ಈ ಸೂಪರ್ ಸ್ಟಾರ್’ಗಳ ಉಪನಾಮ ಕೇಳಿದರೆ ನೀವು ಬೆರಗಾಗ್ತೀರಾ !

in ಮನರಂಜನೆ 133 views

ಅನೇಕ ಬಾಲಿವುಡ್ ಸ್ಟಾರ್’ಗಳು ತಮ್ಮ ಹೆಸರಿನಿಂದ ಮಾತ್ರವಲ್ಲದೆ, ಉಪನಾಮದಿಂದಲೂ (ಸರ್ ನೇಮ್) ಪ್ರಸಿದ್ಧರಾಗಿದ್ದಾರೆ. ಆದರೆ ಕೆಲವು ಸ್ಟಾರ್’ಗಳು ತಮ್ಮ ಉಪನಾಮವನ್ನು ಬಳಸುವುದಿಲ್ಲ. ಹೌದು, ಅನೇಕ ಬಾಲಿವುಡ್ ಸ್ಟಾರ್’ಗಳು ಒಂದೇ ಹೆಸರನ್ನು ಬಳಸುತ್ತಾರೆ. ಆದ್ದರಿಂದ ಈ ಸ್ಟಾರ್’ಗಳ ಅಭಿಮಾನಿಗಳು ಅವರ ನಿಜವಾದ ಹೆಸರು ಮತ್ತು ಉಪನಾಮ ಏನು ಎಂದು ತಿಳಿಯಲು ಕಷ್ಟಪಡುತ್ತಾರೆ. ಇಂದು ನಾವು ಕೆಲವು ಸ್ಟಾರ್’ಗಳ ನಿಜವಾದ ಹೆಸರುಗಳು ಮತ್ತು ಉಪನಾಮಗಳನ್ನು ನಿಮಗೆ ಪರಿಚಯಿಸುತ್ತೇವೆ.
ರಜನಿಕಾಂತ್
ಶಿವಾಜಿ ರಾವ್ ಗಾಯಕ್ ವಾಡ್ ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ನಿಜವಾದ ಹೆಸರು. ವಿಶೇಷವೆಂದರೆ ರಜನಿಕಾಂತ್ ಮಾತ್ರವಲ್ಲ, ಅವರ ಮಕ್ಕಳೂ ಗಾಯಕ್ ವಾಡ್ ಉಪನಾಮವನ್ನು ಬಳಸುವುದಿಲ್ಲ. ಅವರ ಮಕ್ಕಳಾದ ಸೌಂದರ್ಯ ಮತ್ತು ಐಶ್ವರ್ಯಾ ಇಬ್ಬರೂ ಉಪನಾಮವಾಗಿ ತಂದೆಯ ಹೆಸರನ್ನು ಇಟ್ಟುಕೊಂಡಿದ್ದಾರೆ.

Advertisement

Advertisement

ಕಾಜೋಲ್
ನಟಿ ಕಾಜೋಲ್ ಕೂಡ ತನ್ನ ಉಪನಾಮವನ್ನು ಬಳಸುವುದಿಲ್ಲ. ಅವರ ಪೂರ್ಣ ಹೆಸರು ಕಾಜೋಲ್ ಮುಖರ್ಜಿ. ಆದರೆ, ಮದುವೆಯ ನಂತರ ಕಾಜೋಲ್ ದೇವಗನ್ ಎಂದು ಹೆಸರು ಬದಲಾಯಿಸಿಕೊಂಡರು. ಇವರು ಬಾಲಿವುಡ್ ಹಿರಿಯ ನಟಿ ತನುಜಾ ಮತ್ತು ನಿರ್ದೇಶಕ ಶೋಮು ಮುಖರ್ಜಿ ಅವರ ಪುತ್ರಿ.
ರೇಖಾ
ಸುಂದರ ನಟಿ ರೇಖಾ ಕೂಡ ತಮ್ಮ ಉಪನಾಮ ಮತ್ತು ಪೂರ್ಣ ಹೆಸರನ್ನು ಬಳಸುವುದಿಲ್ಲ, ಅವರ ಪೂರ್ಣ ಹೆಸರು ಭಾನುರೇಖಾ ಗಣೇಶನ್.
ರಣವೀರ್ ಸಿಂಗ್
ರಣವೀರ್ ಸಿಂಗ್ ಅವರ ಉಪನಾಮ ಭವಾನಿ, ಆದರೆ ಸಿಂಗ್ ಅಲ್ಲ ಎಂದು ಕೆಲವೇ ಜನರಿಗೆ ತಿಳಿದಿದೆ. ಹೌದು, ಅವರ ಪೂರ್ಣ ಹೆಸರು ರಣವೀರ್ ಸಿಂಗ್ ಭವಾನಿ.

Advertisement

 

Advertisement

ಧರ್ಮೇಂದ್ರ
ನಟ ಧರ್ಮೇಂದ್ರ ಅವರ ಉಪನಾಮವನ್ನು ಬಳಸುವುದಿಲ್ಲ. ಅವರ ಮಕ್ಕಳಾದ ಸನ್ನಿ, ಬಾಬಿ ಮತ್ತು ಮಗಳು ಇಶಾ ‘ಡಿಯೋಲ್’ ಎಂಬ ಉಪನಾಮವನ್ನು ಬಳಸುತ್ತಾರೆ.
ಜಿತೇಂದ್ರ
ಬಾಲಿವುಡ್ ನಟ ಜಿತೇಂದ್ರ ಅವರ ಉಪನಾಮ ಕಪೂರ್. ಆದರೆ ಜಿತೇಂದ್ರ ಅವರು ಉಪನಾಮವನ್ನು ಬಳಸುವುದಿಲ್ಲ. ಆದರೆ ಅವರ ಮಗ ತುಷಾರ್ ಮತ್ತು ಮಗಳು ಏಕ್ತಾ ಉಪನಾಮವನ್ನು ಬಳಸುತ್ತಾರೆ.
ಗೋವಿಂದ
ನಟ ಗೋವಿಂದ ಅವರ ಉಪನಾಮ ಅಹುಜಾ. ಇವರ ಪೂರ್ಣ ಹೆಸರು ಗೋವಿಂದ ಅರುಣ್ ಅಹುಜಾ. ಇವರ ಮಗಳು ಟೀನಾ ತನ್ನ ಹೆಸರಿನೊಂದಿಗೆ ಉಪನಾಮವನ್ನು ಬಳಸುತ್ತಾಳೆ. ಆದರೆ ಗೋವಿಂದ ಅವರು ಅದನ್ನು ಬಳಸುವುದಿಲ್ಲ.
ಟಬು
ಟಬು ನಿಜವಾದ ಹೆಸರು ಟಬು ಫಾತಿಮಾ ಹಶ್ಮಿ. ಆದರೆ ಅವರು ಟಬು ಎಂಬ ಹೆಸರನ್ನು ಮಾತ್ರ ಬಳಸುತ್ತಾರೆ.

Advertisement
Share this on...