ಪತಿ ಡೇನಿಯಲ್ ವೆಬರ್ ಮೇಲೆ ಸೇಡು ತೀರಿಸಿಕೊಂಡ ಸನ್ನಿ ಲಿಯೋನ್​​​​…ಅವರು ಮಾಡಿದ್ದಾದ್ರೂ ಏನು…?

in ಮನರಂಜನೆ 23 views

ಸನ್ನಿ ಲಿಯೋನ್​​, ಈ ಹೆಸರು ಬಹುತೇಕ ಎಲ್ಲರಿಗೂ ಗೊತ್ತು. ಮೂಲತ: ಪಂಜಾಬಿ ಕುಟುಂಬದಲ್ಲಿ ಜನಿಸಿದ ಕರೆನ್​​ಜಿತ್ ಕೌರ್​ ವೋಹ್ರ 16ನೇ ವಯಸ್ಸಿನಲ್ಲೇ ತಂದೆ ತಾಯಿಯನ್ನು ಎದುರು ಹಾಕಿಕೊಂಡು ಅಮೆರಿಕಕ್ಕೆ ತೆರಳಿ ಅಲ್ಲಿ ಪಾರ್ನ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಬಹಳ ವರ್ಷಗಳ ಕಾಲ ಅದೇ ಕ್ಷೇತ್ರದಲ್ಲಿದ್ದು ಡೇನಿಯಲ್ ವೆಬರ್ ಅವರನ್ನು ಪ್ರೀತಿಸಿ ಮದುವೆಯಾಗಿ ಕೊನೆಗೆ ಆ ಕೆಲಸದಿಂದ ದೂರವಾಗಿ ಭಾರತಕ್ಕೆ ಬಂದರು. ಇದೀಗ ಬಾಲಿವುಡ್ ನಟಿ ಹಾಗೂ ಮಾಡೆಲ್ ಆಗಿ ಕೆಲಸ ಮಾಡುತ್ತಾ ಪತಿ ಹಾಗೂ ತಮ್ಮ ಮೂವರು ಮಕ್ಕಳೊಂದಿಗೆ ಮುಂಬೈನಲ್ಲೇ ನೆಲೆಸಿದ್ದಾರೆ.

Advertisement

 

Advertisement

Advertisement

 

Advertisement

ಇನ್ನು ಸನ್ನಿ, ಲಾಕ್​​ಡೌನ್ ದಿನಗಳನ್ನು ಹೇಗೆ ಕಳೆಯುತ್ತಿದ್ದಾರೆ ಎಂಬ ಕುತೂಹಲ ಸಾಮಾನ್ಯವಾಗಿ ಅವರ ಅಭಿಮಾನಿಗಳಿಗೆ ಇರುತ್ತದೆ. ಎಲ್ಲರಂತೆಯೇ ಮನೆಯಲ್ಲೇ ಇದ್ದು ಪತಿ ಹಾಗೂ ಮಕ್ಕಳ ಕಾಳಜಿ ಮಾಡುತ್ತಾ ಮನೆಯಲ್ಲೇ ಉಳಿದಿದ್ದಾರೆ ಸನ್ನಿ ಲಿಯೋನ್. ಇನ್ನು ಸನ್ನಿ ಹಾಗೂ ಡೇನಿಯಲ್ 2011 ರಲ್ಲಿ ಮದುವೆಯಾದರು. 9 ವರ್ಷಗಳ ಈ ವೈವಾಹಿಕ ಜೀವನದಲ್ಲಿ ಇಬ್ಬರೂ ಒಬ್ಬರನೊಬ್ಬರು ಪರಸ್ಪರ ಪ್ರೀತಿಸುತ್ತಾ, ಗೌರವಿಸುತ್ತಾ ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ. ಸನ್ನಿ ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ನಿನ್ನೆ ತಮ್ಮ ಪತಿಯನ್ನು ಕಾಲೆಳೆಯುವ ವಿಡಿಯೋವೊಂದನ್ನು ಅಪ್​ಲೋಡ್ ಮಾಡಿದ್ದಾರೆ.

 

 

ನನ್ನ ಪತಿ, ಡೇನಿಯಲ್ ವೆಬರ್ ಲಾಕ್​​ಡೌನ್​ ದಿನಗಳನ್ನು ಹೇಗೆ ಕಳೆಯುತ್ತಿದ್ದಾರೆ ನೀವೇ ನೋಡಿ. ಅಡುಗೆ ಮಾಡಲು ಹೋಗಿ ಎಲ್ಲವನ್ನೂ ತಳ ಹತ್ತಿಸುವುದು, ಕೆಲಸ ಮಾಡುತ್ತೇನೆ ಎಂದು ಹೇಳಿ ಮನೆಯ ಸಿಕ್ಕ ಸಿಕ್ಕ ಕಡೆ ಸೋಮಾರಿಯಂತೆ ಕೂರುವುದು, ವರ್ಕೌಟ್ ಮಾಡುತ್ತೇನೆ ಎಂದು ಹೇಳಿ ಯಾವಾಗಲೂ ಸೆಲ್ಫಿ ಕ್ಲಿಕ್ ಮಾಡುವುದು, ಇಡೀ ದಿನ ಪೈಜಾಮದಲ್ಲೇ ಟಿವಿ ನೋಡುತ್ತಾ ಕುಳಿತುಕೊಳ್ಳುವುದು, ಮಕ್ಕಳ ಕಡೆ ಗಮನ ನೀಡದೆ ಇಡೀ ದಿನ ಗೊರಕೆ ಹೊಡೆಯುತ್ತಾ ನಿದ್ರೆ ಮಾಡುವುದು ಎಂದೆಲ್ಲಾ ಹೇಳುತ್ತಾ ಪತಿ ಡೇನಿಯಲ್ ವೆಬರ್ ಅವರ ಬಗ್ಗೆ ಅಭಿಮಾನಿಗಳ ಬಳಿ ದೂರು ಹೇಳಿದ್ದಾರೆ ಸನ್ನಿ.

 

 

View this post on Instagram

 

Here you go guys… the truth!! @dirrty99 lounging around and resting!!

A post shared by Sunny Leone (@sunnyleone) on

 

5 ದಿನಗಳ ಹಿಂದೆ ಡೇನಿಯಲ್ ವೆಬರ್ ಕೂಡಾ ಸನ್ನಿ ಮೇಲೆ ದೂರು ಹೇಳುವ ವಿಡಿಯೋವೊಂದನ್ನು ಅಪ್​​ಲೋಡ್ ಮಾಡಿದ್ದರು. ಸನ್ನಿ ಅಡುಗೆ ಸರಿ ಇರುವುದಿಲ್ಲ, ಅವಳು ಬಹಳ ಸೋಮಾರಿ, ಯಾವಾಗಲೂ ಮಲಗಿರುತ್ತಾಳೆ, ನನ್ನ ಮೇಲೆ ಅಧಿಕಾರಿ ಚಲಾಯಿಸುತ್ತಾಳೆ ಎಂದೆಲ್ಲಾ ಬರೆದಿರುವ ಪೇಪರ್​​​​ಗಳನ್ನು ತೋರಿಸುವ ಮೂಲಕ ವಿಡಿಯೋ ಮಾಡಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಹೇಳಿದ್ದ ಸನ್ನಿ ಈಗ ಈ ವಿಡಿಯೋ ಮಾಡಿದ್ದಾರೆ. ಆದರೆ ಇದೆಲ್ಲಾ ಕೇವಲ ತಮಾಷೆಗಾಗಿ ಮಾತ್ರ. ಪತಿ-ಪತ್ನಿ ಒಬ್ಬರಿಗೊಬ್ಬರನ್ನು ರೇಗಿಸಲು ಈ ವಿಡಿಯೋ ಮಾಡಿ ಅಪ್​​​ಲೋಡ್ ಮಾಡಿದ್ದಾರೆ ಅಷ್ಟೇ.

Advertisement
Share this on...