ತರಕಾರಿ ಹೆಚ್ಚುವಾಗ ಬೆರಳು ಕತ್ತರಿಸಿಕೊಂಡ ಸನ್ನಿ ಲಿಯೋನ್​​​​​​…ವಿಡಿಯೋ ನೋಡಿ !

in ಮನರಂಜನೆ 56 views

ಸನ್ನಿ ಲಿಯೋನ್ ಹಾಗೂ ಡೇನಿಯಲ್​​​​ ವೆಬರ್ ಅವರದ್ದು 9 ವರ್ಷಗಳ ದಾಂಪತ್ಯ ಜೀವನ. ಸನ್ನಿ ಲಿಯೋನ್ ಅಮೆರಿಕದಲ್ಲಿರುವಾಗಲೇ ಡೇನಿಯಲ್ ವೆಬರ್ ಅವರನ್ನು ಪ್ರೀತಿಸಿ ಮದುವೆಯಾದವರು. ಹೊಸ ಜೀವನ ಆರಂಭಿಸಲು ತಾವು ಮಾಡುತ್ತಿದ್ದ ಆ ಕೆಲಸವನ್ನು ಬಿಟ್ಟು ಭಾರತಕ್ಕೆ ಬಂದು ಇದೀಗ ಮುಂಬೈನಲ್ಲಿ ನೆಲೆಸಿದ್ದಾರೆ. ಬಾಲಿವುಡ್ ನಟಿಯಾಗಿ, ಮಾಡೆಲ್ ಆಗಿ ಸನ್ನಿ ಲಿಯೋನ್​ ಕೆಲಸ ಮಾಡುತ್ತಿದ್ದರೆ, ಡೇನಿಯಲ್ ವೆಬರ್ ಪತ್ನಿಗೆ ಬೆಂಬಲವಾಗಿ ನಿಂತು, ಬ್ಯುಸ್ನೆಸ್​​​ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಇನ್ನು ಮುಂಬೈನಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿದ್ದು ಸನ್ನಿ ಲಿಯೋನ್​ ತಮ್ಮ ಪತಿ ಡೇನಿಯಲ್ ವೆಬರ್ ಹಾಗೂ ಮೂವರು ಮಕ್ಕಳೊಂದಿಗೆ ಹೋಂ ಕ್ವಾರಂಟೈನ್​​​ನಲ್ಲಿದ್ದಾರೆ. ತಮ್ಮ ಪತಿ ಹಾಗೂ ಮಕ್ಕಳಿಗೆ ಸನ್ನಿ ತಾವೇ ಅಡುಗೆ ಮಾಡಿ ಬಡಿಸುತ್ತಿದ್ದಾರೆ. ಆದರೆ ಮೊನ್ನೆ ಅಡುಗೆಗಾಗಿ ಸನ್ನಿ ತರಕಾರಿ ಹೆಚ್ಚುವಾಗ ತಮ್ಮ ಕೈ ಬೆರಳನ್ನೂ ಕತ್ತರಿಸಿಕೊಂಡಿದ್ದಾರೆ. ಆ ವೇಳೆ ಅವರ ಕೈ ಬೆರಳಿನಿಂದ ರಕ್ತ ಚಿಮ್ಮಿದೆ. ಅಯ್ಯೋ ನಮ್ಮೆಲ್ಲರ ಪ್ರೀತಿಯ ಸನ್ನಿಗೆ ಏನಾಯ್ತು ಅಂತ ಗಾಬರಿಯಾಗಬೇಡಿ. ಇದೆಲ್ಲಾ ಕೇವಲ ಪ್ರಾಂಕ್ ಅಷ್ಟೇ. ಪತಿ ಡೇನಿಯಲ್ ಅವರನ್ನು ಫೂಲ್ ಮಾಡಲು ಸನ್ನಿ ಹೀಗೆಲ್ಲಾ ಮಾಡಿದ್ದಾರೆ ಅಷ್ಟೇ.

Advertisement

 

Advertisement

Advertisement

 

Advertisement

ಈ ವಿಡಿಯೋ ಮಾಡುವ ಮುನ್ನ ಸನ್ನಿ ಹಾಗೂ ಡೇನಿಯಲ್ ವೆಬರ್ ಇಬ್ಬರೂ ಸ್ನೇಹಿತರೊಂದಿಗೆ ಲೈವ್ ಚಾಟ್ ಮಾಡಿದ್ದಾರೆ. ಡೇನಿಯಲ್​​​​​​ಗೆ ಪ್ಯ್ರಾಂಕ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಅದನ್ನು ಡೇನಿಯಲ್ ಸರಿಯಾಗಿ ಕೇಳಿಸಿಕೊಂಡಿಲ್ಲ. ರಕ್ತದಂತೆ ಕಾಣಲು ಸಾಸ್​​​​​​​​ ಹಾಗೂ ಕೆಚಪ್ ಬಳಸಿ ತಯಾರಿಸಲಾದ ಮಿಶ್ರಣ ಹಾಗೂ ಬೆರಳಿನಂತೆ ಕಾಣಲು ಬಾಳೆಹಣ್ಣಿನ ತುಂಡನ್ನು ಬಳಸಿದ್ದಾರೆ. ಬಾಳೆಹಣ್ಣಿನ ಮೇಲೆ ಸಾಸ್ ಹರಡಿ ಪತಿಯನ್ನು ಜೋರಾಗಿ ಕೂಗಾಡಿದ್ದಾರೆ. ಪತಿ ಡೇನಿಯಲ್ ನಿಜಕ್ಕೂ ಪತ್ನಿ ಸನ್ನಿಗೆ ಏನೋ ಆಗಿದೆ ಎಂದು ಗಾಬರಿಯಿಂದ ಓಡಿಬರುತ್ತಾರೆ. ಪತಿಯ ಕಷ್ಟ ನೋಡಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸುತ್ತಾರೆ. ಆದರೆ ಅದು ಪ್ಯ್ರಾಂಕ್ ಎಂದು ತಿಳಿದ ಕೂಡಲೇ ಕೋಪದಿಂದ ಹೊರಗೆ ಹೋಗುತ್ತಾರೆ.

 

View this post on Instagram

 

This ain’t no cooking video!!!! Haha @dirrty99 got pranked and served!!

A post shared by Sunny Leone (@sunnyleone) on

ನಂತರ ಅವರನ್ನು ಸಮಾಧಾನ ಮಾಡಿದ ಸನ್ನಿ ಒಳಗೆ ಕರೆಯುತ್ತಾರೆ. ಆಗ ಮಾತನಾಡಿದ ಡೇನಿಯಲ್, ನಾನು ಸೌಮ್ಯ ಸ್ವಭಾವದನು. ನಾನು ಎಂದಿಗೂ ಯಾರನ್ನೂ ಪ್ಯ್ರಾಂಕ್ ಮಾಡಿಲ್ಲ, ಹಾಗೇ ನನ್ನ ಮೇಲೂ ಪ್ಯ್ರಾಂಕ್ ಮಾಡಲು ಬಿಡುವುದಿಲ್ಲ. ಹಾಗಾಗಿ ಸನ್ನಿ ಮಾಡಿದ ಕೆಲಸಕ್ಕೆ ನಾನು ಮಾರ್ಕ್ ನೀಡುವುದಿಲ್ಲ ಎಂದಿದ್ದಾರೆ. ಈ ವಿಡಿಯೋವನ್ನು ಸನ್ನಿ ಲಿಯೋನ್ ತಮ್ಮ ಇನ್ಸ್​​​​ಟಾಗ್ರಾಮ್​​​ನಲ್ಲಿ ಷೇರ್ ಮಾಡಿಕೊಂಡಿದ್ದಾರೆ.

Advertisement
Share this on...