ಲಾಕ್ ಡೌನ್ ನಂತರ ಸನ್ನಿ ಮಾಡುವ ಮೊದಲ ಕೆಲಸ ರಿವೀಲ್…..!

in Kannada News/ಮನರಂಜನೆ 52 views

ಕೋರೊನಾ ಭೀತಿಯಿಂದ ಇಡೀ ದೇಶ ಲಾಕ್ ಡೌನ್ ಆದ ಕಾರಣ ಜನರು ಲಾಕ್ ಡೌನ್ ಅವಧಿ ಮುಗಿಯುವುದನ್ನೇ ಕಾಯುತ್ತಿದ್ದಾರೆ. ಈಗ ಬಾಲಿವುಡ್ ಹಾಟ್ ಬೆಡಗಿ ಸನ್ನಿಲಿಯೋನ್ ಲಾಕ್ ಡೌನ್ ಮುಗಿದ ನಂತರ ಮಾಡುವ ಮೊದಲ ಕೆಲಸವನ್ನು ರಿವೀಲ್ ಮಾಡಿದ್ದಾರೆ. ಕೋರೊನಾ ಭೀತಿಯಿಂದ ಮನೆಯಲ್ಲೇ ಕುಳಿತು ಎಲ್ಲರೂ ಬೇಜಾರಾಗಿದ್ದಾರೆ. ಲಾಕ್ ಡೌನ್ ಮುಗಿದ ನಂತರ ಎಲ್ಲಾದರೂ ಟ್ರಿಪ್ ಹೋಗೋಣ ಹೊರಗೆ ಹೋಗೋಣ ಎಂದು ಪ್ಲಾನ್ ಮಾಡುತ್ತಿದ್ದಾರೆ.

Advertisement

 

Advertisement

Advertisement

 

Advertisement

ಆದರೆ ಪಡ್ಡೆ ಹುಡುಗರ ಪಾಲಿನ ಕನಸಿನ ರಾಣಿ ಸನ್ನಿ ಮಾತ್ರ ಲಾಕ್ ಡೌನ್ ಮುಗಿದ ನಂತರ ನನ್ನ ಮೂರು ಮಕ್ಕಳನ್ನು ಶಾಲೆಗೆ ಡ್ರಾಪ್ ಮಾಡಿ ನೆಮ್ಮದಿಯಿಂದ ಉಸಿರಾಡುತ್ತೇನೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಸನ್ನಿಲಿಯೋನ್ ನನ್ನ ಮೂರು ಮಕ್ಕಳು ಬಹಳ ತುಂಟರು ಯಾವಾಗಲೂ ಮನೆಯಲ್ಲಿ ಸಕ್ಕತ್ ಗಲಾಟೆ ಮಾಡುತ್ತಾರೆ. ಅವರ ಜೊತೆ ಯಾರಾದರೂ ಒಬ್ಬರು ಇರಲೇಬೇಕು. ಹಾಗಾಗಿ ಲಾಕ್ ಡೌನ್ ಮುಗಿದ ಬಳಿಕ ನಾನು ಮೊದಲು ಮಾಡುವ ಕೆಲಸವೇನೆಂದರೆ ಅವರನ್ನು ಶಾಲೆಗೆ ಕಾರಿನಲ್ಲಿ ಡ್ರಾಪ್ ಮಾಡಿ ಮನೆಗೆ ಬಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತೇನೆ ಎಂದು ತಿಳಿಸಿದ್ದಾರೆ.

 

 

ನಾನು ದಿನ ನನ್ನ ಮೊದಲ ಮಗು ಬೆಳಿಗ್ಗೆ 6:30ಕ್ಕೆ ಎದ್ದಾಗ ಏಳುತ್ತೇನೆ. ನಂತರ 30 ನಿಮಿಷ ವ್ಯಾಯಾಮ ಮಾಡುತ್ತೇನೆ. ಅಷ್ಟೊತ್ತಿಗೆ ನನ್ನ ಮೂವರು ಮಕ್ಕಳು ಏಳುತ್ತಾರೆ. ಅವರನ್ನು ವಾಕಿಂಗ್ ಕರೆದುಕೊಂಡು ಹೋಗುತ್ತೇನೆ. ನಂತರ ಬಂದು ತಿಂಡಿ ತಿಂದು ಚಾಟ್ ಮಾಡುತ್ತೇನೆ, ಬಳಿಕ ಮಕ್ಕಳಿಗೆ ಊಟ ಮಾಡಿಸಿ ಅವರನ್ನು ಆಟವಾಡಿಸಲು ಕರೆದುಕೊಂಡು ಹೋಗುತ್ತೇನೆ. ಹೀಗೆ ಅವರನ್ನು ದಿನ ಬಿಜಿ಼ಯಾಗಿರುವಂತೆ ಮಾಡಿ ಕಾಲ ಕಳೆಯುತ್ತೇನೆಯೆಂದು ಸನ್ನಿ ಹೇಳಿದ್ದಾರೆ.

 

 

ಕೋರೊನಾ ವೈರಸ್ ಲಾಕ್ ಡೌನ್ ಸಮಯವನ್ನು ತನ್ನ ಮೂವರು ಮಕ್ಕಳು ಮತ್ತು ಪತಿಯ ಜೊತೆ ಹಾಯಾಗಿ ಕಳೆಯುತ್ತಿರುವ ಸನ್ನಿ ತನ್ನ ಅಭಿಮಾನಿಗಳ ಜೊತೆಯು ನಿರಂತರ ಸಂಪರ್ಕದಲ್ಲಿದ್ದಾರೆ. ಸನ್ನಿಲಿಯೋನ್ ರವರಿಗೆ 4 ವರ್ಷದ ಮಗಳು ಮತ್ತು ಅವಳಿ ಪುತ್ರರಿದ್ದಾರೆ. ಸನ್ನಿಯವರು ಲಾಕ್ ಡೌನ್ ಸಮಯದಲ್ಲೂ ತನ್ನ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲೂ ಲಾಕ್ ಡಬ್ ವಿತ್ ಸನ್ನಿ ಎಂಬ ಇನ್ಸ್ಟಾ ಲೈವ್ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಇದರಲ್ಲಿ ಮಾಧ್ಯಮಗಳಿಗೆ ವಿಶೇಷ ಸಂದರ್ಶನ ಮತ್ತು ಇತರೆ ಸೆಲೆಬ್ರಿಟಿಗಳೊಂದಿಗೆ ಲೈವ್ ಬಂದು ಮಾತನಾಡುತ್ತಾರೆ. ಲಾಕ್ ಡೌನ್ ಸಮಯದಲ್ಲೂ ತನ್ನ ಅಭಿಮಾನಿಗಳ ಜೊತೆ ಮಾತನಾಡಲು ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇನೆ ಎಂದು ಸನ್ನಿ ಲಿಯೋನ್ ಹೇಳಿಕೊಂಡಿದ್ದಾರೆ.

– ಸುಷ್ಮಿತಾ

Advertisement
Share this on...