ಜಾಗರೂಕತೆಯಿಂದ ಮುಂದಿನ ಹೆಜ್ಜೆ ಇಡಿ; ಇಲ್ಲಿದೆ ಹೊಸ ಮಾರ್ಗಸೂಚಿ

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 165 views

ಕೊರೊನಾ ಸೋಂಕು ಇನ್ನೂ ಮುಂದುವರೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ನವೆಂಬರ್ 30ರವರೆಗೂ ಈ ಹಿಂದಿನ ಸೆಪ್ಟೆಂಬರ್ 30ರಂದು ಹೊರಡಿಸಿದ್ದ ಮಾರ್ಗಸೂಚಿಗಳೇ ಅನ್ವಯವಾಗಲಿದೆ ಎಂದು ತಿಳಿಸಿದೆ. ಇನ್ನು ದೇಶದಲ್ಲಿ ಕೊರೊನಾದಿಂದ ಗುಣಮುಖರಾಗುತ್ತಿರುವವ ಸಂಖ್ಯೆ ಹೆಚ್ಚುತ್ತಿದ್ದು, ಮರಣ ಪ್ರಮಾನವೂ ಕಡಿಮೆಯಾಗುತ್ತಿದೆ. ಆದರೆ ಕೊರೊನಾ ಸೋಂಕು ಹರಡುವಿಕೆ ಇನ್ನೂ ಮುಂದುವರಿದಿದೆ. ಅಲ್ಲದೇ ಮುಂದಿನ ಮೂರು ತಿಂಗಳು ಚಳಿಗಾಲವಾಗಿರುವುದರಿಂದ ವೈರಸ್ ಹೇಗೆ ಹರಡಬಹುದು ಎಂಬ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ. ಈ ನಿಟ್ಟಿನಲ್ಲಿ ಮುಂಜಾಗೃತೆಯಿಂದ ಜನರು ಮುಂದಡಿಯಿಡುವುದು ಒಳಿತು.  ಕಂಟೈನ್ಮೆಂಟ್ ವಲಯಗಳಲ್ಲಿ ನ.30ರವರೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಕಂಟೈನ್ಮೆಂಟ್ ವಲಯಗಳ ಹೊರತುಪಡಿಸಿ ಲಾಕ್ ಡೌನ್ ಘೋಷಿಸಬೇಕೋ ಬೇಡವೋ ಎಂಬುದನ್ನು ಜಿಲ್ಲಾಡಳಿತಗಳು ನಿರ್ಧರಿಸಲು ಸ್ವತಂತ್ರವಾಗಿವೆ.

Advertisement


ಕಂಟೈನ್ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಬಹುತೇಕ ಎಲ್ಲಾ ಚಟುವಟಿಕೆಗಳನ್ನು ಕ್ರಮೇಣ ತೆರೆಯಲಾಗಿದೆ. ಇಲ್ಲಿ ಬಹುತೇಕ ಚಟುವಟಿಕೆಗಳಿಗೆ ಅನುಮತಿಸಲಾಗಿದೆ, ಹೆಚ್ಚಿನ ಸಂಖ್ಯೆಯ ಜನರನ್ನು ಒಳಗೊಳ್ಳುವ ಕೆಲವು ಚಟುವಟಿಕೆಗಳಿಗೂ ಕೆಲವೊಂದು ನಿರ್ಬಂಧಗಳು ಮತ್ತು ಆರೋಗ್ಯ ಮತ್ತು ಸುರಕ್ಷತೆಯ ಮುನ್ನೆಚ್ಚರಿಕೆ ಕುರಿತ ಎಸ್.ಓ.ಪಿ.ಗಳ ಪಾಲನೆಯೊಂದಿಗೆ ಅವಕಾಶ ನೀಡಲಾಗಿದೆ. ಈ ಚಟುವಟಿಕೆಗಳಲ್ಲಿ ಮೆಟ್ರೋ ರೈಲು, ಶಾಂಪಿಗ್ ಮಾಲ್ ಗಳು, ಹೊಟೆಲ್, ರೆಸ್ಟೋರೆಂಟ್ ಗಳು ಮತ್ತು ಆತಿಥ್ಯ ಸೇವೆಗಳು, ಧಾರ್ಮಿಕ ಸ್ಥಳಗಳು, ಯೋಗ ಮತ್ತು ತರಬೇತಿ ಸಂಸ್ಥೆಗಳು, ಜಿಮ್ ಗಳು, ಸಿನಿಮಾ, ಮನರಂಜನಾ ಪಾರ್ಕ್ ಇತ್ಯಾದಿ ಸೇರಿವೆ.
ಶಾಲೆಗಳು ಮತ್ತು ತರಬೇತಿ ಕೇಂದ್ರಗಳು, ಸಂಶೋಧನಾ ವಿದ್ಯಾರ್ಥಿಗಳಿಗಾಗಿ ರಾಜ್ಯ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು, 100ಕ್ಕಿಂತ ಹೆಚ್ಚಿನ ಜನರು ಸೇರುವುದಕ್ಕೆ ಅವಕಾಶ ನೀಡುವುದು ಇತ್ಯಾದಿ ಸೇರಿವೆ.

Advertisement

ಕೆಲವೊಂದು ನಿರ್ಬಂಧಗಳಗಳೊಂದಿಗೆ ಈ ಚಟುವಟಿಕೆಗಳಿಗೂ ಅನುಮತಿ :
* ಎಂಎಚ್‌.ಎ ಅನುಮತಿಸಿದಂತೆ ಪ್ರಯಾಣಿಕರ ಅಂತಾರಾಷ್ಟ್ರೀಯ ವಿಮಾನ ಯಾನ.
* ಕ್ರೀಡಾಪಟುಗಳ ತರಬೇತಿಗಾಗಿ ಈಜುಕೊಳಗಳನ್ನು ಬಳಕೆ.
* ಬಿಸಿನೆಸ್ ಟು ಬ್ಯುಸಿನೆಸ್ (ಬಿ 2 ಬಿ) ಉದ್ದೇಶಗಳಿಗಾಗಿ ಪ್ರದರ್ಶನ ಸಭಾಂಗಣಗಳು.
* ತಮ್ಮ ಆಸನ ಸಾಮರ್ಥ್ಯದ ಶೇ.50 ವರೆಗೆ ಸಿನೆಮಾಗಳು / ಚಿತ್ರಮಂದಿರಗಳು / ಮಲ್ಟಿಪ್ಲೆಕ್ಸ್‌ ಗಳು.
* ಮುಚ್ಚಿದ ಸ್ಥಳಗಳಲ್ಲಿ ಸಾಮಾಜಿಕ / ಶೈಕ್ಷಣಿಕ / ಕ್ರೀಡೆ / ಮನರಂಜನೆ / ಸಾಂಸ್ಕೃತಿಕ / ಧಾರ್ಮಿಕ / ರಾಜಕೀಯ ಕಾರ್ಯಕ್ರಮಗಳು ಮತ್ತು ಇತರ ಸಭೆಗಳು ಸಭಾಂಗಣ ಸಾಮರ್ಥ್ಯದ ಶೇ. 50 ಮತ್ತು ಗರಿಷ್ಠ 200 ವ್ಯಕ್ತಿಗಳ ಮಿತಿಗೆ ಒಳಪಟ್ಟಿರುತ್ತದೆ

Advertisement

ಕೊವಿಡ್ ನಿಯಮ ಪಾಲಿಸಿ:
ಪ್ರತಿಯೊಬ್ಬ ನಾಗರಿಕರೂ ತಮ್ಮ ನಿತ್ಯ ಬದುಕಿನಲ್ಲಿ ಕೋವಿಡ್-19 ಸೂಕ್ತ ನಡವಳಿಕೆಯನ್ನು ಅಳವಡಿಸಿಕೊಳ್ಳುವ ಮೂಲಕ ಸಾಕಷ್ಟು ಎಚ್ಚರಿಕೆ ವಹಿಸುವ ಅವಶ್ಯಕತೆಯಿದೆ. ಕೋವಿಡ್ 19 ಸೂಕ್ತ ನಡವಳಿಕೆಯ ಕುರಿತ ಈ ಕೆಳಕಂಡ ಮೂರು ಮಂತ್ರಗಳನ್ನು ಅನುಸರಿಸುವುದು ಸೂಕ್ತ
* ಮಾಸ್ಕ್ ಗಳನ್ನು ಸರಿಯಾಗಿ ಧರಿಸಿ
* ಕೈಗಳನ್ನು ಪದೇ ಪದೇ ತೊಳೆದುಕೊಳ್ಳಿ; ಮತ್ತು
*. ಎರಡು ಗಜ ದೂರವನ್ನು ಕಡ್ಡಾಯವಾಗಿ ಪಾಲಿಸಿ.
* ನಾಗರಿಕರಲ್ಲಿ ಶಿಸ್ತು ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಮೂಡಿಸುವ ತುರ್ತು ಅವಶ್ಯಕತೆಯಿದೆ.
* ಸೂಕ್ಷ್ಮ (ದುರ್ಬಲ) ವ್ಯಕ್ತಿಗಳು, ಅಂದರೆ, 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಸಹ-ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಅಗತ್ಯ ಅವಶ್ಯಕತೆಗಳನ್ನು ಪೂರೈಕೆ ಮತ್ತು ಆರೋಗ್ಯ ಉದ್ದೇಶಗಳಿಗಾಗಿ ಹೊರತುಪಡಿಸಿ ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ.
* ಆರೋಗ್ಯ ಸೇತು ಮೊಬೈಲ್ ಆಪ್ ಬಳಕೆಯನ್ನು ನಿರಂತರವಾಗಿ ಉತ್ತೇಜಿಸಬೇಕು

Advertisement

Advertisement
Share this on...