ವಿಶ್ವಸುಂದರಿಯನ್ನು ಕಾಡಿದ ಅಪರೂಪದ ಕಾಯಿಲೆ ! ಹೊರಬಂದದ್ದು ಹೇಗೆ ಗೊತ್ತಾ ?

in ಮನರಂಜನೆ 41 views

ಬಾಲಿವುಡ್ ನಟಿ , 1994 ರ ವಿಶ್ವಸುಂದರಿ ಸುಷ್ಮಿತಾ ಸೇನ್​ 1996 ರಲ್ಲಿ ಅಂದರೆ, ವಿಶ್ವಸುಂದರಿ ಪಟ್ಟ ಅಲಂಕರಿಸಿದ 2 ವರ್ಷಗಳಲ್ಲೇ ‘ದಸ್ತಕ್’​ ಚಿತ್ರದ ಮೂಲಕ ಬಾಲಿವುಡ್​​​ಗೆ ಕಾಲಿಟ್ಟರು. ಸುಷ್ಮಿತಾ​​​​​​​​​​​​ ಬಡಕುಟುಂಬದಿಂದ ಬಂದವರು. ಕೃಷ್ಣಸುಂದರಿಯಾದ ಈಕೆ ತಮ್ಮ ಪ್ರತಿಭೆಯಿಂದಲೇ ಚಿತ್ರರಂಗದಲ್ಲಿ ಹೆಸರು ಮಾಡಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

Advertisement

Advertisement

 

Advertisement

ಸುಷ್ಮಿತಾ ಸೇನ್​​​​​​ಗೆ ಕೆಲವು ವರ್ಷಗಳ ಹಿಂದೆ ವಿಚಿತ್ರ ಕಾಯಿಲೆಯೊಂದು ಕಾಣಿಸಿಕೊಂಡಿತ್ತಂತೆ. ಆದರೆ ಯಾವುದಕ್ಕೂ ಹೆದರದೆ ಆತ್ಮ ವಿಶ್ವಾಸದಿಂದ ತಮಗಿರುವ ಕಾಯಿಲೆಯಿಂದ ಹೋರಾಡಿ ಜಯಗಳಿಸಿದ್ದಾರೆ ಈ ಚೆಲುವೆ. ಅಡಿಸೋನ್ ಎಂಬ ಈ ಕಾಯಿಲೆ ಬಂದಾಗ ಸುಷ್ಮಿತಾ ಸಂರ್ಪೂರ್ಣ ಕೃಶವಾಗಿದ್ದರಂತೆ. ದೇಹ ಬಹಳ ಬಲಹೀನವಾಗಿತ್ತು. ನಾನು ಬದುಕುವುದೇ ಇಲ್ಲ ಎಂದುಕೊಂಡಿದ್ದೆ. ಆದರೆ ನಾನು ಹೆದರಿದರೆ ಈ ಕಾಯಿಲೆಯಿಂದ ಹೊರ ಬರುವುದು ಸಾಧ್ಯವಿಲ್ಲ ಎಂದರಿತ ಸುಷ್ಮಿತಾ ನಿಯಮಿತ ವ್ಯಾಯಾಮ, ಯೋಗ, ಡಯಟ್ ಮೂಲಕ ಆ ಕಾಯಿಲೆಯಿಂದ ಹೊರ ಬಂದರಂತೆ.

Advertisement

 

 

ಸುಷ್ಮಿತಾ ಬಾಲ್ಯದಿಂಲೂ ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದಾರೆ. ಹೈದರಾಬಾದ್​​ನಲ್ಲಿ ಹುಟ್ಟಿ ಬೆಳೆದ ಸುಷ್ಮಿತಾ ಸೆನ್​ ಮೂಲತ: ಬಂಗಾಳಿ ಕುಟುಂಬಕ್ಕೆ ಸೇರಿದವರು. ಬಾಲ್ಯದಿಂದಲೇ ಮಾಡೆಲಿಂಗ್​​ನತ್ತ ಒಲವು ಹೊಂದಿದ್ದ ಸುಷ್ಮಿತಾ ಸೆನ್​ 1994 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಜಯಗಳಿಸಿದರು. ಅದೇ ವರ್ಷ ವಿಶ್ವಸುಂದರಿ ಕಿರೀಟ ಗಳಿಸಿದರು. 1996 ರಲ್ಲಿ ದಸ್ತಕ್ ಚಿತ್ರದ ಮೂಲಕ ಸಿನಿರಂಗಕ್ಕೆ ಬಂದ ಸುಷ್ಮಿತಾ ಸೆನ್ ನಂತರ ಸಿರ್ಫ್ ತುಮ್, ಹಿಂದುಸ್ಥಾನ್ ಕಿ ಕಸಮ್, ಬೀವಿ ನಂ 1, ಫಿಲಾಲ್ ಸೇರಿ ಬಹುತೇಕ ಸಿನಿಮಾಗಳಲ್ಲಿ ನಟಿಸಿದರು.

 

ದಿನ ಕಳೆದಂತೆ ಸಿನಿಮಾಗಳಿಂದ ದೂರ ಉಳಿಯುತ್ತಿರುವ ಸುಷ್ಮಿತಾ ಈಗ ಸಮಾಜಸೇವೆಯಲ್ಲಿ ಬ್ಯುಸಿ ಇದ್ದಾರೆ. ವಿಶೇಷ ಎಂದರೆ ಸುಷ್ಮಿತಾ ಬಹಳ ವರ್ಷಗಳ ಹಿಂದೆಯೇ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಸುಷ್ಮಿತಾಗೆ ಈಗ 44 ವರ್ಷ ವಯಸ್ಸು. ಆದರೆ ತನಗಿಂತ 15 ವರ್ಷದ ಕಿರಿಯವರಾದ ರೋಹ್ಮನ್ ಅವರೊಂದಿಗೆ ರಿಲೇಶನ್​ಶಿಪ್​​​​ನಲ್ಲಿದ್ದು ಇಬ್ಬರೂ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.

Advertisement
Share this on...