ಟೆನ್ನಿಸ್ ಕೃಷ್ಣ ಮಗಳು ಹೇಗಿದ್ದಾರೆ ಗೊತ್ತಾ? ಯಾವ ಹಿರೋಯಿನ್ ಗಿಂತ ಕಡಿಮೆ ಇಲ್ಲ !

in ಮನರಂಜನೆ/ಸಿನಿಮಾ 109 views

ಕನ್ನಡದ ಹಿರಿಯ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಅವರು ಜನಿಸಿದ್ದು ಮತ್ತು ವಿದ್ಯಾಬ್ಯಾಸವನೆಲ್ಲಾ ಮುಗಿಸಿದ್ದು ಉದ್ಯಾನ ನಗರಿ ಬೆಂಗಳೂರಿನಲ್ಲಿ. ಚಿತ್ರರಂಗಕ್ಕೆ ಬರುವ ಮುನ್ನ ಇವರು ಟೆನ್ನಿಸ್ ಆಟವನ್ನು ಚೆನ್ನಾಗಿ ಕಲಿತು ತರೆಬೇತಿಗಾರರಾಗಿ ಕೆಲಸ ಮಾಡುತ್ತಿದ್ದರು. ನಂತರ ಅವರಿಗೆ ಬಣ್ಣದಲೋಕದಲ್ಲಿ ಕಾಲಿಡುವ ಮುನ್ನ ಟೆನ್ನಿಸ್ ತರಬೇತಿಗಾರರಾಗಿದ್ದ ಅವರು ಅಭಿನಯಿಸುವ ಅವಕಾಶಗಳು ಸಿಕ್ಕಿದಾಗ ಅವರನ್ನು ಗುರುತಿಸಲು ಸುಲುಭವಾಗಲಿ ಎಂದು ಟೆನ್ನಿಸ್ ಕೃಷ್ಣ ಎಂದೇ ಖ್ಯಾತಿ ಪಡೆದರು. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಜನರನ್ನು ನಗೆ ಗಡಲಲ್ಲಿ ತೇಲಿಸಿದ ಅವರು ಕನ್ನಡ ಚಿತ್ರರಂಗದ ಒಬ್ಬ ಹಾಸ್ಯ ದಿಗ್ಗಜ ನಟರಾಗಿ ಹೊರ ಬಂದಿದ್ದಾರೆ. ಹಾಸ್ಯ ನಟರಾಗಿ ಅಭಿನಯಿಸಿ ಜನರ ಮನಸನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಸಿನಿಮಾ ಸೂಪರ್ ಹಿಟ್ ಆಗಲು ಕೇವಲ ನಾಯಕ ನಾಯಕಿಯರಿಂದ ಮಾತ್ರ ಸಾಧ್ಯವಾಗುವುದಿಲ್ಲ. ಚಿತ್ರದ ಕಥೆ ಬಹಳ ಗಟ್ಟಿಯಾಗಿರಬೇಕು ಮತ್ತು ಕಥೆ ಬಹಳ ಚೊಕ್ಕವಾಗಿರಬೇಕು ಜೊತೆಗೆ ನಿರ್ದೇಶನ , ಸಂಭಾಷಣೆ , ತಾಂತ್ರಿಕತೆ ಎಲ್ಲ ಕಥೆಗೆ ಪೂರಕವಾಗಿರಬೇಕು.

Advertisement

Advertisement

ಹಾಗೆ ಕಥೆಯಲ್ಲಿನ ಪಾತ್ರಗಳು ಜೀವ ತುಂಬಿ ನಟಿಸಿದಾಗ ಮಾತ್ರ ಆ ಚಿತ್ರ ದೊಡ್ಡ ಸಕ್ಸಸ್ ಕಾಣುತ್ತದೆ. ಇದೆಲ್ಲದಿಕ್ಕಿಂತ ಹೆಚ್ಚಾಗಿ ಸಿನಿಮಾಗೆ ಹಾಸ್ಯವೂ ಕೂಡ ಬಹಳ ಮುಖ್ಯವಾಗಿರುತ್ತದೆ. ಹಾಸ್ಯನಟರು ಸಿನಿಮಾದ ಒಂದು ಮುಖ್ಯ ಭಾಗವಾಗುತ್ತಾರೆ. ಹೀಗೆ ತನ್ನ ಅದ್ಭುತ ಹಾಸ್ಯ ನಟನೆಯಿಂದ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದವರು ನಟ ಟೆನ್ನಿಸ್ ಕೃಷ್ಣ ಅವರು. ಸುಮಾರು 30 ವರ್ಷಗಳಿಂದ 600ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿ, ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದು ಬಿಟ್ಟಿದ್ದಾರೆ.

Advertisement

 

Advertisement

ಚಂದನವನದ ಹೆಸರಾಂತ ನಟರಾದ ವರನಟ ಡಾಕ್ಟರ್ ರಾಜ್ ಕುಮಾರ್ , ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್, ಕ್ರೇಜಿ ಸ್ಟಾರ್ ರವಿಚಂದ್ರನ್, ನವರಸ ನಾಯಕ ಜಗ್ಗೇಶ್, ರಿಯಲ್ ಸ್ಟಾರ್ ಉಪೇಂದ್ರ ಹೀಗೆ  ಮುಂತಾದ ಕನ್ನಡದ ಕೆಲವು ಪ್ರಸಿದ್ಧ ನಾಯಕ ನಟರು ಹಾಗೂ ಯುವ ನಟರ ಜೊತೆ ನಟಿಸಿರುವ ಟೆನ್ನಿಸ್ ಕೃಷ್ಣ ಅವರು ಉದಯೋನ್ಮುಖ ಕಲಾವಿದರಿಗೆ ಸ್ಪೂರ್ತಿದಾಯಕರಾಗಿದ್ದಾರೆ. ಸಿನಿಮಾಗಳಲ್ಲಿ ಕಾಮಿಡಿಗಳನ್ನು ಮಾಡುವುದು ಅಷ್ಟು ಸುಲಭವಲ್ಲ ವಿಶಿಷ್ಟ ಬಾಡಿ ಲಾಂಗ್ವೇಜ್ , ಡಿಫರೆಂಟ್ ಮ್ಯಾನರಿಸಂ ಬೇಕು. ಸಂಭಾಷಣೆಯಲ್ಲಿ ಏರಿಳಿತ ಇವೆಲ್ಲವನ್ನ ಬ್ಯಾಲೆನ್ಸ್ ಮಾಡಿಕೊಂಡು ನಟಿಸಿದಾಗ ಮಾತ್ರ ಹಾಸ್ಯವೆನಿಸುತ್ತದೆ. ಇವೆಲ್ಲ ಒಬ್ಬ ಹಾಸ್ಯ ನಟನಿಂದ ಹೊರಹೊಮ್ಮುತ್ತದೆ.ಇವೆನಲ್ಲಾ ಕರಗತ ಮಾಡಿಕೊಂಡು ತೆರೆಯ ಮೇಲೆ ನಕ್ಕು ನಗಿಸಿದವರು ಇದೇ ಟೆನ್ನಿಸ್..

 

ಇನ್ನು ಈ ಹಾಸ್ಯ ದಿಗ್ಗಜನಿಗೆ ಒಬ್ಬರು ಮುದ್ದಾದ ಮಗಳಿದ್ದಾರೆ. ಈ ಚೆಲುವೆಯ ಹೆಸರು ರಂಜಿತಾ ಎಂದು. ಸ್ಪುರದ್ರೂಪಿ, ಚೆಲುವೆ ಈಕೆ. ಆದರೆ ಈಕೆಯ ಬಗ್ಗೆ  ಮಾಹಿತಿಯನ್ನ ಟೆನ್ನಿಸ್ ಅವರು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಆಕೆಯೂ ಕೂಡ ಸಿನಿಮಾದಲ್ಲಿ ನಟಿಸಲು ಆಸಕ್ತಿ ಹೊಂದಿದ್ದಾರೆ ಎಂಬುದು ಮಾತ್ರ ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಟೆನ್ನಿಸ್ ಕೃಷ್ಣ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆ ಯಾಗಿದೆ. ಇನ್ನು ಮುಂದೆಯಾದರು ಅವರಿಗೆ ಅವಕಾಶಗಳು ಒದಗಿ ಬರಲಿ, ಮಗಳ ಜೊತೆ ಸುಖವಾಗಿರಲಿ ಎಂದು ಹಾರೈಸೋಣ

Advertisement
Share this on...