ಕ್ಯಾನ್ಸರ್ ರೋಗಿಗಳಿಗೆ ಕೂದಲು ನೀಡಿದ ಶ್ವೇತಾ ಟ್ರೋಲ್ ಗೆ ಒಳಗಾಗಿದ್ಯಾಕೆ?

in ಮನರಂಜನೆ/ಸಿನಿಮಾ 329 views

ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸುವುದಕ್ಕಾಗಿ ಕೂದಲು ಬೇಕಾಗುತ್ತದೆ. ಅದೇ ಕಾರಣದಿಂದ ಹಲವರು ತಮ್ಮ ಕೂದಲುಗಳನ್ನು ಬೆಳೆಸಿ, ಕತ್ತರಿಸಿ ದಾನ ಮಾಡುತ್ತಾರೆ. ಸೆಲೆಬ್ರಿಟಿಗಳು ಕೂಡಾ ಈ ಕಾರ್ಯವನ್ನು ಮಾಡುವ ಮೂಲಕ ಕ್ಯಾನ ರೋಗಿಗಳಿಗೆ ನೆರವಾಗುತ್ತಾರೆ‌. ರಾಧಾ ರಮಣ ಧಾರಾವಾಹಿಯಲ್ಲಿ ಆರಾಧನಾ ಳಾಗಿ ಮನೆ ಮಾತಾಗಿರುವ ಶ್ವೇತಾ ಪ್ರಸಾದ್ ಅವರು ಕೂಡಾ ಇದೀಗ ತಮ್ಮ ನೀಳವಾದ ಕೂದಲನ್ನು ಕತ್ತರಿಸಿ ದಾನ ಮಾಡಿದ್ದರು. ಮತ್ತು ಅವರು ಈ ವಿಚಾರವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಜೊತೆಗೆ ವಿಡಿಯೋವೊಂದನ್ನು ಕೂಡಾ ಶೇರ್ ಮಾಡಿದ್ದರು. ಶ್ವೇತಾ ಪ್ರಸಾದ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ಬಂದಿದೆ ನಿಜ. ಇದರ ಜೊತೆಗೆ ಆಕೆ ಟ್ರೋಲ್ ಗೂ ಒಳಗಾಗಿದ್ದಾರೆ. ಕೂದಲು ದಾನ ಮಾಡಿದ್ದೀರಿ ಸರಿ, ಅದನ್ನು ಯಾಕೆ ಪ್ರಚಾರ ಮಾಡುತ್ತಿದ್ದೀರಿ, ಬರೇ ಕೂದಲು ಯಾಕೆ, ಬೇರೆ ಅಂಗಾಂಗ ಯಾಕೆ ದಾನ ಮಾಡುತ್ತಿಲ್ಲ ಎಂಬ ಕಮೆಂಟ್ ಗಳು ಕೂಡಾ ಅವರ ಪೋಸ್ಟ್ ಗೆ ಬಂದಿತ್ತು. ಇದರ ಜೊತೆಗೆ ಇಂತಹ ಕೆಲಸಗಳಿಗೆ ಕೈ ಜೋಡಿಸುವುದು ಹೇಗೆ ಎಂಬ ಪ್ರಶ್ನೆಯನ್ನು ಹಲವರು ಕೇಳಿದ್ದರು. ಈಗ ಇದಕ್ಕೆಲ್ಲಾ ಉತ್ತರಿಸಿದ್ದಾರೆ ಶ್ವೇತಾ.

Advertisement

Advertisement

“ನನಗೆ ಅಂಗಾಂಗ ದಾನ ಮಾಡಬೇಕು ಎಂದು ಅನಿಸಿದ್ದರೆ ಅದನ್ನು ಕೂಡಾ ಮಾಡುವೆ” ಎಂದು ಕಡ್ಡಿ ಮುರಿದ ರೀತಿ ಹೇಳಿದ ಶ್ವೇತಾ ಇದೀಗ ಹತ್ತು ಇಂಚುಗಳಷ್ಟು ಉದ್ದ ಕೂದಲು ಬಿಟ್ಟಿದ್ದು ಅದನ್ನು ಕ್ಯಾನ್ಸರ್ ರೋಗಿಗಳಿಗಾಗಿ ನೀಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ನನಗೆ ಈ ರೀತಿಯ ಆಲೋಚನೆ ಬಂದಿದ್ದು ಅದೇ ಕಾರಣದಿಂದ ಕೂದಲನ್ನು ಕತ್ತರಿಸದೇ ಹಾಗೆಯೇ ಬಿಟ್ಟಿದ್ದೆ” ಎನ್ನುತ್ತಾರೆ ಶ್ವೇತಾ.

Advertisement

” ನಾನು ಇಲ್ಲಿಯ ತನಕ ಎರಡು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದೇನ ನಿಜ. ಹಾಗೇ ನೋಡಿದರೆ ಧಾರಾವಾಹಿಯಲ್ಲಿಯೂ ನನ್ನ ಕೂದಲು ಇಷ್ಟು ಉದ್ದವಿರಲಿಲ್ಲ. ಆದರೆ ಲಾಕ್ ಡೌನ್ ಸಮಯದಲ್ಲಿ ನಾನು ಈ ನಿರ್ಧಾರ ತೆಗೆದುಕೊಂಡಿದೆ. ಅದೇ ಕಾರಣದಿಂದ ಕೂದಲನ್ನು ಬೆಳೆಸಿದೆ. ಮತ್ತು ಇದೀಗ ಅದನ್ನು ಕ್ಯಾನ್ಸರ್ ರೋಗಿಗಳಿಗಾಗಿ ನೀಡಿದ್ದೇನೆ. ತುಂಬಾ ಸಂತಸವಾಗುತ್ತಿದೆ” ಎಂದ ಹೇಳುತ್ತಾರೆ ಶ್ವೇತಾ.

Advertisement

ತುಂಬಾ ಜನ ಹೆಣ್ಮಕ್ಕಳು ಸಂಪ್ರದಾಯದ ಕಾರಣದಿಂದ ತಮ್ಮ ಕೂದಲನ್ನು ಕತ್ತರಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಇದರ ಜೊತೆಗೆ ಇನ್ನು ಕೆಲವು ಹೆಂಗಸರು ತಮ್ಮ ಗಂಡಂದಿರು ತಮ್ಮ ನೀಳವಾದ ಕೂದಲನ್ನು ಇಷ್ಟ ಪಡುತ್ತಿದ್ದಾರೆ ಎಂಬುದಕ್ಕೆ ಅದನ್ನು ಕತ್ತರಿಸಿಕೊಳ್ಳುವುದಿಲ್ಲ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಆದರೆ ಕೂದಲಿನಿಂದಲೇ ಸೌಂದರ್ಯ ಎಂಬ ಮಾತು ಸುಳ್ಳು. ಕೂದಲು ಇಲ್ಲ ಎಂದರೂ ನಮ್ಮನ್ನು ನಾವು ಪ್ರೀತಿಸಲು ತಿಳಿದಿರಬೇಕು ಎಂದು ಹೇಳಿದ್ದಾರೆ ಶ್ವೇತಾ.
– ಅಹಲ್ಯಾ

ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿ ಕೃಪೆಯಿಂದ ಈ ರಾಶಿಗಳಿಗೆ ಇಂದು , ಇಂದಿನ ನಿಮ್ಮ ರಾಶಿ ಭವಿಷ್ಯ ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿ9886027322. ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 11 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀ ಸುಬ್ರಮಣ್ಯ ಆಚಾರ್ಯ ದೈವಶಕ್ತಿ ಜ್ಯೋತಿಷ್ಯರು . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9886027322 ಪರಿಹಾರ ಮಾಡಿಕೊಡುತ್ತಾರೆ.

Advertisement
Share this on...