ನನಗೆ ಇಷ್ಟವಿರದಿದ್ದರೂ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದ ಸನ್ನಿ !

in ಮನರಂಜನೆ 84 views

ಕೊರೊನಾ ವೈರಸ್ ಸೋಂಕಿನಿಂದ ವಿಶ್ವದಲ್ಲಿ ಎಲ್ಲರೂ ತೊಂದರೆಗೀಡಾಗಿದ್ದಾರೆ. ಈ ವೈರಸ್ನಿಂದಾಗಿ, ಜನರು ಈ ಸಮಯದಲ್ಲಿ ಮಾಡಲು ಇಷ್ಟವಿರದ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ. ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡ ಈಗ ಇದೇ ರೀತಿ ಮಾಡಿದ್ದಾರೆ. ಅದೇನಪ್ಪಾ ಅಂತೀರಾ?, ಮುಂದೆ ಓದಿ…ಮುಂಬೈನಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿದ್ದಂತೆ ಸನ್ನಿ ತನ್ನ ಪತಿ ಡೇನಿಯಲ್ ವೆಬರ್ ಜೊತೆ ಮೂವರು ಮಕ್ಕಳೊಂದಿಗೆ ಅಮೆರಿಕದ ಲಾಸ್ ಏಂಜಲೀಸ್’ಗೆ ಹೋಗಬೇಕಾಯಿತು. ಸನ್ನಿ ಮುಂಬೈಗಿಂತ ಲಾಸ್ ಏಂಜಲೀಸ್ನಲ್ಲಿರುವ ತನ್ನ ಮನೆ ಮಕ್ಕಳಿಗೆ ಹೆಚ್ಚು ಸುರಕ್ಷಿತ ಸ್ಥಳವೆಂದು ಪರಿಗಣಿಸಿದರು. ಅದಕ್ಕಾಗಿಯೇ ಅವರು ಮತ್ತೆ ಅಮೆರಿಕಕ್ಕೆ ಹೋಗಬೇಕಾಯಿತು. ಇದೀಗ ಈ ಮಾಹಿತಿಯನ್ನು ಸನ್ನಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಅದರಲ್ಲಿಯೂ ಸನ್ನಿ ಮುಂಬೈನಲ್ಲಿರುವ ಮನೆ ಬಿಡಲು ಬಯಸುವುದಿಲ್ಲವಂತೆ. “ವೈಯಕ್ತಿಕವಾಗಿ ಮುಂಬೈ ತೊರೆಯಲು ಬೇಸರವಾಗಿದೆ, ನನಗೆ ಈ ಮನೆ ಬಿಡಲು ಇಷ್ಟವಿರಲಿಲ್ಲ. ತನ್ನ ಕುಟುಂಬವನ್ನು ರಕ್ಷಿಸಲು ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಯಿತು” ಎಂದು ಹೇಳಿದ್ದಾರೆ ಸನ್ನಿ.

Advertisement

 

Advertisement


ಸನ್ನಿ ತಮ್ಮ ಕೂಲ್ ಸ್ಟೈಲ್ ‘ಗೆ ಮಾತ್ರವಲ್ಲದೆ, ಐಷಾರಾಮಿ ಜೀವನಶೈಲಿಗೂ ಹೆಸರುವಾಸಿಯಾಗಿದ್ದಾರೆ. ಆದರೆ ಅವರು ಈ ಮಟ್ಟಕ್ಕೆ ಬರಲು ಬಹಳ ಕಷ್ಟ ಅನುಭವಿಸಿದ್ದಾರೆ.  ಆ ಇಂಡಸ್ಟ್ರಿಯಿಂದ ಬಂದ ಸನ್ನಿ, ಬಾಲಿವುಡ್ ನಟಿಯಾಗಿ ಬೆಳೆದಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಕೋಟಿಗಟ್ಟಲೆ ಆಸ್ತಿಗೆ ಒಡತಿಯಾಗಿದ್ದಾರೆ. ಸದ್ಯ ತನ್ನ ಇಡೀ ಕುಟುಂಬದೊಂದಿಗೆ ಲಾಸ್ ಏಂಜಲೀಸ್ ಮನೆಯಲ್ಲಿ ವಾಸಿಸುತ್ತಿರುವ ಸನ್ನಿ ಮನೆ ಒಂದು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಐಷಾರಾಮಿ ಬಂಗಲೆಯಲ್ಲಿ 5 ಮಲಗುವ ಕೋಣೆಗಳಿದ್ದು, ಈ ಮನೆ ಅಮೆರಿಕದ ಅತ್ಯಂತ ದುಬಾರಿ ಸ್ಥಳಗಳಲ್ಲಿ ಒಂದಾದ ಬೆವರ್ಲಿ ಹಿಲ್ಸ್’ನಿಂದ ಸುಮಾರು 30 ನಿಮಿಷಗಳ ದೂರದಲ್ಲಿದೆ ಎಂಬುದಂತು ನಿಜ. ಇದಲ್ಲದೆ ಸನ್ನಿ ಮತ್ತು ಡೇನಿಯಲ್ ಮುಂಬೈನ ಜುಹು ಪ್ರದೇಶದಲ್ಲಿ ಸ್ವಂತ ಮನೆ ಹೊಂದಿದ್ದಾರೆ.

Advertisement

 

Advertisement


ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡ ನಂತರ, ನೇರವಾಗಿ ಬಾಲಿವುಡ್’ಗೆ ಪ್ರವೇಶ ಪಡೆದ ಸನ್ನಿ ಸುರಸುಂದರಿ ಎಂಬುದರಲ್ಲಿ ಎರಡು ಮಾತಿಲ್ಲ. ವಯಸ್ಸು 39 ಆದರೂ ಹದಿಹರೆಯದವರೂ ನಾಚಿಕೊಳ್ಳುವಷ್ಟು ಅದ್ಭುತ ಸೌಂದರ್ಯವನ್ನು ಹೊಂದಿದ್ದಾರೆ. ಸನ್ನಿ ಲಿಯೋನ್ ತುಂಬಾ ಸುಂದರವಾಗಿ ಕಾಣಿಸಿಕೊಳ್ಳುವುದನ್ನು ನೋಡಿ ಅನೇಕರಿಗೆ ಸನ್ನಿ ಸೌಂದರ್ಯದ ಗುಟ್ಟೇನು ಎಂದು ಕಾಡದೆ ಇರಲಾರದು. ಆಕೆಯ ಹೊಳೆಯುವ ಚರ್ಮ ಕಂಡು ಹೆಂಗಳೆಯರೇ ಮನ ಸೋತಿದ್ದಾರೆ

Advertisement
Share this on...