ಕಿರುತೆರೆ ನಟಿ ತನ್ವಿಯ ಬಣ್ಣದ ಬದುಕಿಗೆ ಮುನ್ನುಡಿ ಬರೆದದ್ದು ಬಾಲಿವುಡ್ !

in ಮನರಂಜನೆ/ಸಿನಿಮಾ 413 views

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಾ’ರರ್ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ತನ್ವಿ ರಾವ್ ಅವರ ಬಣ್ಣದ ಪಯಣ ಶುರುವಾಗಿದ್ದು ಬಾಲಿವುಡ್ ಮೂಲಕ. ಮಾಧುರಿ ದೀಕ್ಷಿತ್ ಅಭಿನಯದ ಗುಲಾಬಿ ಗ್ಯಾಂಗ್ ಸಿನಿಮಾದಲ್ಲಿ ನಾಯಕಿಯಾಗಿ ನಟನಾ ರಂಗಕ್ಕೆ ತನ್ವಿ ಕಾಲಿಟ್ಟಾಗ ಕೇವಲ ಹದಿನೈದು ವರ್ಷ. ಮುಂದೆ ಗ’ನ್ಸ್ ಆಫ್ ಬನಾರಸ್ ಎಂಬ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸಿರುವ ತನ್ವಿ ರಾವ್ ರಂಗ್ ಬಿರಂಗಿ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿಯೂ ನಟನಾ ಛಾಪನ್ನು ಮೂಡಿಸಿದ ಚೆಲುವೆ. ಸದ್ಯ ಕಿರುತೆರೆಗೆ ಕಾಲಿಟ್ಟು ಮನೋಜ್ಞ ಅಭಿನಯದ ಮೂಲಕ ವೀಕ್ಷಕರ ಮನ ಸೆಳೆದಿರುವ ತನ್ವಿ ರಾವ್ ಅದ್ಭುತ ನೃತ್ಯಗಾರ್ತಿಯೂ ಹೌದು. ಎಳವೆಯಿಂದಲೂ ತನ್ವಿ ರಾವ್ ಅವರಿಗೆ ನಾಟ್ಯದತ್ತ ವಿಶೇಷ ಒಲವು. ಮೊದಲ ಬಾರಿ ಹೆಜ್ಜೆ ಹಾಕಿದಾಗ ಆಕೆಗೆ ಕೇವಲ ನಾಲ್ಕು ವರ್ಷ. ಮುಂದೆ ಶಾಸ್ತ್ರೋಕ್ತವಾಗಿ ಭರತನಾಟ್ಯ ಕಲಿತ ಕೇವಲ ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ ಪ್ರತಿಭೆ. ಜೊತೆಗೆ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ತನ್ವಿ ಭರತನಾಟ್ಯ ಮಾತ್ರವಲ್ಲದೆ ಕಥಕ್, ಸೆಮಿ ಕ್ಲಾಸಿಕಲ್ ನಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಯುರೋಪ್ ಮತ್ತು ಏಷ್ಯಾದ ಆರು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ನೃತ್ಯ ಪ್ರದರ್ಶನ ಮಾಡಿರುವ ಮುದ್ದು ಮುಖದ ಚೆಲುವೆಗೆ ಮುಂದೆ ನಟನೆಯ ಮೇಲೆ ಆಸಕ್ತಿ ಮೂಡಿತು.

Advertisement

Advertisement

ಮಂಗಳೂರಿನಲ್ಲಿ ಪದವಿ ಮುಗಿಸಿರುವ ತನ್ವಿ ರಾವ್ ಒಂದಷ್ಟು ವರ್ಷಗಳ ಕಾಲ ಮುಂಬೈ ರಂಗಭೂಮಿಯಲ್ಲಿ ನಾಟಕಗಳಲ್ಲಿ ನಟಿಸಿದ್ದರು. ತದ ನಂತರ ಆಕೃತಿ ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿರುವ ತನ್ವಿ ರಾವ್ ಅವರು ಕಿರುತೆರೆಗೆ ಬಂದ ವಿಚಾರ ನಿಜಕ್ಕೂ ರೋಚಕವಾದುದು.

Advertisement

ತನ್ವಿ ಅವರು ಪದವಿ ಓದುತ್ತಿರುವಾಗ ಕೆ.ಎಂ.ಚೈತನ್ಯ ಅವರ ಬೇರೆ ಪ್ರಾಜೆಕ್ಟ್ ಗೆ ಆಡಿಶನ್ ನೀಡಿದ್ದರು. ಕಾರಣಾಂತರಗಳಿಂದ ತನ್ವಿ ಆಯ್ಕೆ ಆಗಿರಲಿಲ್ಲ. ವಿಚಿತ್ರ ಎಂದರೆ ಕೆ.ಎಂ.ಚೈತನ್ಯ ಅವರು ತನ್ವಿ ಅವರ ಹೆಸರನ್ನು ಬರೆದುಕೊಂಡಿದ್ದರು. ಇನ್ನು ತಾವು ಮಾಡುತ್ತಿದ್ದ ಡ್ಯಾನ್ಸ್ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದರು ತನ್ವಿ. ಧಾರಾವಾಹಿಗೆ ನೃತ್ಯ ತಿಳಿದವರು ಬೇಕಾದ ಕಾರಣ ತನ್ವಿಗೆ ನಟಿಸುವ ಆಫರ್ ನೀಡಿದರು. ಧಾರಾವಾಹಿಯ ಕತೆ ಕೇಳಿ ನಟಿಸಲು ಅಸ್ತು ಎಂದ ತನ್ವಿ ರಾವ್ ಇಂದು ಮನೋಜ್ಞ ಅಭಿನಯದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದುಬಿಟ್ಟಿದ್ದಾರೆ.

Advertisement

ಬಾಲಿವುಡ್ ಮೂಲಕ ಬಣ್ಣದ ಪಯಣ ಶುರು ಮಾಡಿರುವ ತನ್ವಿ ರಾವ್ ಅವರು ಇಂದು ಕಿರುತೆರೆಯಲ್ಲಿ ಬ್ಯುಸಿ. ಮೊದಲ ಬಾರಿಗೆ ಕಿರುತೆರೆಯಲ್ಲಿ ನಟಿಸಿರುವ ತನ್ವಿ ಸೀರಿಯಲ್ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
– ಅಹಲ್ಯಾ ‌‌

Advertisement
Share this on...