ತಾಪ್ಸಿಗೆ ತನ್ನ ಬಾಯ್ ಫ್ರೆಂಡ್ ಸಿಗಲು ಕಾರಣ ಯಾರು ಗೊತ್ತಾ ?

in ಮನರಂಜನೆ 17 views

ಪ್ರತಿಭಾವಂತ ನಟಿ ತಾಪ್ಸಿ ಪನ್ನು ದಕ್ಷಿಣ ಭಾರತದ ಚಿತ್ರಗಳಲ್ಲಿ ಮಾತ್ರವಲ್ಲದೆ, ಬಾಲಿವುಡ್ ಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ‘ಪಿಂಕ್’, ‘ಮುಲ್ಕ್’, ‘ನಾಮ್ ಶಬಾನಾ’, ‘ಬದ್ಲಾ’ ಮತ್ತು ಇತ್ತೀಚಿನ ‘ಥಪ್ಪಡ್’ ಚಿತ್ರಗಳಲ್ಲಿಯೂ ಅದ್ಭುತವಾಗಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಅಂದಹಾಗೆ ಕಳೆದ ಎರಡು ದಿನಗಳಿಂದ ತಾಪ್ಸಿ ಬಗ್ಗೆಯೇ ಚರ್ಚೆ. ಅದು ನಿಮಗೂ ಗೊತ್ತಿರುವ ವಿಷಯವೇ. ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋಯಿ ಜತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯನ್ನು ಅಲ್ಲಗಳೆಯದೆ, ನಾನು ಅದನ್ನು ಕದ್ದುಮುಚ್ಚಿಯೂ ಮಾಡುತ್ತಿಲ್ಲ ಎಂದು ತಾಪ್ಸಿ ಹೇಳಿಕೊಂಡಿದ್ದರು.

Advertisement

 

Advertisement

Advertisement

“ನನ್ನ ಮತ್ತು ಮಥಿಯಾಸ್ ಬೋಯಿ ಸಂಬಂಧದ ಬಗ್ಗೆ ಮನೆಯವರಿಗೆ ಚೆನ್ನಾಗಿ ತಿಳಿದಿದೆ. ಅವರನ್ನು ಇಷ್ಟಪಟ್ಟು ಒಪ್ಪಿಕೊಂಡಿದ್ದಾರೆ ಕೂಡ. ಹಾಗೊಂದು ವೇಳೆ ಮನೆಯವರು ಆತನನ್ನು ರಿಜೆಕ್ಟ್ ಮಾಡಿದರೆ, ಈ ಸಂಬಂಧ ಸರಿ ಹೊಂದಲ್ಲ ಎನಿಸಿದರೆ ಅಲ್ಲಿಗೇ ಅದು ಅಂತ್ಯಗೊಳ್ಳಲಿದೆ” ಎಂದು ತಾಪ್ಸಿ ತಿಳಿಸಿದ್ದರು. ಹಾಗೆ ನೋಡಿದರೆ ಮಗಳ ಆಯ್ಕೆಯನ್ನು ಅಮ್ಮ ಕೂಡ ಮೆಚ್ಚಿಕೊಂಡಿದ್ದಾರೆ. “ಆಕೆಯನ್ನು ಸಂಪೂರ್ಣವಾಗಿ ನಂಬಿದ್ದೇನೆ. ಆಕೆ ತನಗಾಗಿ ಯಾವ ಆಯ್ಕೆ ಮಾಡಿಕೊಂಡಾಗಲೂ ನಮಗೆ ಆ ನಿರ್ಧಾರ ಒಪ್ಪಿಗೆಯಾಗಿದೆ. ನಾವು ಆಕೆಯನ್ನು ಬೆಂಬಲಿಸಿದ್ದೇವೆ” ಎಂದು ತಾಪ್ಸಿ ಅಮ್ಮ ತಿಳಿಸಿದ್ದಾರೆ.

Advertisement

 


ಇದೆಲ್ಲಾ ಒಂದು ಕಡೆಯಾದರೆ ಬಹುತೇಕರಿಗೆ ತಾಪ್ಸಿ ಮತ್ತು ಮಥಿಯಾಸ್ ಬೋ ಪರಿಚಯವಾದದ್ದು ಹೇಗೆ? ಎಂಬ ವಿಷಯದ ಬಗ್ಗೆ ಕುತೂಹಲವಿದೆ. ಆದ್ದರಿಂದ ಆ ಬಗ್ಗೆ ನಾವಿಂದು ನಿಮಗೆ ತಿಳಿಸಲಿದ್ದೇವೆ. ಪ್ರತಿಯೊಬ್ಬರಿಗೂ ತಿಳಿದಿರುವಂತೆ ತಾಪ್ಸಿ ಬಾಯ್ ಫ್ರೆಂಡ್ ಹೆಸರು ಮಥಿಯಾಸ್ ಬೋ, ಡೆನ್ಮಾರ್ಕ್ ಬ್ಯಾಡ್ಮಿಂಟನ್ ಆಟಗಾರ. ಕಳೆದ ವರ್ಷ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಸಮಯದಲ್ಲಿ ಮಥಿಯಾಸ್ ಬೋ ಅವರನ್ನು ತಾಪ್ಸಿ ಭೇಟಿಯಾದರು. ಅಂದಿನಿಂದ ಇಬ್ಬರೂ ಸಂಪರ್ಕದಲ್ಲಿದ್ದು, ಒಬ್ಬರನ್ನೊಬ್ಬರು ಅರಿತುಕೊಳ್ಳಲು ಆರಂಭಿಸಿದರು.

 

ಈ ಬಗ್ಗೆ ಆನ್ಲೈನ್ ಸಂದರ್ಶನವೊಂದರಲ್ಲಿ ಮಾತನಾಡಿದ ತಾಪ್ಸಿ, “ತನ್ನ ಮತ್ತು ಮಥಿಯಾಸ್ ಬೋ ಅವರನ್ನು ಒಟ್ಟಿಗೆ ಸೇರಿಸುವಲ್ಲಿ ತನ್ನ ತಂಗಿಯ ಪಾತ್ರ ದೊಡ್ಡದಿದೆ ಎಂದು ಹೇಳಿದರು ಅಷ್ಟೇ ಅಲ್ಲ, ತನ್ನ ಸಹೋದರಿಯೇ ಮಥಿಯಾಸ್ ಬೋ ಅವರನ್ನು ಪರಿಚಯಿಸಿದಳು” ಎಂದು ತಿಳಿಸಿದ್ದಾರೆ. “ಮಥಿಯಾಸ್ ನನ್ನ ಹೆತ್ತವರೊಂದಿಗೆ ಉತ್ತಮ ಬಾಂಧವ್ಯ, ಪ್ರೀತಿ ಹೊಂದಿದ್ದಾರೆ “ ಎಂದು ಸಹ ತಾಪ್ಸಿ ತಿಳಿಸಿದ್ದಾರೆ. ಒಟ್ಟಿನಲ್ಲಿ ತಾಪ್ಸಿ ಮತ್ತು ಮಥಿಯಾಸ್ ಬೋ ಅವರನ್ನು ಹತ್ತಿರದಿಂದ ಬಲ್ಲವರು ಇವರಿಬ್ಬರೂ ಹೀಗೆ ಮುಂದುವರೆದರೆ ಮುಂದಿನ ವರ್ಷ ನಿಶ್ಚಿತಾರ್ಥ ಮಾಡಿಕೊಳ್ಳಬಹುದು ಎಂದು ತೋರುತ್ತದೆ ಎಂದು ಹೇಳುತ್ತಿದ್ದಾರೆ. ಇತ್ತ ಕಡೆ ತಾಪ್ಸಿ ಕೆಲವು ಆಸಕ್ತಿದಾಯಕ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

Advertisement
Share this on...