ಸದ್ಯದಲ್ಲೇ ಚೀನಾದಲ್ಲಿ ರಿಲೀಸ್ ಆಗ್ತಿದೆ ‘ಸೂಪರ್ 30’..!

in ಸಿನಿಮಾ 26 views

ವಿಶ್ವವ್ಯಾಪಿ ತಲ್ಲಣ ಮೂಡಿಸಿರುವ ಕೊರೋನಾ ವೈರಸ್ ಹಾವಳಿಯಿಂದ ಚೀನಾ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು ವೈರಸ್ ಅಟ್ಟಹಾಸಕ್ಕೆ ಬಂದ್ ಆಗಿದ್ದ ಚಿತ್ರಮಂದಿರಗಳನ್ನ ನಿಧಾನವಾಗಿ ತೆರೆಯುತ್ತಿವೆ. ಈ ಮಧ್ಯದಲ್ಲೇ ಸದ್ಯ ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಯದ ಸೂಪರ್ ಹಿಟ್ ಸಿನಿಮಾವೊಂದು ಚೀನಾ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಯಾವುದಪ್ಪ ಆ ಸಿನಿಮಾ ಅಂತೀರಾ…?

Advertisement

 

Advertisement

Advertisement

 

Advertisement

ಕೋರೋನಾ ವೈರಸ್ ನಿಂದ ಚೇತರಿಸಿಕೊಂಡ ಬಳಿಕ ಚೀನಾದಲ್ಲಿ ಮೊದಲ ಬಾಲಿವುಡ್ ಸಿನಿಮಾ ಬಿಡುಗಡೆಯಾಗುತ್ತಿದೆ. ಅದು ಹೃತಿಕ್ ರೋಷನ್ ಅಭಿನಯದ ‘ಸೂಪರ್ 30’ ಸಿನಿಮಾ ಎಂದು ಮೂಲಗಳಿಂದ ತಿಳಿದು ಬಂದಿದೆ. ಕೋರೊನಾ ಅಟ್ಟಹಾಸಕ್ಕೆ ವಿಶ್ವದಲ್ಲಿ ಅನೇಕ ರಾಷ್ಟ್ರಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಸಿನಿಮಾ ಉದ್ಯಮ ಸೇರಿದಂತೆ ಜಗತ್ತಿನಾದ್ಯಂತ ಹಲವಾರು ಉದ್ಯಮಗಳು ನೆಲಕಚ್ಚಿವೆ.

 

 

ಎಲ್ಲೆಡೆ ಚಿತ್ರೀಕರಣ ಪ್ರದರ್ಶನ ಸೇರಿದಂತೆ ಸಿನಿಮಾಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಎಲ್ಲವೂ ಸಂಪೂರ್ಣ ಬಂದ್ ಆಗಿದೆ. ಆದರೆ ಈಗ ಚೇತರಿಸಿಕೊಳ್ಳುತ್ತಿರುವ ಚೀನಾದಲ್ಲಿ ಚಿತ್ರಮಂದಿರಗಳು ನಿಧಾನವಾಗಿ ತೆರೆಯುತ್ತಿದ್ದು ರಾಷ್ಟ್ರ ಸಹಜ ಸ್ಥಿತಿಗೆ ಬಂದ ಮೇಲೆ ಕೆಲವು ಹಾಲಿವುಡ್ ಸಿನಿಮಾಗಳನ್ನ ಪ್ರದರ್ಶನ ಮಾಡಲು ಚೀನಾ ಸಜ್ಜಾಗಿದೆ. ಈ ಮಧ್ಯ ಚೀನಾದಲ್ಲಿ ಹಿಂದಿ ಸಿನಿಮಾ ಕೂಡ ರಿಲೀಸ್ ಆಗುತ್ತಿರುವುದು ವಿಶೇಷವಾಗಿದೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬಂದ ಬಳಿಕ ‘ಸೂಪರ್ 30’ ಸಿನಿಮಾ ರಿಲೀಸ್ ಆಗಲಿದೆ. ‘ಸೂಪರ್ 30’ ಸಿನಿಮಾ ಭಾವನಾತ್ಮಕ ಮತ್ತು ಸ್ಪೂರ್ತಿದಾಯಕ ಅಂಶಗಳನ್ನು ಹೊಂದಿರುವ ಚಿತ್ರವಾಗಿದ್ದು ಚೀನಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಿದೆ.

 

 

ಈಗಾಗಲೇ ರಿಲಾಯನ್ಸ್ ಎಂಟರ್ಟೈನ್ಮೆಂಟ್ ಗ್ರೂಪಿನ ಸಿಇಓ ಶಿವಾಶಿಷ್ ಸರ್ಕಾರ್ ಸಿನಿಮಾದ ಸೆನ್ಸಾರ್ ಶಿಪ್ ಅಪ್ಲೈ ಮಾಡಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಆದರೆ ಚೀನಾದಲ್ಲಿ ‘ಸೂಪರ್ 30’ ಯಾವಾಗ ತೆರೆ ಮೇಲೆ ಬರಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

– ಸುಷ್ಮಿತಾ

Advertisement
Share this on...