ಪ್ರೀತಿಯ ಮಾವುತನನ್ನು ಅಪ್ಪಿ, ಮುತ್ತು ಪಡೆದು ಮನೆಗೆ ಕಳಿಸಿಕೊಟ್ಟ ಆನೆ…ವಿಡಿಯೋ ವೈರಲ್

in ಮನರಂಜನೆ 152 views

‘ಪ್ರಾಣಿಗಳೇ ಗುಣದಲಿ ಮೇಲು ಮಾನವನದಕಿಂತ ಕೀಳು’ ಎಂಬ ‘ಸಂಪತ್ತಿಗೆ ಸವಾಲ್’ ಚಿತ್ರದ ಹಾಡನ್ನು ನೀವು ಕೇಳಿರುತ್ತೀರಿ. ಈ ಸಾಲನ್ನು ಸುಮ್ಮನೆ ಬರೆದಿಲ್ಲ. ಪ್ರಾಣಿಗಳ ಒಳ್ಳೆ ಗುಣವನ್ನು ಕಂಡವರು ಮಾನವನ ರಾಕ್ಷಸ ಪ್ರವೃತ್ತಿಯ ಬಗ್ಗೆ ತಿಳಿದವರು ಖಂಡಿತ ಈ ಮಾತನ್ನು ಒಪ್ಪಲೇಬೇಕು.ಉದಾಹರಣೆಗೆ ಇತ್ತೀಚೆಗೆ ಕೇರಳದಲ್ಲಿ ಕಿಡಿಗೇಡಿಗಳು ಹಣ್ಣಿನಲ್ಲಿ ಸ್ಫೋಟಕ ಇಟ್ಟು ಅದನ್ನು ಗರ್ಭಿಣಿ ಆನೆಗೆ ತಿನ್ನಲು ಕೊಟ್ಟು ಕೊಲೆ ಮಾಡಿದ್ದು. ಭಾರತೀಯ ಸಂಪ್ರದಾಯದಲ್ಲಿ ಆನೆಯನ್ನು ಗಣಪತಿಗೆ ಹೋಲಿಸುತ್ತಾರೆ. ದೇವಸ್ಥಾನಗಳಲ್ಲಿ ಆನೆಗಳನ್ನು ಪೂಜಿಸುತ್ತಾರೆ. ಆದರೆ ಅಂತ ಆನೆಯನ್ನೇ ಪಾಪಿಯೊಬ್ಬ ಕೊಲೆ ಮಾಡಿದ್ದಾನೆ. ಯಾವುದೇ ಪ್ರಾಣಿಗಳಾಗಲೀ ತಮ್ಮನ್ನು ಕೆಣಕದೆ ಅವು ಮನುಷ್ಯನ ಮೇಲೆ ದಾಳಿ ಮಾಡುವುದಿಲ್ಲ.

Advertisement

 

Advertisement

Advertisement

ಇನ್ನು ನೀವು ಪ್ರಾಣಿಗಳನ್ನು ಎಷ್ಟು ಗೌರವಿಸುತ್ತೀರೋ, ಎಷ್ಟು ಪ್ರೀತಿಸುತ್ತಿರೋ ಅವು ಕೂಡಾ ನಿಮ್ಮನ್ನು ಹಾಗೆ ಕಾಣುತ್ತವೆ. ಇದಕ್ಕೆ ಈ ವಿಡಿಯೋ ಸಾಕ್ಷಿ. ಕೇರಳದ ದೇವಸ್ಥಾನವೊಂದರ ಮಾವುತನೊಬ್ಬ ತಾನು ಸಾಕಿರುವ ಆನೆಯನ್ನು ಎಷ್ಟು ಪ್ರೀತಿಸುತ್ತಾನೆ, ಅದೇ ರೀತಿ ಆನೆ ಕೂಡಾ ಆತನನ್ನು ಎಷ್ಟು ಹಚ್ಚಿಕೊಂಡಿದೆ ಎಂಬುದು ಇದನ್ನು ನೋಡಿದರೆ ತಿಳಿಯುತ್ತದೆ. ಮಾವುತ ತನ್ನ ಕೆಲಸ ಮುಗಿಸಿ ಮನೆಗೆ ಹೋಗಲೇ ಎಂದು ಆನೆಯನ್ನು ಕೇಳುತ್ತಾನೆ. ಇದಕ್ಕೆ 2 ಬಾರಿ ಆನೆ ತಲೆ ಅಲ್ಲಾಡಿಸುತ್ತದೆ. ನಂತರ ಎಡಕ್ಕೆ ಬಾಗಿ ತನ್ನನ್ನು ನೋಡಿಕೊಳ್ಳುತ್ತಿರುವ ಮಾವುತನನ್ನು ಅಪ್ಪಿಕೊಳ್ಳುವಂತೆ ಮಾಡಿ ಅವನಿಂದ ಮುತ್ತು ಪಡೆಯುತ್ತದೆ. ಇದನ್ನು ನೋಡಿದರೆ ನಿಜಕ್ಕೂ ಅಣ್ಣಾವ್ರು ಹೇಳಿದ ಹಾಡು ನೂರಕ್ಕೆ ನೂರು ಸತ್ಯ ಎನ್ನಿಸುತ್ತದೆ.

Advertisement

ಇದೊಂದೇ ಅಲ್ಲ ಇಂತಹ ಸಾಕಷ್ಟು ಉದಾಹರಣೆಗಳು ನಿಮಗೆ ದೊರೆಯುತ್ತದೆ. ಮಾಲೀಕ ಸಾವನ್ನಪಿದಾಗ ಆತನಿಗಾಗೇ ಕಾದು ಕುಳಿತ ಶ್ವಾನ, ಮಗುವೊಂದನ್ನು ಪ್ರೀತಿಯಿಂದ ಮುದ್ದಾಡುವ ಕೋತಿ, ಚಿತ್ರ ಬಿಡಿಸುವ ಆನೆ, ತನ್ನ ಪ್ರಾಣ ಉಳಿಸಿದ ವ್ಯಕ್ತಿಯನ್ನು ನೋಡಲು ನೂರಾರು ಕಿ.ಮೀ ಈಜಿಕೊಂಡು ಬರುವ ಪೆಂಗ್ವಿನ್, ತನ್ನನ್ನು ಸಾಕಿ ಸಲಹಿದ ಮಾಲೀಕನನ್ನು ಓಡಿ ಬಂದು ಅಪ್ಪಿಕೊಳ್ಳುವ ಹುಲಿ ಹೀಗೆ ಎಷ್ಟೋ ವಿಡಿಯೋಗಳು ಈಗಾಗಲೇ ಸಾಕಷ್ಟು ವೈರಲ್ ಆಗಿದೆ.

Advertisement
Share this on...