ಕಾಲೆಳೆಯುವವರಿಗೆ ಸರಿಯಾಗಿ ತಿರುಗೇಟು ಕೊಟ್ಟ ಮಿಲ್ಕಿ ಬ್ಯೂಟಿ

in ಸಿನಿಮಾ 148 views

ನಟಿ ತಮನ್ನಾ ಭಾಟಿಯಾ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಬಗ್ಗೆ ಸಾಕಷ್ಟು ಸುಳ್ಳು ಸುದ್ದಿಗಳು ಹಬ್ಬುತ್ತಿವೆ ಎಂದು ಹೇಳಿದ್ದಾರೆ. ಅದರಲ್ಲೂ “ನನಗೆ ಕೆಲಸವೇ ಇಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ. ನಾನು ಯಾವ ಚಿತ್ರಗಳಲ್ಲೂ ಕಾಣಿಸಿಕೊಳ್ಳದಿದ್ದರೆ ನನಗೆ ಕೆಲಸವಿಲ್ಲ ಎಂದೇ ಹಲವರು ಭಾವಿಸುತ್ತಾರೆ. ಆದರೆ ನಾನು 365 ದಿನಗಳ ಕಾಲವೂ ಬ್ಯೂಸಿಯಾಗಿದ್ದೇನೆ” ಎಂದು ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ ತಮನ್ನಾ. ತಮನ್ನಾ ಪ್ರಸ್ತುತ ಸೌತ್ ಚಿತ್ರಗಳಲ್ಲಿ ದೊಡ್ಡ ದೊಡ್ಡ ಸ್ಟಾರ್’ಗಳ ಜೊತೆ ನಟಿಸುತ್ತಿರುವುದಲ್ಲದೆ, ತೆಲುಗು ಮತ್ತು ತಮಿಳು ಎರಡರಿಂದಲೂ ಸ್ಟಾರ್ ನಟರ ಜೊತೆ ಕೆಲಸ ಮಾಡಲು ಅವಕಾಶ ಪಡೆದಿದ್ದಾರೆ.

Advertisement

 

Advertisement

Advertisement

 

Advertisement

“ನನ್ನ ಹಿಟ್ ಚಿತ್ರಗಳಲ್ಲಿ ‘ಅಯ್ಯನ್’, ‘ಹ್ಯಾಪಿ ಡೇಸ್’, ‘100% ಲವ್’ ಮತ್ತು ‘ಬಾಹುಬಲಿ’ ಯಂತಹ ಸಿನಿಮಾಗಳು ಸೇರಿವೆ. ಆದರೆ ಬಾಲಿವುಡ್ನಲ್ಲಿ ನಾನು ಅಂತಹ ಚಿತ್ರಗಳನ್ನು ಕೊಡಲು ಇದುವರೆಗೂ ಸಾಧ್ಯವಾಗಿಲ್ಲ ಎಂದು ಜನರು ಹೇಳಿದಾಗ ಅದು ನೋವುಂಟು ಮಾಡುತ್ತದೆ” ಎಂದು ಹೇಳಿದ್ದಾರೆ ತಮನ್ನಾ. ಅಷ್ಟೇ ಅಲ್ಲ, “ನಾನು ಸಿನಿಮಾಗಳಲ್ಲಿ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇನೆ. ಅದೃಷ್ಟವಶಾತ್ ನಾನು ದಕ್ಷಿಣದ ಚಿತ್ರಗಳಲ್ಲಿ ಉತ್ತಮ ಸ್ಥಾನ ಗಳಿಸಿದ್ದೇನೆ. ಬಾಲಿವುಡ್ನಲ್ಲಿ ಗಮನ ಸೆಳೆಯಲು ನಾನು ಹಂಬಲಿಸುವುದಿಲ್ಲ. ಯಾವುದೇ ಭಾಷೆಯ ಚಿತ್ರರಂಗವಾದರೂ ನನ್ನ ಕೆಲಸವನ್ನು ನಾನು ಆನಂದಿಸುತ್ತೇನೆ. ಅದಕ್ಕಾಗಿ ಶ್ರಮಿಸುವುದು ನನ್ನ ಕರ್ತವ್ಯ” ಎಂದು ಹೇಳಿದ್ದಾರೆ ಮಿಲ್ಕಿ ಬ್ಯೂಟಿ.

 

 

“ಸದ್ಯ ನಾನು ನಟಿಸುತ್ತಿರುವ ಪಾತ್ರಗಳು ಬಹುಮುಖದಿಂದ ಕೂಡಿರಲು ಹಂಬಲಿಸುತ್ತಿದ್ದೇನೆ. ನಾನು ಮಾಡುವ ಚಿತ್ರಗಳನ್ನೂ ಅವಸರಿಸದೆ, ಸ್ವಲ್ಪವಾದರೂ ಆಲೋಚಿಸಿ, ಆಯ್ಕೆ ಮಾಡಿ ಒಪ್ಪಿಕೊಳ್ಳುತ್ತೇನೆ” ಎಂದು ತಮನ್ನಾ ಹೇಳಿದ್ದಾರೆ. ನಾನು ಪ್ರೀತಿಸುವ ಕೆಲಸದಲ್ಲಿ ಇಷ್ಟು ದೂರ ಬರುವುದು ಅದೃಷ್ಟ ಎಂದು ಹೇಳಿರುವ ತಮನ್ನಾ, ಈಗ ಗೋಪಿಚಂದ್ ಅವರೊಂದಿಗೆ ‘ಸೀತಿಮಾರ್’ ಚಿತ್ರದಲ್ಲಿ ಕಬಡ್ಡಿ ಕೋಚ್ ಆಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸಂಪತ್ ನಂದಿ ನಿರ್ದೇಶಿಸುತ್ತಿದ್ದು, ಚಿತ್ರಕ್ಕಾಗಿ ತಮನ್ನಾ ಸಾಕಷ್ಟು ಫಿಟ್ನೆಸ್ ಕಾಪಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಅವರು ಕಟ್ಟುನಿಟ್ಟಿನ ಆಹಾರವನ್ನು ಸೇವಿಸುತ್ತಿದ್ದಾರೆ. ಕಬ್ಬಡ್ಡಿಯನ್ನು ಎಂದಿಗೂ ಆಡದಿದ್ದರೂ ತರಬೇತಿ ಅವಧಿಗಳಲ್ಲಿ ಭಾಗವಹಿಸುತ್ತಿದ್ದಾರೆ.

 

 

ತಮನ್ನಾ ಅವರು ನವಾಜುದ್ದೀನ್ ಸಿದ್ದೀಕ್ ಅವರೊಂದಿಗೆ ‘ಬೋಲ್ ಚುಡಿಯಾನ್’ ಚಿತ್ರದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಇದು ಬಾಲಿವುಡ್ನಲ್ಲಿ ತಮನ್ನಾ ಅವರಿಗೆ ಗೆಲುವು ತಂದುಕೊಟ್ಟರೂ ಆಶ್ಚರ್ಯವಿಲ್ಲ. ಬಾಲಿವುಡ್ ಈ ಬಾರಿಯಾದರೂ ತಮನ್ನಾ ಕೈ ಹಿಡಿಯಬಹುದಾ ಕಾದು ನೋಡಬೇಕಿದೆಯಷ್ಟೇ!.

Advertisement
Share this on...