ಈಕೆ ವಿಶ್ವದ ಅತಿ ಎತ್ತರದ ಮಾಡೆಲ್, ಎತ್ತರ ಎಷ್ಟಿರಬಹುದು ಹೇಳಿ ನೋಡೋಣ ?

in ಮನರಂಜನೆ/ಸಿನಿಮಾ 56 views

ನಮಗೆಲ್ಲಾ ಅತಿ ಎತ್ತರದ ಹೀರೋಗಳು ಎಂದರೆ ಸುದೀಪ್, ದರ್ಶನ್, ಪ್ರಭಾಸ್, ಬಾಲಿವುಡ್ನ ಅಮಿತಾಬ್ ಬಚ್ಚನ್, ಹೃತಿಕ್ ರೋಷನ್, ಅಕ್ಷಯ್ ಕುಮಾರ್ ಮುಂತಾದ ನಟರು ನೆನಪಿಗೆ ಬರುತ್ತಾರೆ. ಆದರೆ ಈ ನಾಯಕರೆಲ್ಲಾ ಬಹುಶಃ ವಿಶ್ವದ ಅತಿ ಎತ್ತರದ ಈ ರೂಪದರ್ಶಿಯ ಮುಂದೆ ಕುಳ್ಳಗೆ ಕಾಣಬಹುದೇನೋ!.  ಹೌದು, ಇಂದು ನಾವು ಹೇಳುತ್ತಿರುವ ರೂಪದರ್ಶಿಯ ಬಗ್ಗೆ ಕೇಳಿ ನಿಮಗೆ ಅತಿಶಯೋಕ್ತಿ ಅನಿಸಿದರೂ ಇದೇ ನಿಜ. ಉದ್ದವು ರೂಪದರ್ಶಿಗಳಿಗೆ ಪ್ರಮುಖ ಮಾನದಂಡಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಆದರೆ ಅವರು ತುಂಬಾ ಉದ್ದವಾಗಿದ್ದರೆ, ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ದಾಖಲಿಸಬಹುದು. ಇಂದು ನಾವು ಮಾತನಾಡುತ್ತಿರುವುದು ಸಹ ವಿಶ್ವದ ಅತಿ ಅತ್ತರದ ಮಾಡೆಲ್ ರಷ್ಯಾದ ಎಕಟೆರಿನಾ ಲಿಸಿನಾ ಅವರ ಬಗ್ಗೆ. ಅವರ ತುಂಬಾ ಎತ್ತರ ಬೆಳೆದಿದ್ದು, ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಹೃತಿಕ್ ರೋಷನ್ ಕೂಡ ನೋಡಲು ಇವರ ಮುಂದೆ ಕುಳ್ಳರ ತರಹ ಕಾಣುತ್ತಾರೆ.  ಎಕಟೆರಿನಾ ಲಿಸಿನಾ ಜನಿಸಿದಾಗ, ಆಕೆ ಬಹಳ ಎತ್ತರ ಬೆಳೆಯುತ್ತಾಳೆ ಎಂದು ಆಕೆಯ ಪೋಷಕರು ಭಾವಿಸಿದ್ದರು. ಎಕಟೆರಿನಾ ಲಿಸಿನಾ 16 ವರ್ಷದವಳಿದ್ದಾಗ 6 ಅಡಿ 6 ಇಂಚು ಎತ್ತರವಿದ್ದರು. ಅದಕ್ಕೂ ಮುನ್ನ ತಮ್ಮ 15 ನೇ ವಯಸ್ಸಿನಲ್ಲಿ ಮೊದಲ ಬ್ಯಾಸ್ಕೆಟ್ಬಾಲ್ ಒಪ್ಪಂದಕ್ಕೆ ಸಹಿ ಹಾಕಿ, ರಾಷ್ಟ್ರೀಯ ತಂಡದ ಸದಸ್ಯರಾಗಿ ಹಲವಾರು ಪಂದ್ಯಗಳನ್ನು ಆಡಿದರು. ಕೊನೆಗೆ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕವನ್ನೂ ಗೆದ್ದರು.

Advertisement

Advertisement

ಎಕಟೆರಿನಾ ಲಿಸಿನಾ ಎತ್ತರವಿದ್ದರಿಂದ ಶಾಲೆಯಲ್ಲಿ ಹೆಚ್ಚು ಕಿಂಡಲ್ ಮಾಡುತ್ತಿದ್ದರು. ಹುಡುಗಿಯರಿಂದ ಹುಡುಗರವರೆಗೆ ಪ್ರತಿಯೊಬ್ಬರು ಅವರನ್ನು ಗೇಲಿ ಮಾಡುತ್ತಿದ್ದರು. ಇದನ್ನೆಲ್ಲಾ ಎದುರಿಸಲು ತನ್ನ ಸಹೋದರನನ್ನು ಶಾಲೆಗೆ ಕರೆಯಬೇಕಾಗಿತ್ತು ಎಂದು ಎಕಟೆರಿನಾ ಲಿಸಿನಾ ಸಂದರ್ಶನವೊಂದರಲ್ಲಿ ಹೇಳಿದ್ದರು.  ಹಾಗಾದರೆ ಎಕಟೆರಿನಾ ಲಿಸಿನಾ ಎಷ್ಟು ಎತ್ತರ ಇರಬಹುದು ಎಂದು ನೀವು ಊಹಿಸುತ್ತೀದ್ದೀರಾ? ಕತ್ರಿನಾ ಎತ್ತರ ಕೇವಲ 6 ಅಡಿ 9 ಇಂಚು. ಅಂದಹಾಗೆ ಎಕಟೆರಿನಾ ಲಿಸಿನಾ ಬ್ಯಾಸ್ಕೆಟ್ಬಾಲ್ ತೊರೆದ ನಂತರ, ಮಾಡೆಲಿಂಗ್ಗೆ ಹೋಗಲು ನಿರ್ಧರಿಸಿದರು. ಮಾಡೆಲಿಂಗ್ ಸಮಯದಲ್ಲಿ, ಅವರು ಮತ್ತು ಅವರ ವ್ಯವಸ್ಥಾಪಕರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ಗೆ ಅರ್ಜಿ ಸಲ್ಲಿಸುವ ಆಶಯವನ್ನು ವ್ಯಕ್ತಪಡಿಸಿದರು.

Advertisement


ಕೊನೆಗೆ ಎಕಟೆರಿನಾ ಲಿಸಿನಾ ಎತ್ತರ ಪರಿಗಣಿಸಿ ಗಿನ್ನೆಸ್ ಅವರನ್ನು ವಿಶ್ವದ ಅತಿ ಉದ್ದದ ಮಾಡೆಲ್ ಎಂದು ಪರಿಗಣಿಸಿತು. ಇಷ್ಟು ಮಾತ್ರವಲ್ಲ, ಉದ್ದನೆಯ ಕಾಲುಗಳನ್ನು ಹೊಂದಿರುವ ಮಹಿಳೆ ಎಂದೂ ಪರಿಗಣಿಸಿತು. ಎಕಟೆರಿನಾ ಲಿಸಿನಾ ಪಾದಗಳೇ ಕೇವಲ 4 ಅಡಿ 3 ಇಂಚು ಉದ್ದವಿದೆ. ಎಕಟೆರಿನಾ ಲಿಸಿನಾ ತನ್ನದೇ ಆದ ಮಾಡೆಲಿಂಗ್ ಏಜೆನ್ಸಿಯನ್ನು ಸಹ ಹೊಂದಿದ್ದು, ಏಜೆನ್ಸಿ ಎಕಟೆರಿನಾ ಲಿಸಿನಾ ಅವರಂತಹ ಎತ್ತರದ ಮಾಡೆಲ್’ಗಳನ್ನು ನೇಮಿಸಿಕೊಳ್ಳುತ್ತದೆ.

Advertisement

Advertisement
Share this on...