ಬದುಕಿರುವಾಗಲೇ ಸಾಯಿಸಿದ ಪಾಪಿಗಳು..ಈ ಬಗ್ಗೆ ತೇಜಸ್ವಿನಿ ಪ್ರಕಾಶ್ ಪ್ರತಿಕ್ರಿಯೆ ಏನು…?

in ಮನರಂಜನೆ/ಸಿನಿಮಾ 245 views

ತೇಜಸ್ವಿನಿ ಪ್ರಕಾಶ್, ‘ಮಸಣದ ಮಕ್ಕಳು’ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟವರು. ಮೊದಲ ಚಿತ್ರದಲ್ಲೇ ಅವರಿಗೆ ಉತ್ತಮ ನಟಿ ಪ್ರಶಸ್ತಿ ಕೂಡಾ ಲಭಿಸಿತ್ತು. ಸಿನಿಮಾ ಮಾತ್ರವಲ್ಲದೆ ತೇಜಸ್ವಿನಿ ಧಾರಾವಾಹಿಗಳಲ್ಲಿ ಕೂಡಾ ನಟಿಸಿದ್ದಾರೆ. ಜೊತೆಗೆ ಬಿಗ್​​ಬಾಸ್ ಸ್ಪರ್ಧಿಯಾಗಿ ಅವರು ಭಾಗವಹಿಸಿದ್ದರು. ತೇಜಸ್ವಿನಿ ಅವರನ್ನು ಸ್ನೇಹಿತರು ಪ್ರೀತಿಯಿಂದ ತೇಜು ಎಂದು ಕರೆಯುತ್ತಾರೆ.ಇತ್ತೀಚೆಗಷ್ಟೇ ತೇಜಸ್ವಿನಿ ತಂದೆ ಪ್ರಕಾಶ್ ನಿಧನಾಗಿದ್ದಾರೆ. ತೇಜು ಕುಟುಂಬ ಈ ದು:ಖದಲ್ಲಿರುವಾಗ ತೇಜಸ್ವಿನಿ ಕೂಡಾ ಇನ್ನಿಲ್ಲ ಎಂಬ ಸುದ್ದಿ ಯೂಟ್ಯೂಬ್​ ಹಾಗೂ ಕೆಲವೊಂದು ವೆಬ್​​​​ಪೇಜ್​​ಗಳಲ್ಲಿ ಹರಿದಾಡತೊಡಗಿದೆ. ತೇಜಸ್ವಿನಿ ಇನ್ನಿಲ್ಲ, ತೇಜಸ್ವಿನಿ ಜೀವ ಇನ್ನಿಲ್ಲ ಎಂಬ ಹೆಡ್​​​ಲೈನ್ ಇರುವ ವಿಡಿಯೋಗಳು ಹಾಗೂ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನು ನೋಡಿ ಶಾಕ್ ಆದ ತೇಜಸ್ವಿನಿ ಸ್ನೇಹಿತರು ಹಾಗೂ ಸಂಬಂಧಿಕರು ತೇಜಸ್ವಿನಿ ಮನೆಗೆ ಕರೆ ಮಾಡಿ ಏನಾಯ್ತು ಎಂದು ಕೇಳುತ್ತಿದ್ದಾರೆ.

Advertisement

 

Advertisement

Advertisement

ಆದರೆ ಈ ಫೇಕ್ ನ್ಯೂಸ್​​​​​​ಗೆ ಸಂಬಂಧಿಸಿದಂತೆ ತೇಜಸ್ವಿನಿ ಪ್ರಕಾಶ್ ಬೇಸರ ವ್ಯಕ್ತಪಡಿಸಿದ್ದಾರೆ. ‘ಸಿನಿಮಾ, ಸಿನಿಮಾ ಆ್ಯಕ್ಟರ್​​​ಗಳು ಎಂದರೆ ಗಾಸಿಪ್​​​ಗಳು ಸಾಮಾನ್ಯ. ಆದರೆ ಕಲಾವಿದರು ಬದುಕಿರುವಾಗಲೇ ಅವರನ್ನು ಈ ರೀತಿ ಸಾಯಿಸುವುದು ಎಷ್ಟರ ಮಟ್ಟಿಗೆ ಸರಿ. ಇಂತಹ ಅನೇಕ ವಿಡಿಯೋಗಳನ್ನು ನಾನು ಯೂಟ್ಯೂಬ್​​​ನಲ್ಲಿ ನೋಡುತ್ತಿರುತ್ತೇನೆ. ತಮ್ಮ ಏಳಿಗೆಗಾಗಿ ಇನ್ನೊಬ್ಬರನ್ನು ಈ ರೀತಿ ಬಳಸಿಕೊಳ್ಳುವುದು ಸರಿಯಲ್ಲ. ಇಂತಹ ನೀಚ ಕೆಲಸ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ. ಕಾನೂನು ಪ್ರಕಾರ ಹೋರಾಡುತ್ತೇನೆ’ ಎಂದು ತೇಜಸ್ವಿನಿ ಪ್ರಕಾಶ್ ತಮ್ಮ ಫೇಸ್​​​ಬುಕ್​​ನಲ್ಲಿ ಬೇಸರದಿಂದ ಬರೆದುಕೊಂಡಿದ್ದಾರೆ.

Advertisement

 

ಗಜ, ಪ್ರೀತಿ ಏಕೆ ಭೂಮಿ ಮೇಲಿದೆ, ಮಾತಾಡ್ ಮಾತಾಡ್ ಮಲ್ಲಿಗೆ , ಬಂಧು ಬಳಗ, ಅರಮನೆ, ಗೂಳಿಹಟ್ಟಿ ಸೇರಿ ಅನೇಕ ಸಿನಿಮಾಗಳಲ್ಲಿ ತೇಜಸ್ವಿನಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಕೂಡಾ ತೇಜು ನಟಿಸಿದ್ದಾರೆ. ಈಗ ತೇಜಸ್ವಿನಿ ಧಾರಾವಾಹಿಗಳಲ್ಲಿ ಬ್ಯುಸಿ ಇದ್ದಾರೆ.

Advertisement
Share this on...