ತಮನ್ನಾ ಐಟಂ ಸಾಂಗ್’ನಲ್ಲಿ ಮಾಡ್ತಿರೋದು ಹಣಕ್ಕೋಸ್ಕರ ಅಲ್ವಂತೆ ! ಮತ್ಯಾವುದಕ್ಕೆ ಗೊತ್ತಾ?

in ಮನರಂಜನೆ 63 views

“ತಮನ್ನಾ ಮನಿ ಮೈಂಡೆಡ್, ಅದಕ್ಕೆ ಐಟಂ ಸಾಂಗ್ ನಲ್ಲೂ ಕಾಣಿಸಿಕೊಳ್ಳುತ್ತಾರೆ” ಎಂಬ ವಿಚಾರ ಸ್ವಲ್ಪ ದಿನಗಳಿಂದ ಟಾಲಿವುಡ್ ವಲಯದಲ್ಲಿ ಕೇಳಿಬರುತ್ತಿತ್ತು. ಆದರೆ ಇದೀಗ ಈ ವದಂತಿಗಳನ್ನು ತಳ್ಳಿಹಾಕಿರುವ ತಮನ್ನಾ, ನಾನು ಹಣವನ್ನು ಸಂಪಾದಿಸುವ ಸಲುವಾಗಿ ಐಟಂ ಹಾಡುಗಳಿಗೆ ಸಹಿ ಮಾಡುವುದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. “ನಾನು ಐಟಂ ಹಾಡುಗಳಿಗೆ ಸಹಿ ಹಾಕಿದ್ದೇನೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಕೆಲವರು ನಾನು ಹಣದ ದುರಾಸೆಗೆ ಬಿದ್ದು, ಈ ರೀತಿ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ನಿಜ ಹೇಳಬೇಕೆಂದರೆ ನಾನು ನೃತ್ಯವನ್ನು ಇಷ್ಟಪಡುತ್ತೇನೆ. ಅದರಲ್ಲೂ ಪರದೆಯ ಮೇಲೆ ನೃತ್ಯ ಮಾಡಲು ಇಷ್ಟಪಡುತ್ತೇನೆ. ಆ ಹಾಡು ಮಾಮೂಲಿಯಾಗಿರಲಿ, ರೊಮ್ಯಾಂಟಿಕ್ ಅಥವಾ ಸ್ಪೆಷಲ್ ಸಾಂಗ್ ಆಗಿರಲಿ ಯಾವುದನ್ನು ಲೆಕ್ಕಿಸದೆ ಪ್ರೇಕ್ಷಕರನ್ನು ರಂಜಿಸಲು ನಾನು ಇಷ್ಟಪಡುತ್ತೇನೆ ”ಎಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಹೇಳಿದ್ದಾರೆ ತಮನ್ನಾ.

Advertisement

 

Advertisement


“ತಮ್ಮ ಕೊನೆಯ ಉಸಿರು ಇರುವವರೆಗೆ ಚಿತ್ರಗಳಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂದು ಹೇಳಿರುವ ತಮನ್ನಾ, 13 ನೇ ವಯಸ್ಸಿನಿಂದಲೂ ನಟಿಸುತ್ತಿದ್ದೇನೆ. ಆದರೆ ಅದೇ ಪಾತ್ರಗಳಲ್ಲಿ ನಟಿಸಲು ಆಯಾಸವಾಗಿಲ್ಲ. ನಾನು ಚಿತ್ರಗಳನ್ನು ಹುಚ್ಚಿಯಂತೆ ಪ್ರೀತಿಸುತ್ತೇನೆ, ”ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ ತಮನ್ನಾ.
ತಮನ್ನಾ ತಮ್ಮ ಅಭಿನಯ ಮತ್ತು ಮುದ್ದಾದ ನೋಟದಿಂದ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿರುವ ಬೆಡಗಿ. ಪ್ರಸ್ತುತ ಸಂಪತ್ ನಂದಿ ನಿರ್ದೇಶನದ, ಕ್ರೀಡಾ ಆಧಾರಿತ ಚಲನಚಿತ್ರ ಸೀತಿಮಾರ್’ನಲ್ಲಿ ಮ್ಯಾಕೊ ಸ್ಟಾರ್ ಗೋಪಿಚಂದ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ. ‘ಬಾಹುಬಲಿ’ ಯಂತಹ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ತಮನ್ನಾ, ಇದುವರೆಗೂ ದಕ್ಷಿಣ ಭಾರತದ ಹಲವಾರು ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ್ದಾರೆ.

Advertisement

 

Advertisement

ತಮನ್ನಾ ಹಿಂದಿ ಚಲನಚಿತ್ರ ಪ್ರಿಯರಿಗೂ ಚಿರಪರಿಚಿತ ಮುಖ. ಬಾಲಿವುಡ್’ನಲ್ಲಿ ಅವರು ‘ಎಂಟರ್ಟೈನ್ಮೆಂಟ್’ ಮತ್ತು ‘ಹಮ್ಶಕಲ್ಸ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನವಾಜುದ್ದೀನ್ ಸಿದ್ದಿಕಿ ಅಭಿನಯದ ‘ಬೋಲೆ ಚುಡಿಯಾನ್’ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.ಕನ್ನಡ ಚಿತ್ರರಂಗದಲ್ಲಿಯೂ ತನ್ನ ಅದೃಷ್ಟವನ್ನು ಪರೀಕ್ಷಿಸಲು ತಮನ್ನಾ ಯೋಜಿಸುತ್ತಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ. ‘ಕೆಜಿಎಫ್: ಚಾಪ್ಟರ್ 2’ ರ ನಂತರ ತಮನ್ನಾ ಅವರಿಗೆ ಯಶ್ ಅವರ ಮುಂದಿನ ಚಿತ್ರದಲ್ಲಿಯೂ ಕೆಲಸ ಮಾಡಲು ಅವಕಾಶ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

Advertisement
Share this on...