ಕೆಜಿಎಫ್ ಸ್ಪೆಷಲ್ ಸಾಂಗ್’ಗೆ ಹೆಜ್ಜೆ ಹಾಕಿದ್ದ ತಮನ್ನಾ ಭಾಟಿಯಾ ಕಲಿಯಲು ಬಯಸುತ್ತಿರುವ ಭಾಷೆ ಯಾವುದು ಗೊತ್ತಾ ?

in ಸಿನಿಮಾ 153 views

ಶೀರ್ಷಿಕೆ ನೋಡಿ ನಿಮಗೆ ಸೌತ್ ಬ್ಯೂಟಿ ತಮನ್ನಾ ಭಾಟಿಯಾ ಮಾತೃ ಭಾಷೆ ಯಾವುದೆಂದೂ ಕುತೂಹಲ ಹೆಚ್ಚಾಗಿರಬಹುದು ಅಲ್ಲವೇ?, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಮನ್ನಾ ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಪ್ರವೀಣತೆ ಪಡೆದಿದ್ದಾರೆ. ಆದರೂ ತನ್ನ ಎಲ್ಲಾ ಚಿತ್ರಗಳ ಸಂಭಾಷಣೆಗಳನ್ನು ತೆಲುಗಿನಲ್ಲಿ ಡಬ್ ಮಾಡುತ್ತಿದ್ದಾರೆ. ಅಂದಹಾಗೆ ತಮನ್ನಾ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಇನ್ನು ತಾಯಿ ಮತ್ತು ತಂದೆ ಮನೆಯಲ್ಲಿ ಸಿಂಧಿ ಮಾತನಾಡುತ್ತಾರೆ. ಆದ್ದರಿಂದ ತಮನ್ನಾ ಈಗ ತನ್ನ ಮಾತೃ ಭಾಷೆ ಕಲಿಯಲು ನಿರ್ಧರಿಸಿದ್ದಾರಂತೆ.ಹೌದು, ಲಾಕ್ಡೌನ್ ಅವಧಿಯನ್ನು ತಮನ್ನಾ ಮಾತೃ ಭಾಷೆ ಸಿಂಧಿ ಕಲಿಯಲು ಬಯಸುತ್ತಿದ್ದಾರೆ. ಇದರಿಂದಾಗಿ ಆಕೆ ತನ್ನ ಮಾತೃ ಭಾಷೆಯಲ್ಲಿ ತನ್ನ ಹೆತ್ತವರೊಂದಿಗೆ ಸುಲಭವಾಗಿ ಮಾತುಕತೆ ನಡೆಸಬಹುದು. ‘ಬಾಹುಬಲಿ’ ಯಂತಹ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ತಮನ್ನಾ, ಇದುವರೆಗೂ ದಕ್ಷಿಣ ಭಾರತದ ಹಲವಾರು ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ್ದಾರೆ. ತಮನ್ನಾ ಹಿಂದಿ ಚಲನಚಿತ್ರ ಪ್ರಿಯರಿಗೂ ಚಿರಪರಿಚಿತ ಮುಖ. ಬಾಲಿವುಡ್’ನಲ್ಲಿ ಅವರು ‘ಎಂಟರ್ಟೈನ್ಮೆಂಟ್’ ಮತ್ತು ‘ಹಮ್ಶಕಲ್ಸ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನವಾಜುದ್ದೀನ್ ಸಿದ್ದಿಕಿ ಅಭಿನಯದ ‘ಬೋಲೆ ಚುಡಿಯಾನ್’ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Advertisement

 

Advertisement


ಈಗ ಕನ್ನಡ ಚಿತ್ರರಂಗದಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಲು ತಮನ್ನಾ ಯೋಜಿಸುತ್ತಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ. ಹೌದು, ‘ಕೆಜಿಎಫ್: ಚಾಪ್ಟರ್ 2’ ರ ನಂತರ ತಮನ್ನಾ ಅವರಿಗೆ ಯಶ್ ಅವರ ಮುಂದಿನ ಚಿತ್ರದಲ್ಲಿಯೂ ಕೆಲಸ ಮಾಡಲು ಅವಕಾಶ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ. ಇನ್ನೇನು ತಯಾರಕರು ತಮನ್ನಾ ಗ್ರೀನ್ ಸಿಗ್ನಲ್’ಗೆ ಕಾಯುತ್ತಿದ್ದಾರೆ ಎಂದು ವರದಿಯಾಗಿದೆ. ತಮನ್ನಾ ಒಂದು ವೇಳೆ ಸ್ಯಾಂಡಲ್ ವುಡ್’ಗೆ ಬಂದಿದ್ದೇ ಆದಲ್ಲಿ, ಇಲ್ಲಿನ ಎಲ್ಲ ಸ್ಟಾರ್ ನಾಯಕಿಯರಿಗೆ ಟಫ್ ಕಾಂಪಿಟೇಶನ್ ಕೊಡುವುದರಲ್ಲಿ ಎರಡು ಮಾತಿಲ್ಲ.

Advertisement

 

Advertisement


ಈ ಹಿಂದೆ ಯಶ್ ಅಭಿನಯದ ಕೆಜಿಎಫ್: ಚಾಪ್ಟರ್ 1 ರಲ್ಲಿ ಸ್ಪೆಷಲ್ ಸಾಂಗ್’ಗೆ ಹೆಜ್ಜೆ ಹಾಕಿದ್ದರು ತಮನ್ನಾ. ಈಗ ಎಲ್ಲಾ ಅಂದುಕೊಂಡಂತೆ ನಡೆದರೆ ಮುಂದಿನ ಚಿತ್ರದಲ್ಲಿ ಯಶ್ ಅವರೊಂದಿಗೆ ತಮನ್ನಾ ರೋಮ್ಯಾನ್ಸ್ ಮಾಡುವುದನ್ನು ನೋಡಬಹುದು. ತಮನ್ನಾ ಪ್ರಸ್ತುತ ಸೌತ್ ಚಿತ್ರಗಳಲ್ಲಿ ದೊಡ್ಡ ದೊಡ್ಡ ಸ್ಟಾರ್’ಗಳ ಜೊತೆ ನಟಿಸುತ್ತಿರುವುದಲ್ಲದೆ, ತೆಲುಗು ಮತ್ತು ತಮಿಳು ಎರಡರಿಂದಲೂ ಸ್ಟಾರ್ ನಟರ ಜೊತೆ ಕೆಲಸ ಮಾಡಲು ಅವಕಾಶ ಪಡೆದಿದ್ದಾರೆ.

 

ಈಗ ಗೋಪಿಚಂದ್ ಅವರೊಂದಿಗೆ ‘ಸೀತಿಮಾರ್’ ಚಿತ್ರದಲ್ಲಿ ಕಬಡ್ಡಿ ಕೋಚ್ ಆಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸಂಪತ್ ನಂದಿ ನಿರ್ದೇಶಿಸುತ್ತಿದ್ದು, ಚಿತ್ರಕ್ಕಾಗಿ ತಮನ್ನಾ ಸಾಕಷ್ಟು ಫಿಟ್ನೆಸ್ ಕಾಪಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಅವರು ಕಟ್ಟುನಿಟ್ಟಿನ ಆಹಾರವನ್ನು ಸೇವಿಸುತ್ತಿದ್ದಾರೆ. ಕಬಡ್ಡಿಯನ್ನು ಎಂದಿಗೂ ಆಡದಿದ್ದರೂ ತರಬೇತಿಗಳಲ್ಲಿ ಭಾಗವಹಿಸಿ, ಕಬ್ಬಡ್ಡಿ ಆಡುವುದನ್ನು ಕಲಿತುಕೊಳ್ಳುತ್ತಿದ್ದಾರಂತೆ ತಮನ್ನಾ.

Advertisement
Share this on...