800 ವರ್ಷಗಳ ಹಿಂದಿನ ಈ ದೇವಾಲಯವು ಈಗಲೂ ಗಟ್ಟಿಮುಟ್ಟಾಗಿರುವುದಕ್ಕೆ ಕಾರಣ ತಿಳಿದರೆ ಬೆರಗಾಗ್ತೀರಾ !!

in ಕನ್ನಡ ಮಾಹಿತಿ 58 views

ಭಾರತದಲ್ಲಿ ಅನೇಕ ದೇವಾಲಯಗಳಿವೆ, ಅವುಗಳು ತಮ್ಮದೇ ಆದ ವಿಶಿಷ್ಟ ಲಕ್ಷಣವನ್ನು ಹೊಂದಿವೆ. ಈ ಗುಣಲಕ್ಷಣಗಳಿಂದಾಗಿ, ಅವು ತಮ್ಮದೇ ಆದ ಗುರುತನ್ನು ಸೃಷ್ಟಿಸುತ್ತವೆ. ಅಂದಹಾಗೆ, ದೇವಾಲಯಕ್ಕೆ ಸಾಮಾನ್ಯವಾಗಿ ಆ ದೇವಾಲಯದಲ್ಲಿರುವ ದೇವತೆಯ ಹೆಸರನ್ನು ಇಡಲಾಗುತ್ತದೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವ ದೇವಾಲಯಕ್ಕೆ ಅದರ ನಿರ್ಮಾಣಕಾರನ ಹೆಸರನ್ನು ಇಡಲಾಗಿದೆ. ಹೌದು, ಆ ದೇವಸ್ಥಾನದ ಹೆಸರು ರಾಮಪ್ಪ. ತೆಲಂಗಾಣದ ಮುಲುಗು ಜಿಲ್ಲೆಯ ವೆಂಕಟಾಪುರ ವಿಭಾಗದ, ಪಾಲಂಪೆಟೆ ಗ್ರಾಮದ ಕಣಿವೆಯಲ್ಲಿದೆ.

Advertisement

 

Advertisement


ರಾಮಪ್ಪ ದೇವಸ್ಥಾನದಲ್ಲಿ ಶಿವ ಇರುವುದರಿಂದ ಇದನ್ನು ‘ರಾಮಲಿಂಗೇಶ್ವರ ದೇವಾಲಯ’ ಎಂದೂ ಕರೆಯುತ್ತಾರೆ. ಈ ದೇವಾಲಯದ ನಿರ್ಮಾಣದ ಕಥೆ ಬಹಳ ಆಸಕ್ತಿದಾಯಕವಾಗಿದೆ. ಕ್ರಿ.ಶ. 1213 ರಲ್ಲಿ ಆಂಧ್ರಪ್ರದೇಶದ ಕಾಕತೀಯ ರಾಜವಂಶದ ಮಹಾಪರಾಜ ಗಣಪತಿ ದೇವ್ ಅವರಿಗೆ ಶಿವ ದೇವಾಲಯವನ್ನು ನಿರ್ಮಿಸುವ ಆಲೋಚನೆ ಇದ್ದಕ್ಕಿದ್ದಂತೆ ಮನಸ್ಸಿಗೆ ಬಂದಿತು. ನಂತರ, ಅವರು ತಮ್ಮ ವಾಸ್ತುಶಿಲ್ಪಿ ರಾಮಪ್ಪನಿಗೆ ಬಹಳಷ್ಟು ವರ್ಷಗಳ ಕಾಲ ಉಳಿಯುವ ದೇವಾಲಯವನ್ನು ನಿರ್ಮಿಸಲು ಆದೇಶಿಸಿದರು.

Advertisement

 

Advertisement


ರಾಮಪ್ಪನು ತನ್ನ ರಾಜನ ಆಜ್ಞೆಗಳನ್ನು ಪಾಲಿಸಿದನು. ಕೊನೆಗೆ ರಾಮಪ್ಪನ ಕರಕುಶಲತೆಯಿಂದ ಭವ್ಯವಾದ, ಸುಂದರವಾದ ಮತ್ತು ಬೃಹತ್ ದೇವಾಲಯ ನಿರ್ಮಾಣವಾಯಿತು. ಆಗ ಅದನ್ನು ನೋಡಿದ ರಾಜನು ತುಂಬಾ ಸಂತೋಷಪಟ್ಟನು ಎಂದು ಹೇಳಲಾಗುತ್ತದೆ. ಆದ್ದರಿಂದ ರಾಜನು ಆ ದೇವಾಲಯಕ್ಕೆ ವಾಸ್ತುಶಿಲ್ಪಿಯ ಹೆಸರಿಟ್ಟನು. 800 ವರ್ಷಗಳ ಹಿಂದಿನ ಈ ದೇವಾಲಯವು ಈಗಲೂ ಮೊದಲಿನಂತೆಯೇ ಪ್ರಬಲವಾಗಿದೆ. ಕೆಲವು ವರ್ಷಗಳಿಂದ ಈ ದೇವಾಲಯವು ಹಳೆಯದಾಗುತ್ತಾ ಬರುತ್ತಿದೆ. ಆದರೂ ಇದು ಕುಸಿಯದಿರುವುದನ್ನು ನೋಡಿ ಜನರು ಬೆರಗಾಗಿದ್ದಾರೆ. ಹಾಗೆ ನೋಡಿದರೆ ಅನೇಕ ಹಳೆಯ ದೇವಾಲಯಗಳು ಹಾಳಾದ ನಂತರ ಮುರಿದು ಬಿದ್ದು, ಪುನರ್ ನಿರ್ಮಾಣವಾಗಿವೆ.

 


ರಾಮಪ್ಪ ದೇವಸ್ಥಾನದ ವಿಷಯವನ್ನು ಪುರಾತತ್ವ ಇಲಾಖೆಗೆ ತಿಳಿಸಿದಾಗ, ಅವರು ದೇವಾಲಯವನ್ನು ಪರೀಕ್ಷಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಆದರೂ ಈ ದೇವಾಲಯವು ಇಲ್ಲಿಯವರೆಗೆ ಎಷ್ಟು ಬಲವಾಗಿ ನಿಂತಿದೆ ಎಂಬ ರಹಸ್ಯವನ್ನು ಕಂಡುಹಿಡಿಯಲು ಅವರಿಗೆ ಸಾಧ್ಯವಾಗಲಿಲ್ಲ. ನಂತರ, ದೇವಾಲಯ ಬಲವಾಗಿರುವುದರ ಹಿಂದಿನ ರಹಸ್ಯವನ್ನು ಕಂಡುಹಿಡಿಯಲು ಪುರಾತತ್ವ ವಿಭಾಗದ ತಜ್ಞರು ಕಲ್ಲಿನ ತುಂಡನ್ನು ಕತ್ತರಿಸಿದರು. ಆ ನಂತರ ಆಶ್ಚರ್ಯಕರವಾದಂತಹ ಸತ್ಯ ಬಹಿರಂಗವಾಯಿತು. ಆ ಕಲ್ಲು ತುಂಬಾ ಹಗುರವಾಗಿದ್ದು, ಅದನ್ನು ನೀರಿನಲ್ಲಿ ಹಾಕಿದಾಗ ಅದು ನೀರಿನಲ್ಲಿ ಮುಳುಗುವ ಬದಲು ತೇಲಲು ಪ್ರಾರಂಭಿಸಿತು. ಬಹುತೇಕ ಎಲ್ಲಾ ಪ್ರಾಚೀನ ದೇವಾಲಯಗಳು ಅವುಗಳ ಭಾರವಾದ ಕಲ್ಲುಗಳ ಭಾರದಿಂದಾಗಿ ಮುರಿದುಹೋಗಿದ್ದು, ರಾಮಪ್ಪ ದೇವಸ್ಥಾನವನ್ನು ತುಂಬಾ ಹಗುರವಾದ ಕಲ್ಲುಗಳಿಂದ ನಿರ್ಮಿಸಿರುವುದರಿಂದ, ಈ ದೇವಾಲಯವು ಬಿದ್ದಿಲ್ಲ.

 


ಆದರೆ ನಂತರ ಮನಸ್ಸಿಗೆ ಬಂದ ದೊಡ್ಡ ಪ್ರಶ್ನೆಯೆಂದರೆ, ರಾಮಪ್ಪ ದೇವಸ್ಥಾನ ಕಟ್ಟಲು ಹಗುರುವಾದ ಕಲ್ಲುಗಳು ಎಲ್ಲಿಂದ ಬಂದವು? ಏಕೆಂದರೆ ಅಂತಹ ಕಲ್ಲುಗಳು ಪ್ರಪಂಚದಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ, ಅವು ನೀರಿನಲ್ಲಿ ತೇಲುತ್ತವೆ. ಹಾಗಾದರೆ ರಾಮಪ್ಪ ಅವರು ಅಂತಹ ಕಲ್ಲುಗಳನ್ನು ಸ್ವತಃ ನಿರ್ಮಿಸಿದ್ದಾರೆಯೇ ? ಅದೂ 800 ವರ್ಷಗಳ ಹಿಂದೆ? ಕಲ್ಲುಗಳು ನೀರಿನಲ್ಲಿ ತೇಲುವಂತಹ ತಂತ್ರವನ್ನು ಅವರು ಕಂಡುಕೊಂಡಿದ್ದರಾ? ಈ ಎಲ್ಲಾ ಪ್ರಶ್ನೆಗಳು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿವೆ. ಏಕೆಂದರೆ ಕಲ್ಲುಗಳ ರಹಸ್ಯಗಳನ್ನು ಇಲ್ಲಿಯವರೆಗೆ ಯಾರೂ ತಿಳಿದಿಲ್ಲ.

Advertisement
Share this on...