ಪಾತ್ರ ಒಪ್ಪಿಗೆಯಾದ್ರೂ ಈ ಚಿತ್ರದಿಂದ ತಮನ್ನಾ ಹೊರ ನಡೆದಿದ್ದೇಕೆ ?

in ಸಿನಿಮಾ 57 views

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತಮ್ಮ ಅಭಿನಯ ಮತ್ತು ಮುದ್ದಾದ ನೋಟದಿಂದ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿರುವ ಬೆಡಗಿ. ಪ್ರಸ್ತುತ ಸಂಪತ್ ನಂದಿ ನಿರ್ದೇಶನದ, ಕ್ರೀಡಾ ಆಧಾರಿತ ಚಲನಚಿತ್ರ ಸೀತಿಮಾರ್’ನಲ್ಲಿ ಮ್ಯಾಕೊ ಸ್ಟಾರ್ ಗೋಪಿಚಂದ್ ಅವರೊಂದಿಗೆ ಪರದೆಯನ್ನು ತಮನ್ನಾ ಹಂಚಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯನ್ನು ನಾವು ಕೇಳಿದ್ದೆವು. ಇದು ಹಳೆಯ ವಿಚಾರ. ಆದರೆ ಹೊಸ ಅಪ್ ಡೇಟ್ ಎಂದರೆ, ಇತ್ತೀಚಿನ ವರದಿಯ ಪ್ರಕಾರ, ಮಾಸ್ ಮಹಾರಾಜ ರವಿ ತೇಜಾ ಅಭಿನಯದ ಚಿತ್ರವನ್ನು ತಮನ್ನಾ ತಿರಸ್ಕರಿಸಿದ್ದಾರಂತೆ.

Advertisement

 

Advertisement


ಹೌದು, ಈ ಹಿಂದೆ ತಮನ್ನಾ ಮತ್ತು ರವಿ ತೇಜಾ ಇಬ್ಬರೂ ‘ಬೆಂಗಾಲ್ ಟೈಗರ್’ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ತೆರೆಯ ಮೇಲೆ ರವಿ ತೇಜಾ ಎನರ್ಜಿಗೆ ತಮನ್ನಾ ನಟನೆ ಮ್ಯಾಚ್ ಆಗಿತ್ತು. ಆದ್ದರಿಂದ, ರವಿ ತೇಜಾ ಅಭಿನಯದ ಮುಂದಿನ ಚಿತ್ರ, ತ್ರಿನಾಧ ರಾವ್ ನಕ್ಕಿನಾ ನಿರ್ದೇಶನದಲ್ಲಿ ಆಕೆಗೆ ಒಂದು ಪಾತ್ರವನ್ನು ನೀಡಲಾಯಿತು. ಈ ಚಿತ್ರದ ಪಾತ್ರ ತಮನ್ನಾಗೆ ಒಪ್ಪಿಗೆಯಾಗಿದ್ದರೂ, ಸಂಭಾವನೆಯ ವಿಚಾರದಲ್ಲಿ ಕೆಲವು ವ್ಯತ್ಯಾಸಗಳಾಗಿವೆಯಂತೆ. ಆದ್ದರಿಂದ ಅವರು ಈ ಚಿತ್ರದಿಂದ ಹೊರನಡೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

 

Advertisement


ತಮನ್ನಾಗೆ 2.5 ಕೋಟಿ ರೂ. ನೀಡಲಾಗಿದ್ದರೂ, ತಮನ್ನಾ 3 ಕೋಟಿ ರೂ. ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಆದ್ದರಿಂದ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ ಪ್ರಸ್ತುತ ಇನ್ನೊಬ್ಬ ನಟಿಯ ಹುಡುಕಾಟದಲ್ಲಿ ನಿರತವಾಗಿದೆ ಎಂಬ ವರದಿಗಳು ಕೇಳಿ ಬರುತ್ತಿವೆ. ಮತ್ತೊಂದೆಡೆ, ರವಿ ತೇಜಾ ಅವರು ಕ್ರುಕ್ ಎಂಬ ಆಕ್ಷನ್ ಚಿತ್ರದಲ್ಲಿ ಶ್ರುತಿ ಹಾಸನ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ತಮನ್ನಾ ಈ ಲಾಕ್ ಡೌನ್ ಅವಧಿಯನ್ನು ಮಾತೃ ಭಾಷೆ ಸಿಂಧಿ ಕಲಿಯಲು ಬಳಸುತ್ತಿದ್ದಾರೆ.

 

ಇದರಿಂದಾಗಿ ಆಕೆ ತನ್ನ ಮಾತೃ ಭಾಷೆಯಲ್ಲಿ ತನ್ನ ಹೆತ್ತವರೊಂದಿಗೆ ಸುಲಭವಾಗಿ ಮಾತುಕತೆ ನಡೆಸಬಹುದು. ‘ಬಾಹುಬಲಿ’ ಯಂತಹ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ತಮನ್ನಾ, ಇದುವರೆಗೂ ದಕ್ಷಿಣ ಭಾರತದ ಹಲವಾರು ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ್ದಾರೆ. ತಮನ್ನಾ ಹಿಂದಿ ಚಲನಚಿತ್ರ ಪ್ರಿಯರಿಗೂ ಚಿರಪರಿಚಿತ ಮುಖ. ಬಾಲಿವುಡ್’ನಲ್ಲಿ ಅವರು ‘ಎಂಟರ್ಟೈನ್ಮೆಂಟ್’ ಮತ್ತು ‘ಹಮ್ಶಕಲ್ಸ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನವಾಜುದ್ದೀನ್ ಸಿದ್ದಿಕಿ ಅಭಿನಯದ ‘ಬೋಲೆ ಚುಡಿಯಾನ್’ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Advertisement
Share this on...