ಒಂದೇ ಒಂದು ತಪ್ಪು ಮಾಡಿದ ಕಾರಣ ದುರಂತ ಅಂತ್ಯ ಕಂಡ ಕನ್ನಡದ ಖ್ಯಾತ ನಟ ಸುನಿಲ್….?

in ಮನರಂಜನೆ/ಸಿನಿಮಾ 425 views

ಅಂದು ಜುಲೈ 24,1994. ಚಿಕ್ಕೋಡಿಯಲ್ಲಿ ರಸಮಂಜರಿ ಕಾರ್ಯಕ್ರಮವನ್ನು ಮುಗಿಸಿ ಮನೆಗೆ ಹೊರಟಿದ್ದ ನಟ ಸುನಿಲ್ ಮನೆ ಸೇರಲಿಲ್ಲ. ದಾವಣಗೆರೆ-ಚಿತ್ರದುರ್ಗ ಹೈವೇ ನಲ್ಲಿ ಅಪಘಾತಕ್ಕೆ ಒಳಗಾಗಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಸುನಿಲ್ ರವರನ್ನು ಸ್ಥಳೀಯರು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಾಗಲೇ ಸುನಿಲ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಇನ್ನು ಅಪಘಾತದಲ್ಲಿ ಡ್ರೈವರ್ ಸ್ಥಳದಲ್ಲೇ ಪ್ರಾಣ ಬಿಟ್ಟರೆ ಮಾಲಾಶ್ರೀ ಮತ್ತು ಸುನಿಲ್ ಸಂಬಂಧಿ ಸಚಿನ್ ಪ್ರಾಣಾಪಾಯದಿಂದ ಬದುಕುಳಿದರು. ಇಬ್ಬರಿಗೂ ಮಲ್ಟಿಪಲ್ ಫ್ರಾಕ್ಚರ್ ಆಗಿತ್ತು.  ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಸುನೀಲ್ ಇಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ ಕನ್ನಡ ಚಿತ್ರರಂಗ ಅವರನ್ನು ಕೈಬೀಸಿ ಕರೆಯಿತು. ಯಕ್ಷಗಾನ ಕಲಾವಿದ ಕೂಡ ಆಗಿದ್ದ ಸುನಿಲ್ ಕ್ಲಾಸಿಗಿಂತ ಹೆಚ್ಚಾಗಿ ನಾಟಕಗಳಿಗೆ ಹೆಚ್ಚು ಹಾಜರಾಗುತ್ತಿದ್ದರು. ಆಗಲೇ ಅವರಿಗೆ ತಾನೊಬ್ಬ ದೊಡ್ಡ ಸ್ಟಾರ್ ಆಗಬೇಕೆಂಬ ಆಸೆ ಚಿಗುರಿತ್ತು. ನಂತರ ಅವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಹೇರಳವಾಗಿ ಹುಡುಕಿಕೊಂಡು ಬಂದವು. ಮುಖದಲ್ಲಿನ ಮುಗ್ದತೆ ಹಾಗು ಆಗಾಧ ಪ್ರತಿಭೆಯುಳ್ಳ ಸುನಿಲ್ ಕನ್ನಡ ಚಿತ್ರರಂಗದಲ್ಲಿ ಚಾಕಲೇಟ್ ಹೀರೋ ಆಗಿ ಗುರುತಿಸಿಕೊಂಡರು.

Advertisement

 

Advertisement


ಸುನಿಲ್ ಚಿತ್ರರಂಗದಲ್ಲಿ ಬಹುಕಾಲ ನೆಲೆಸಲು ಆ ದೇವರಿಗೆ ಇಷ್ಟವಿರಲಿಲ್ಲವೇನೋ ಕೇವಲ 30 ವರ್ಷಕ್ಕೆ ಸುನಿಲ್ ಇಹಲೋಕ ತ್ಯಜಿಸಿದರು. ಸುನಿಲ್ ಆ ಒಂದು ನಿರ್ಧಾರ ಮಾಡಿದಂತೆ ನಡೆದಿದ್ದರೆ ಇಂದು ನಮ್ಮೊಡನೆ ಇರುತ್ತಿದ್ದರು. ಹೈದರಾಬಾದ್ ನಿಂದ ಚಿಕ್ಕೋಡಿ ಕಡೆಗೆ ಡ್ರೈವರ್ ಜೊತೆಗೆ ಪ್ರಯಾಣ ಬೆಳೆಸಿದರು. ಸುನಿಲ್ ಸಂಬಂಧಿ ಸಚಿನ್ ಮತ್ತು ನಟಿ ಮಾಲಾಶ್ರೀ ಕೂಡ ಇವರ ಜೊತೆಗಿದ್ದರು. ಚಿಕ್ಕೋಡಿ ತಲುಪುವುದು ತಡವಾಗಿತ್ತು. ಆದರೆ ರಸಮಂಜರಿ ಕಾರ್ಯಕ್ರಮದಲ್ಲಿ ಸುನಿಲ್ ಮತ್ತು ಮಾಲಾಶ್ರೀ ಮುಖ್ಯ ಅತಿಥಿಗಳಾಗಿ ಆಸಕ್ತಿಯಿಂದ ಪಾಲ್ಗೊಂಡರು. ರಸಮಂಜರಿ ಕಾರ್ಯಕ್ರಮ ಮುಗಿದದ್ದು ಮಧ್ಯರಾತ್ರಿ 3 ಗಂಟೆಗೆ ಹೀಗಾಗಿ ಅಲ್ಲೇ ಉಳಿದುಕೊಂಡು ಬೆಳಿಗ್ಗೆ ಫ್ರೆಶ್ ಆಗಿ ಹೊರಡುವುದು ಸುನಿಲ್ ರವರ ನಿರ್ಧಾರವಾಗಿತ್ತು. ಆದರೆ ಅವರ ಕಾರಿನ ಡ್ರೈವರ್ ಅದಕ್ಕೆ ಸಹಕರಿಸಲಿಲ್ಲ.

Advertisement


ಯಾಕೆಂದರೆ ಮಾರನೇ ದಿನ ಸುನಿಲ್ ಡ್ರೈವರ್ ಮಗನ ಬರ್ತಡೆ ಇತ್ತು. ಹೀಗಾಗಿ ಮುಂಜಾನೆ ಹೊತ್ತಿಗೆ ಮನೆ ಸೇರಬೇಕೆಂದು ಡ್ರೈವರ್ ಒತ್ತಾಯಿಸಿದರು. ತುಂಬಾ ಒಳ್ಳೆಯ ಮನಸ್ಸಿನ ಸುನಿಲ್ ಡ್ರೈವರ್ ಗೆ ಬೇಜಾರು ಆಗಬಾರದೆಂದು ಸರಿ ಈಗಲೇ ಹೋಗೋಣ ಎಂದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಚಿತ್ರದುರ್ಗ ಬಳಿಯ ಮಾದನಾಯಕನ ಹಳ್ಳಿ ಸಮೀಪದ ರಸ್ತೆಯಲ್ಲಿ ಪ್ರಯಾಣ ಬೆಳೆಸಿದ್ದ ಕಾಂಟೆಸಾ ಕಾರಿಗೆ ಲಾರಿ ಡಿಕ್ಕಿ ಹೊಡೆಯಿತು. ಪರಿಣಾಮ ಸುನಿಲ್ ಮತ್ತು ಡ್ರೈವರ್ ಇಹಲೋಕ ತ್ಯಜಿಸಿದರು. ಯಾರನ್ನೊ ಸಂತೋಷ ಪಡಿಸುವ ಸಲುವಾಗಿ ನಟ ಸುನಿಲ್ ರವರು ತಮ್ಮ ಜೀವವನ್ನೇ ಬಲಿ ಕೊಟ್ಟಿದ್ದು ಮಾತ್ರ ವಿಪರ್ಯಾಸ. ಇನ್ನೊಬ್ಬರ ಸಂತೋಷಕ್ಕಾಗಿ ತನ್ನ ಜೀವವನ್ನೇ ಬಲಿಕೊಟ್ಟರು ನಟ ಸುನಿಲ್.

Advertisement

– ಸುಷ್ಮಿತಾ

Advertisement
Share this on...