ಡಿಕೆ, ಲವ್ ಯು ಆಲಿಯಾ ನಂತರ ಮತ್ತೊಮ್ಮೆ ಕನ್ನಡಕ್ಕೆ ಬಂದ ಸನ್ನಿ ಲಿಯೋನ್​​​​​​…ಯಾವ ಸಿನಿಮಾ ಅದು…?

in ಸಿನಿಮಾ 34 views

ಬಾಲಿವುಡ್​​​​​​ ಸೇರಿದಂತೆ ಪರಭಾಷೆಗಳಲ್ಲಿ ಹೆಸರು ಮಾಡಿರುವ ನಟಿಯರನ್ನು ಸ್ಯಾಂಡಲ್​​ವುಡ್ ಸಿನಿಮಾ ಮಂದಿ ತಮ್ಮ ಸಿನಿಮಾಗೆ ಕರೆತರುವುದು ಸಾಮಾನ್ಯವಾಗಿದೆ. ಕೆಲವರು ಪರಭಾಷಾ ನಟಿಯರನ್ನು ನಾಯಕಿ ಸ್ಥಾನಕ್ಕೆ ಕರೆತಂದರೆ, ಮತ್ತೆ ಕೆಲವು ನಿರ್ದೇಶಕರು ಸ್ಪೆಷಲ್ ಹಾಡಿಗಾಗಿ ಕರೆತರುತ್ತಾರೆ. ಮಾಜಿ ನೀಲಿ ಸಿನಿಮಾ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡಾ ಅನೇಕ ಸಿನಿಮಾಗಳಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಾಲಿವುಡ್​, ಟಾಲಿವುಡ್​​​, ತಮಿಳು ಚಿತ್ರರಂಗ ಮಾತ್ರವಲ್ಲ, ಕನ್ನಡ ಸಿನಿಮಾ ಹಾಡುಗಳಲ್ಲಿ ಕೂಡಾ ಸನ್ನಿ ಲಿಯೋನ್ ಡ್ಯಾನ್ಸ್ ಮಾಡಿದ್ದಾರೆ. ಪ್ರೇಮ್ ನಟನೆಯ ‘ಡಿಕೆ’ ಚಿತ್ರದ ಶೇಷಮ್ಮ ಶೇಷಮ್ಮ ಬಾಗಿಲು ತೆಗೆಯಮ್ಮ….ಹಾಡಿಗಾಗಿ ಮೊಲದ ಬಾರಿ ಸನ್ನಿ ಲಿಯೋನ್ ಕನ್ನಡ ಚಿತ್ರರಂಗಕ್ಕೆ ಬಂದರು. ಇದಾದ ನಂತರ ‘ಲವ್ ಯು ಆಲಿಯಾ’ ಚಿತ್ರದಲ್ಲಿ ಸೃಜನ್ ಲೋಕೇಶ್ ಜೊತೆ ಕಾಮಾಕ್ಷಿ ಕಾಮಾಕ್ಷಿ… ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸನ್ನಿ ಲಿಯೋನ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

Advertisement

ಸುಮಾರು 7 ವರ್ಷಗಳ ನಂತರ ‘ಚಾಂಪಿಯನ್’ ಎಂಬ ಚಿತ್ರಕ್ಕಾಗಿ ಬೇಬಿ ಡಾಲ್ ಸನ್ನಿ ಲಿಯೋನ್ ಮತ್ತೆ ಸ್ಯಾಂಡಲ್​​ವುಡ್​​​​ನತ್ತ ಮುಖ ಮಾಡಿದ್ದಾರೆ. ಶಿವಂ ಪ್ರೊಡಕ್ಷನ್ಸ್​ ಬ್ಯಾನರ್ ಅಡಿ ಶಿವಾನಂದ ಎಸ್. ನೀಲಣ್ಣವರ ‘ಚಾಂಪಿಯನ್’ ಚಿತ್ರಕ್ಕೆ ಬಂಡವಾಳ ಹೂಡಿದ್ದು ಶಾಹುರಾಜ ಶಿಂಧೆ, ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಸಚಿನ್ ಧನಪಾಲ್ ಪಾಟೀಲ್ ಹಾಗೂ ಅದಿತಿ ಪ್ರಭುದೇವ, ‘ಚಾಂಪಿಯನ್’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸನ್ನಿ ಡ್ಯಾನ್ಸ್ ಮಾಡುತ್ತಿರುವ ಹಾಡಿಗೆ ಅಜನೀಶ್ ಬಿ. ಲೋಕನಾಥ್ ಸಂಗೀತ ನೀಡಿದ್ದು ರವಿ ಬೆರ್ಗಿ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ.

Advertisement

ಇದು ಸಚಿನ್​​​​​​​​ ಧನಪಾಲ್ ಅಭಿನಯದ ಮೊದಲ ಸಿನಿಮಾವಾಗಿದೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ನಾಯಕ ಧನಪಾಲ್, ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಇದು ಅಥ್ಲೆಟಿಕ್ಸ್​​​​​ಗೆ ಸಂಬಂಧಿಸಿದ ಚಿತ್ರವಾಗಿದ್ದು ಶೀಘ್ರದಲ್ಲೇ ಚಿತ್ರ ತೆರೆ ಕಾಣಲಿದೆ. ಸಚಿನ್ ಧನ್​​​ಪಾಲ್​​​, ಅದಿತಿ ಪ್ರಭುದೇವ ಜೊತೆಗೆ ಹಿರಿಯ ನಟ ದೇವರಾಜ್, ಸುಮನ್, ಪ್ರದೀಪ್ ರಾಹುತ್, ಚಿಕ್ಕಣ್ಣ, ಆದಿ ಲೋಕೇಶ್, ಅಶೋಕ್ ಶರ್ಮಾ, ಗಿರಿ, ಅವಿನಾಶ್, ರಂಗಾಯಣರಘು, ಶೋಭರಾಜ್, ಕಾಕ್ರೋಚ್ ಸುಧೀರ್, ಪ್ರಶಾಂತ್ ಸಿದ್ದಿ, ಮಂಡ್ಯ ರಮೇಶ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ‘ಚಾಂಪಿಯನ್’ ಚಿತ್ರದ ಮೂಲಕ ಮತ್ತೊಮ್ಮೆ ಸನ್ನಿ ಲಿಯೋನ್ ನೋಡಲು ಕನ್ನಡ ಸಿನಿಪ್ರಿಯರು ಕಾಯುತ್ತಿದ್ದಾರೆ.

Advertisement

ಸನ್ನಿ ಲಿಯೋನ್ ಇತರ ಚಿತ್ರಗಳ ಬಗ್ಗೆ ಹೇಳುವುದಾದರೆ, ಮಲಯಾಳಂನ ರಂಗೀಲಾ, ತಮಿಳಿನ ವೀರಮದೇವಿ, ಶೆರೋ, ಓ ಮೈ ಗೋಸ್ಟ್, ಹಿಂದಿಯ ಕೋಕಾ ಕೋಲಾ, ಹೆಲೆನ್, ದಿ ಬ್ಯಾಟಲ್ ಆಫ್ ಭೀಮಾ ಕೊರೆಗಾಂವ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಜೊತೆಗೆ ಕೆಲವೊಂದು ಜಾಹೀರಾತುಗಳಲ್ಲಿ ಕೂಡಾ ನಟಿಸುತ್ತಿದ್ದಾರೆ.
-ರಕ್ಷಿತ ಕೆ.ಆರ್​​​.ಎಸ್

Advertisement

Advertisement
Share this on...