ/ಸಿನಿಮಾ 3,586 views

ಬೆಂಗಳೂರು: ದೇವರು ಸುಂದರವಾದ ಮಗಳನ್ನು ಕೊಟ್ಟ ಆದ್ರೆ ಸುಂದರವಾದ ಜೀವನ ಕೊಡಲಿಲ್ಲ ಎಂದು ಮೇಘನಾ ಸರ್ಜಾ ತಂದೆ ಸುಂದರ್ ರಾಜ್ ಅಳಲು ತೋಡಿಕೊಂಡರು.ಇಂದು ಆಸ್ಪತ್ರೆಯಿಂದ ಮೆಘನಾ ಸರ್ಜಾ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು. ಈ ವೇಳೆ ಮಾತನಾಡಿದ ಅವರು,  ಮಗಳನ್ನ ಕೊಟ್ಟು ಮದುವೆ ಮಾಡಿ ಜವಾಬ್ದಾರಿ ಮುಗಿತು ಅಂದುಕೊಳ್ಳವಾಗಲೇ ಚಿರು ಹೋಗಿ ಬಿಟ್ಟ. ಮದ್ವೆ ಆಗದೆ ಇದ್ರೆ ಯೋಚನೆ ಇರ್ತಾ ಇರಲಿಲ್ಲ. ಈ ರೀತಿಯಾಗಿ ಮಗಳನ್ನು ನೋಡೋದೆ ಕಷ್ಟ ಆಗುತ್ತದೆ. ಆ ಕುಟುಂಬಕ್ಕೆ ಮಗನ ಕಳೆದು ಕೊಂಡ ನೋವಿದೆ. ದೇವರು ಸುಂದರವಾದ ಮಗಳನ್ನು ಕೊಟ್ಟ ಆದ್ರೆ ಸುಂದರವಾದ ಜೀವನ ಕೊಡಲಿಲ್ಲ ಎಂದು ದುಃಖಿತರಾದರು. ಮರುಭೂಮಿಯಲ್ಲಿ ನೀರು ನೋಡಿದ ಹಾಗೆ ಆಗಿದೆ ಮಗು ನೋಡಿದಾಗ. ಮಗು ನೋಡಿದಾಗ ಚಿರು ನೋಡಿದ ಹಾಗೆ ಆಗುತ್ತದೆ. ಏಳು ದಿನಗಳ ನಂತರ ನಾನು ಮಾಧ್ಯಮದವರನ್ನು ಮೀಟ್ ಮಾಡುತ್ತಿದ್ದೇನೆ. ತಿರುಪತಿ ತಿಮ್ಮಪ್ಪನ ಹರಕೆಯಿಂದ ನನ್ನ ಮೊಮ್ಮಗ ಹುಟ್ಟಿದ್ದಾನೆ. ಕನ್ನಡದ ನೆಲದಲ್ಲಿ ಈ ಮಗು ದಸರಾ ಹಬ್ಬದಲ್ಲಿ ಹುಟ್ಟಿರೋದು ಶುಭ ಸೂಚಕ ಎಂದರು

Advertisement

Advertisement

ಮುಂದುವರೆದು ಮಾತನಾಡಿದ ಅವರು, ನವೆಂಬರ್ ೧ ರಂದು ಮೇಘನಾ ಎಲ್ಲರ ಜೊತೆ ಮಾತನಾಡುತ್ತಾರೆ. ಕರೋನಾ ಇರೋದ್ರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕು.
ಧ್ರುವಾ ಸರ್ಜಾ ಶೋ ಮ್ಯಾನ್. ಮಗು ಹುಟ್ಟಿದ ತಕ್ಷಣ ಶೋ ಮಾಡಿಬಿಟ್ರು ಆದ್ರೆ ತಂದೆ ನೊಡಿಕೊಳ್ಳವ ವಾಚ್ ಮ್ಯಾನ್ ಎಂದರು.

Advertisement

“ಮಗುವನ್ನು ಪ್ರೀತಿಯಿಂದ ಚಿಂಟೂ ಎಂದು ಕರೆಯುತ್ತಿದ್ದೇವೆ”

Advertisement

ಮಗು ಬೆಳೆಯುವವರೆಗೂ ನನಗೆ ಆಯಸ್ಸು ಕೊಡು ಅಂತ ಕೇಳುತ್ತೆನೆ.‌ ಮಗುಗೆ ತಂದೆ ತಾಯಿ ಮೇಘನಾನೇ.. ಮಗುವಿಗೆ ಪ್ರೀತಿಯಿಂದ ಚಿಂಟೂ ಅಂತ ಕರೆಯುತ್ತಿದ್ದೇವೆ. ಚಿಂಟೂ ಅಂದ್ರೆ ಚಿಂತೆಯನ್ನ ದೂರ ಮಾಡಲಿ ಅನ್ನೋದಕ್ಕೆ. ಚಿರು ಪರವಾಗಿ ಮನೆಗೆ ಬಂದ ಅವನ ಮಗನನ್ನ ಘೋದೋಳಿ ಮುಹೂರ್ತದಲ್ಲಿ ಮನೆಗೆ ಕರೆದುಕೊಂಡು ಬಂದೆವು. ಒಳ್ಳೆಯ ದಿನ ನೋಡಿ ಮಗುವನ್ನು ತೋರಿಸಿಬೇಕು ಅಂದು ಕೊಂಡಿದ್ದಿವಿ ಎಂದು ತಿಳಿಸಿದರು.

“ಮಗುವನ್ನು ನಾವೇ ಬೆಳೆಸುತ್ತೇವೆ”

ಧ್ರುವಾ ಮತ್ತು ಚಿರು ರಾಮ ಲಕ್ಷ್ಮಣ ರ ಹಾಗೆ ಇದ್ದರು. ಮಗು ಸರ್ಜಾ ಕುಟುಂಬಕ್ಕೆ ಸೇರಿದ್ದು. ಆದ್ರೂ ಮಗುವನ್ನು ನಾವೇ ಬೆಳೆಸುತ್ತೇವೆ. ತಾಯಿಯ ಜವಾಬ್ದಾರಿ ಹೆಚ್ಚಾಗಿರುತ್ತದೆ. ಮಗುವನ್ನ ಮೇಘನಾ ಪಾಪು ಅಂತ ಕರೆಯುತ್ತಾರೆ. ಮಗುವಿನ ಮೂಗು ತುಂಬಾ ಚನ್ನಾಗಿದೆ
ಮೂರು ತಿಂಗಳ ನಂತರ ಅದ್ದೂರಿಯಾಗಿ ನಾಮಕರಣ ಮಾಡುತ್ತೇವೆ ಎಂದು ಹೇಳಿದರು.

Advertisement
Share this on...