ಲಾಕ್ ಡೌನ್ ಮದ್ಯೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಸನ್ನಿ…!

in ಕನ್ನಡ ಮಾಹಿತಿ 27 views

ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ಪಡ್ಡೆಹುಡುಗರ ಹೃದಯ ಕದ್ದ ಚೆಲುವೆ. ಹಾಟ್ ಚಿತ್ರಗಳಲ್ಲಿ ನಟಿ ಯುವಕರ ತಲೆ ತಿರುಗುವಂತೆ ಮಾಡುವ ಸನ್ನಿ ಈಗ ಲಾಕ್ ಡೌನ್ ಮಧ್ಯೆಯು ತನ್ನ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕೊರೋನಾ ಭಯದಿಂದ ಎಲ್ಲರೂ ಗೂಡು ಸೇರಿದ್ದಾರೆ. ಲಾಕ್ ಡೌನ್ ಇರುವ ಕಾರಣ ಯಾರು ಮನೆಯಿಂದ ಹೊರ ಬರುತ್ತಿಲ್ಲ. ಈ ವೇಳೆ ಸೆಲೆಬ್ರೆಟಿಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಬಿಜಿ಼ಯಾಗಿದ್ದಾರೆ.

Advertisement

 

Advertisement

Advertisement

 

Advertisement

ಅಂತೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಿಕನಿ ತೊಟ್ಟು ಹಾಟ್ ಫೋಟೋಗಳನ್ನ ಹಂಚಿಕೊಂಡು ಲಾಕ್ ಡೌನ್ ನಡುವೆಯೂ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ. ಸನ್ನಿ ಲಿಯೋನ್ ಇತ್ತೀಚೆಗೆ ನೇರಳೆ ಬಣ್ಣದ ಬಿಕಿನಿ ತೊಟ್ಟು ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಇದನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಸನ್ನಿಯವರ ಈ ಮಾದಕ ಪೋಸ್ಟ್ ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಇದರ ಜೊತೆಗೆ ಕೇಸರಿ ಬಣ್ಣದ ಬಿಕಿನಿ ತೊಟ್ಟು ಮರವನ್ನು ತಬ್ಬಿರುವ ಸನ್ನಿ ಲಿಯೋನ್ ಫೋಟೋ ನೋಡಿದ ಅವರ ಅಭಿಮಾನಿಗಳು ನಿಮಗೆ ನೀವೇ ಸಾಟಿ ಮೇಡಂ ಎಂದು ಕಾಮೆಂಟ್ ಮಾಡಿದ್ದಾರೆ.

 

 

ಇದರ ನಡುವೆ ಭಾನುವಾರ ಮೋದಿಯವರ ಮನವಿಯಂತೆ ರಾತ್ರಿ 9 ಗಂಟೆಗೆ ದೀಪ ಹಿಡಿದು ಕಾಣಿಸಿಕೊಂಡಿರುವ ಸನ್ನಿ ಲಿಯೋನ್ ಈ ಫೋಟೋವನ್ನು ಕೂಡ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ. ಜೊತೆ ಲಾಕ್ ಡೌನ್, ಈ ಕೋರೊನಾ ವೈರಸ್ ಅನ್ನು ಸಮರ್ಪಕವಾಗಿ ಎದುರಿಸುತ್ತಿರುವ ಎಲ್ಲಾ ನನ್ನ ಜನರು ಮತ್ತು ಆರೋಗ್ಯ ವೃತ್ತಿಪರರಿಗೆ ತುಂಬಾ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಈ ಲಾಕ್ ಡೌನ್ ಸಮಯದಲ್ಲಿ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಸದಾ ಸಕ್ರಿಯವಾಗಿರುವ ಸನ್ನಿ ತಮ್ಮ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಜೊತೆಗೆ ಜನರಲ್ಲಿ ಕೋರೋನಾ ವೈರಸ್ ಬಗ್ಗೆ ಮಾಹಿತಿ ಮತ್ತು ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದ್ದಾರೆ.

– ಸುಷ್ಮಿತಾ

Advertisement
Share this on...