ಸನ್ನಿ ಲಿಯೋನ್ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಇಲ್ಲಿದೆ ಫೋಟೋಗಳು !

in ಕನ್ನಡ ಮಾಹಿತಿ/ಮನರಂಜನೆ 87 views

ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ ಆಗ್ಗಾಗ್ಗೆ ತಮ್ಮ ಇನ್ಸ್ಟಾಗ್ರಾಮ್ ಪೇಜ್’ನಲ್ಲಿ ವಿಶಿಷ್ಟ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ತಮ್ಮ ಅಭಿಮಾನಿಗಳನ್ನು ಸಂತೋಷಪಡಿಸಲು ಹಳೆಯ ಫೋಟೋ ಶೂಟ್ಗಳ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಆದರೆ ಇದೀಗ ಸನ್ನಿ ಮತ್ತೊಮ್ಮೆ ಕ್ಯಾಲಿಫೋರ್ನಿಯಾ ಕಡಲತೀರದಿಂದ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. “ಕಡಲತೀರದಲ್ಲಿ ಸಾಮಾಜಿಕ ದೂರವಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ ಎಂದು ಸನ್ನಿ ಫೋಟೋ ಜೊತೆ ಶೀರ್ಷಿಕೆಯನ್ನು ಸಹ ಬರೆದುಕೊಂಡಿದ್ದಾರೆ. ‘ಲವ್ ಕ್ಯಾಲಿಫೋರ್ನಿಯಾ’ ಎಂದು ಉದ್ಗರಿಸಿರುವ ಸನ್ನಿ, ತನ್ನ ಪತಿ ಡೇನಿಯಲ್ ವೆಬರ್ ಜೊತೆ ತೆಗೆದುಕೊಂಡಿರುವ ಸೆಲ್ಫಿಯನ್ನೂ ಪೋಸ್ಟ್ ಮಾಡಿದ್ದಾರೆ.  ಯಾರ ಸಹಾಯವೂ ಇಲ್ಲದೆ, ಬಾಲಿವುಡ್’ಗೆ ಪ್ರವೇಶ ಪಡೆದ ಸನ್ನಿ ತನಗೂ ಪ್ರತಿಭೆಯಿದೆ ಎಂಬುದನ್ನು ಸಾಧಿಸಿ ತೋರಿಸಿದರು. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸನ್ನಿಯನ್ನು ಹೆಚ್ಚು ಗೌರವಿಸುತ್ತಾರೆ. ಆದ್ದರಿಂದಲೇ ಸನ್ನಿ ಪ್ರತಿದಿನ ಕೆಲವು ವಿಷಯಾಸಕ್ತ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

Advertisement


ಕೊರೊನಾ ಸಮಯದಲ್ಲಿಯೂ ನಗುವನ್ನು ಹಂಚಿಕೊಂಡ ಸನ್ನಿಯನ್ನು ನೋಡಿ ಸೋಷಿಯಲ್ ಮೀಡಿಯಾ ಮೆಚ್ಚಿದ್ದು, ಸನ್ನಿಯ ಬೆಸ್ಟ್ ಫೋಟೋಗಳಲ್ಲಿ ಇದು ಒಂದಾಗಿದೆ. ಮುಂಬೈನಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿದ್ದಂತೆ ಸನ್ನಿ ತನ್ನ ಪತಿ ಡೇನಿಯಲ್ ವೆಬರ್ ಜೊತೆ ಮೂವರು ಮಕ್ಕಳೊಂದಿಗೆ ಅಮೆರಿಕದ ಲಾಸ್ ಏಂಜಲೀಸ್’ಗೆ ಹೋಗಬೇಕಾಯಿತು. ಸನ್ನಿ ಮುಂಬೈಗಿಂತ ಲಾಸ್ ಏಂಜಲೀಸ್’ನಲ್ಲಿರುವ ತನ್ನ ಮನೆ ಮಕ್ಕಳಿಗೆ ಹೆಚ್ಚು ಸುರಕ್ಷಿತ ಸ್ಥಳವೆಂದು ಪರಿಗಣಿಸಿದರು. ಅದಕ್ಕಾಗಿಯೇ ಅವರು ಮತ್ತೆ ಅಮೆರಿಕಕ್ಕೆ ಹೋಗಬೇಕಾಯಿತು. ಇದೀಗ ಈ ಮಾಹಿತಿಯನ್ನು ಸನ್ನಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.  ಅದರಲ್ಲಿಯೂ ಸನ್ನಿ ಮುಂಬೈನಲ್ಲಿರುವ ಮನೆ ಬಿಡಲು ಬಯಸುವುದಿಲ್ಲವಂತೆ. “ವೈಯಕ್ತಿಕವಾಗಿ ಮುಂಬೈ ತೊರೆಯಲು ಬೇಸರವಾಗಿದೆ, ನನಗೆ ಈ ಮನೆ ಬಿಡಲು ಇಷ್ಟವಿರಲಿಲ್ಲ. ತನ್ನ ಕುಟುಂಬವನ್ನು ರಕ್ಷಿಸಲು ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಯಿತು” ಎಂದು ಹೇಳಿದ್ದಾರೆ ಸನ್ನಿ.

Advertisement

 

Advertisement
View this post on Instagram

 

Advertisement

Social distancing at the beach!! Can’t get any better then this! California LOVE!

A post shared by Sunny Leone (@sunnyleone) on

ಸನ್ನಿ ತಮ್ಮ ಕೂಲ್ ಸ್ಟೈಲ್ ‘ಗೆ ಮಾತ್ರವಲ್ಲದೆ, ಐಷಾರಾಮಿ ಜೀವನಶೈಲಿಗೂ ಹೆಸರುವಾಸಿಯಾಗಿದ್ದಾರೆ. ಆದರೆ ಅವರು ಈ ಮಟ್ಟಕ್ಕೆ ಬರಲು ಬಹಳ ಕಷ್ಟ ಅನುಭವಿಸಿದ್ದಾರೆ. ಪೋರ್ನ್ ಇಂಡಸ್ಟ್ರಿಯಿಂದ ಬಂದ ಸನ್ನಿ, ಬಾಲಿವುಡ್ ನಟಿಯಾಗಿ ಬೆಳೆದಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಕೋಟಿಗಟ್ಟಲೆ ಆಸ್ತಿಗೆ ಒಡತಿಯಾಗಿದ್ದಾರೆ. ಸದ್ಯ ತನ್ನ ಇಡೀ ಕುಟುಂಬದೊಂದಿಗೆ ಲಾಸ್ ಏಂಜಲೀಸ್ ಮನೆಯಲ್ಲಿ ವಾಸಿಸುತ್ತಿರುವ ಸನ್ನಿ ಮನೆ ಒಂದು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಐಷಾರಾಮಿ ಬಂಗಲೆಯಲ್ಲಿ 5 ಮಲಗುವ ಕೋಣೆಗಳಿದ್ದು, ಈ ಮನೆ ಅಮೆರಿಕದ ಅತ್ಯಂತ ದುಬಾರಿ ಸ್ಥಳಗಳಲ್ಲಿ ಒಂದಾದ ಬೆವರ್ಲಿ ಹಿಲ್ಸ್’ನಿಂದ ಸುಮಾರು 30 ನಿಮಿಷಗಳ ದೂರದಲ್ಲಿದೆ ಎಂಬುದಂತು ನಿಜ.

Advertisement
Share this on...