ಕೇವಲ ಒಂದು ಸಾವಿರಕ್ಕೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ..ಇಂದು ಕೋಟಿ-ಕೋಟಿ ದುಡಿಯುತ್ತಿರುವ ಸ್ಟಾರ್ ನಟ….?

in ಮನರಂಜನೆ/ಸಿನಿಮಾ 100 views

ನಮ್ಮ ತಂದೆ-ತಾಯಿ ಮಾಡಿಡುವ ಆಸ್ತಿಗಿಂತ ನಾವು ನಮ್ಮ ಸ್ವಾಭಿಮಾನದಿಂದ ಸ್ವಂತ ಪರಿಶ್ರಮದಿಂದ 10 ರೂಪಾಯಿ ದುಡಿದರೂ ಏನೋ ಒಂದು ಸಂತೋಷ ಇರುತ್ತದೆ, ಆತ್ಮ ತೃಪ್ತಿ ಸಿಗುತ್ತದೆ. ನನ್ನ ಸ್ವಂತ ಪರಿಶ್ರಮದ ಫಲ ಎನ್ನುವ ಹೆಮ್ಮೆ ಇರುತ್ತದೆ. ಈ ಖ್ಯಾತ ನಟನ ಮಗ ಕೂಡ ಸ್ವಂತ ಪರಿಶ್ರಮದಿಂದ ತನ್ನ ತಂದೆಯ ಬಳಿ ಕೈ ಚಾಚಬಾರದು ನನ್ನ ತಂದೆಯ ಶ್ರೀಮಂತಿಕೆ ನನ್ನ ಹೆಸರಿನ ಜೊತೆ ಸೇರಿಸಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಗಾರ್ಮೆಂಟ್ ಫ್ಯಾಕ್ಟರಿ ಒಂದರಲ್ಲಿ ಯಾರಿಗೂ ತಿಳಿಯದಂತೆ ಕೇವಲ ಒಂದು ಸಾವಿರ ಸಂಬಳಕ್ಕೆ ಕೆಲಸಕ್ಕೆ ಸೇರಿದರು. ಆದರೆ ಇವರು ಇಂದು ದೊಡ್ಡ ಸ್ಟಾರ್ ಆಗಿ ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾರೆ.  ಅಂದಿನ ಕಾಲದ ತಮಿಳಿನ ಖ್ಯಾತ ನಟ ಶಿವಕುಮಾರ್ ರವರ ಮಗ ಈಗಿನ ತಮಿಳಿನ ಖ್ಯಾತ ನಟ ಸೂರ್ಯ. ನಟ ಸೂರ್ಯ ಚಿಕ್ಕಂದಿನಿಂದಲೂ ತುಂಬಾ ಸ್ವಾಭಿಮಾನದ ಹುಡುಗ. ಸೂರ್ಯನ ತಂದೆ ಶಿವಕುಮಾರ್ ರವರು ಸಹ ತಾನೊಬ್ಬ ದೊಡ್ಡ ನಟ ನನ್ನ ಬಳಿ ಹತ್ತಾರು ಕೋಟಿ ಹಣವಿದೆ ಎಂದು ಬೀಗಲಿಲ್ಲ. ತನ್ನ ಮಗನಿಗೂ ಶ್ರೀಮಂತಿಕೆಯ ಅಹಂ ಅನ್ನು ತುಂಬಲಿಲ್ಲ. ಶಿವಕುಮಾರ್ ಮಕ್ಕಳನ್ನು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆಳೆಸಿದರು. ಸೂರ್ಯರವರಿಗೆ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ಇರಲಿಲ್ಲ.

Advertisement

Advertisement

ತಾನೊಬ್ಬ ಸ್ಟಾರ್ ಮಗ ಎಂದು ಹೇಳಿಕೊಳ್ಳದೆ ಸುಮಾರು ಎಂಟು ತಿಂಗಳು ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡಿದರು. ನಂತರ ಆ ಕೆಲಸದಲ್ಲಿ ಅವರಿಗೆ ತೃಪ್ತಿ ಸಿಗಲಿಲ್ಲ. ಕೆಲವು ಸಿನಿಮಾ ಆಫರ್ ಗಳನ್ನು ತಿರಸ್ಕರಿಸಿದ ಸೂರ್ಯ 1997 ರಲ್ಲಿ ಮಣಿರತ್ನಂ ರವರ ನಿರ್ಮಾಣದ ಸಿನಿಮಾವೊಂದರಲ್ಲಿ ನಾಯಕ ನಟನಾಗಿ ಸಿನಿಮಾ ರಂಗ ಪ್ರವೇಶ ಮಾಡಿದರು. ದೊಡ್ಡ ಸ್ಟಾರ್ ನಟನ ಮಗನಾಗಿದ್ದರೂ ಸೂರ್ಯರವರಿಗೆ ಯಶಸ್ಸು ಅಷ್ಟು ಸುಲಭವಾಗಿ ಧಕ್ಕಲಿಲ್ಲ. ತನ್ನ ಸ್ವಂತ ಪ್ರತಿಭೆಯಿಂದ ಸಿನಿಮಾ ರಂಗದಲ್ಲಿ ಮೇಲೆ ಬಂದರು ನಟ ಸೂರ್ಯ ಇಂದು ತಮಿಳು ಚಿತ್ರರಂಗದಲ್ಲಿ ತನ್ನದೇ ಆದ ಇಮೇಜ್ ಹೊಂದಿರುವ ಸೂರ್ಯ ತಮಿಳು ಚಿತ್ರರಂಗದಲ್ಲಿ ದೊಡ್ಡ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಆದರೆ ಅಂದಿನ ಸರಳತೆ, ಸಜ್ಜನಿಕೆ ಸೂರ್ಯರಲ್ಲಿ ಇಂದಿಗೂ ಇದೆ.

Advertisement

 

Advertisement


ಇವರ ತಮ್ಮ ಕಾರ್ತಿಕ್ ಕೂಡ ತಮಿಳಿನ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಇಂದು ಎಷ್ಟೋ ಜನ ಒಂದು ಸಣ್ಣ ಸಾಧನೆ ಮಾಡಿದರೂ ಅವರ ತಲೆ ನಿಲ್ಲುವುದಿಲ್ಲ ಅಹಂಕಾರ ತೋರುತ್ತಾರೆ. ಸಾಮಾನ್ಯರನ್ನು ಕ್ಷೀಣವಾಗಿ ಕಾಣುತ್ತಾರೆ. ಹೀಗಿರುವಾಗ ಕೋಟಿ-ಕೋಟಿ ದುಡಿಯುವ ಸಿನಿಮಾಗಳಲ್ಲಿ ದೊಡ್ಡ ಹೆಸರು ಮಾಡಿರುವ ಸೂರ್ಯರವರ ಸರಳತೆ ಮತ್ತು ಸ್ವಾಭಿಮಾನದ ಬಗ್ಗೆ ತುಂಬ ಹೆಮ್ಮೆ ಎನಿಸುತ್ತದೆ.

– ಸುಷ್ಮಿತಾ

Advertisement
Share this on...