ಕ್ರಿಕೆಟಿಗನನ್ನು ಲವ್ ಮ್ಯಾರೇಜ್ ಆಗಿ ಪಾಕಿಸ್ತಾನದ ಸೊಸೆ ಆಗಲು ಹೊರಟ್ರಾ ಮಿಲ್ಕಿ ಬ್ಯೂಟಿ..!

in ಕ್ರೀಡೆ 52 views

ಸಿನಿಮಾ ನಟರೆಂದರೆ ಜನರಿಗೆ ಅವರ ಕರಿಯರ್ ಮಾತ್ರವಲ್ಲದೆ, ಪರ್ಸನಲ್ ಲೈಫ್ ಬಗ್ಗೆ ಕೂಡಾ ಬಹಳ ಕುತೂಹಲವಿರುತ್ತದೆ. ಅದರಲ್ಲೂ ಅವರ ಲವ್ ಅಥವಾ ಮದುವೆ ವಿಚಾರ ತಿಳಿದುಕೊಳ್ಳಲು ಅಭಿಮಾನಿಗಳು ಸದಾ ಕಾತರರಾಗಿರುತ್ತಾರೆ. ಒಂದು ವೇಳೆ ಸಿನಿಮಾ ನಟರಾಗಲೀ, ನಟಿಯರಾಗಲಿ ಒಬ್ಬರೊಂದಿಗೆ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅವರಿಬ್ಬರ ನಡುವೆ ಏನೋ ಇದೆ ಎಂದು ಗುಲ್ಲೆಬ್ಬಿಸುವವರೂ ಇದ್ದಾರೆ.ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮದುವೆ ಬಗ್ಗೆ ಕೂಡಾ ಸುದ್ದಿಯಾಗುತ್ತಿದೆ. ತಮನ್ನಾ ಭಾಟಿಯಾ ಪಾಕಿಸ್ತಾನ ಕ್ರಿಕೆಟಿಗ ಅಬ್ದುಲ್ ರಜಾಕ್ ಅವರನ್ನು ಪ್ರೀತಿಸುತ್ತಿದ್ದಾರೆ. ಅವರನ್ನು ಮದುವೆಯಾಗಲು ಕೂಡಾ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ತಮನ್ನಾ ಹಾಗೂ ಅಬ್ದುಲ್ ರಜಾಕ್ ಒಡವೆ ಅಂಗಡಿಗಳಲ್ಲಿ ಇರುವ ಪೋಟೋ ಇಂಟರ್​​ನೆಟ್​​​ನಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ತಮನ್ನಾ ಯಾರಿಗೂ ತಿಳಿಯದಂತೆ ಮದುವೆ ತಯಾರಿಯಲ್ಲಿದ್ದಾರೆ. ಕೆಲವೇ ದಿನಗಳಲ್ಲಿ ಮದುವೆಯಾಗಿ ಪಾಕಿಸ್ತಾನದ ಸೊಸೆಯಾಗಲಿದ್ದಾರೆ ಎನ್ನಲಾಗುತ್ತಿದೆ.

Advertisement

 

Advertisement

Advertisement

ಆದರೆ ಅಬ್ದುಲ್ ರಜಾಕ್​​​​ಗೆ ಈಗಾಗಲೇ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ರಜಾಕ್ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಜಾಲಿ ಲೈಫ್ ಎಂಜಾಯ್ ಮಾಡುತ್ತಿದ್ಧಾರೆ. ತಮನ್ನಾ ಮದುವೆ ಇವರೊಂದಿಗೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುವುದು ಸಹಜ. ತಮ್ಮ ಮದುವೆ ಗಾಸಿಪ್ ಬಗ್ಗೆ ಮೌನ್ ಮುರಿದಿರುವ ತಮನ್ನಾ ಭಾಟಿಯಾ, ಇದು ಬಹಳ ಹಳೆಯ ಫೋಟೋ. ಒಮ್ಮೆ ಹೈದರಾಬಾದ್​​​ನಲ್ಲಿ ನಡೆದ ಆಭರಣದ ಅಂಗಡಿ ಉದ್ಘಾಟನೆಗೆ ಕ್ರಿಕೆಟ್ ಮ್ಯಾಚ್​​​​ಗೆ ಹೈದರಾಬಾದ್​​​ಗೆ ಬಂದಿದ್ದ ಅಬ್ದುಲ್ ರಜಾಕ್ ಅವರನ್ನು ಕೂಡಾ ಆಹ್ವಾನಿಸಲಾಗಿತ್ತು. ಈ ಸಮಯದಲ್ಲಿ ತೆಗೆದ ಫೋಟೋ ಇದು. ಈಗ ಲಾಕ್​​​​ಡೌನ್​​​​ನಲ್ಲಿ ಏನೂ ಕೆಲಸ ಇಲ್ಲದೆ ಕುಳಿತಿರುವ ಕೆಲವರು ಈ ಫೋಟೋ ವೈರಲ್ ಮಾಡುತ್ತಾ ಇಲ್ಲಸಲ್ಲದ್ದನ್ನು ಹಬ್ಬಿಸುತ್ತಿದ್ದಾರೆ ಎಂದು ತಮನ್ನಾ ಸ್ಪಷ್ಟನೆ ನೀಡಿದ್ಧಾರೆ.

Advertisement

 

ತಮ್ಮ 15ನೇ ವಯಸ್ಸಿನಲ್ಲೇ ಬಾಲಿವುಡ್​ನ ‘ಚಾಂದ್ ಸಾ ರೋಷನ್ ಚೆಹ್ರಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ತಮನ್ನಾ ನಂತರ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಲಾರಂಭಿಸಿದರು. ತಮಿಳಿಗಿಂತ ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ತಮನ್ನಾ ಗುರುತಿಸಿಕೊಂಡಿದ್ದಾರೆ. ಕನ್ನಡದ ಕೆಜಿಎಫ್ ಚಿತ್ರದಲ್ಲಿ ಕೂಡಾ ಯಶ್ ಜೊತೆ ಜೋಕೆ ನಾನು ಬಳ್ಳಿಯ ಮಿಂಚು ಹಾಡಿನಲ್ಲಿ ತಮನ್ನಾ ಹೆಜ್ಜೆ ಹಾಕಿದ್ಧಾರೆ. ತಮನ್ನಾಗಿ ಒಬ್ಬರು ಅಣ್ಣ ಇದ್ದು ಎಲ್ಲರೂ ಈಗ ಹೈದರಾಬಾದ್​​ನಲ್ಲಿ ನೆಲೆಸಿದ್ದಾರೆ.

RKS

Advertisement
Share this on...