ಚಂದನವನದತ್ತ ಮುಖ ಮಾಡಿದ ತಮನ್ನಾ, ಕಬ್ಬಡ್ಡಿ ಆಡುವುದನ್ನು ಕಲಿತುಕೊಳ್ಳುತ್ತಿರುವುದ್ಯಾಕೆ ಗೊತ್ತಾ..?

in ಸಿನಿಮಾ 73 views

‘ಬಾಹುಬಲಿ’ಯಂತಹ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ತಮನ್ನಾ ಭಾಟಿಯಾ, ಇದುವರೆಗೂ ದಕ್ಷಿಣ ಭಾರತದ ಹಲವಾರು ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ್ದಾರೆ. ತಮನ್ನಾ ಹಿಂದಿ ಚಲನಚಿತ್ರ ಪ್ರಿಯರಿರೂ ಚಿರಪರಿಚಿತ ಮುಖ. ಬಾಲಿವುಡ್’ನಲ್ಲಿ ಅವರು ‘ಎಂಟರ್ಟೈನ್ಮೆಂಟ್’ ಮತ್ತು ‘ಹಮ್ಶಕಲ್ಸ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನವಾಜುದ್ದೀನ್ ಸಿದ್ದಿಕಿ ಅಭಿನಯದ ‘ಬೋಲೆ ಚುಡಿಯಾನ್’ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Advertisement

 

Advertisement

Advertisement

 

Advertisement

ಈಗ ಕನ್ನಡ ಚಿತ್ರರಂಗದಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಲು ತಮನ್ನಾ ಯೋಜಿಸುತ್ತಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ. ಹೌದು, ‘ಕೆಜಿಎಫ್: ಚಾಪ್ಟರ್ 2’ ರ ನಂತರ ತಮನ್ನಾ ಅವರಿಗೆ ಯಶ್ ಅವರ ಮುಂದಿನ ಚಿತ್ರದಲ್ಲಿಯೂ ಕೆಲಸ ಮಾಡಲು ಅವಕಾಶ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ. ಇನ್ನೇನು ತಯಾರಕರು ತಮನ್ನಾ ಗ್ರೀನ್ ಸಿಗ್ನಲ್’ಗೆ ಕಾಯುತ್ತಿದ್ದಾರೆ ಎಂದು ವರದಿಯಾಗಿದೆ. ತಮನ್ನಾ ಒಂದು ವೇಳೆ ಸ್ಯಾಂಡಲ್ವುಡ್ಗೆ ಬಂದಿದ್ದೇ ಆದಲ್ಲಿ, ಇಲ್ಲಿನ ಎಲ್ಲ ಸ್ಟಾರ್ ನಾಯಕಿಯರಿಗೆ ಟಫ್ ಕಾಂಪಿಟೇಶನ್ ಕೊಡುವುದರಲ್ಲಿ ಎರಡು ಮಾತಿಲ್ಲ.

 

 

ಈ ಹಿಂದೆ ಯಶ್ ಅಭಿನಯದ ಕೆಜಿಎಫ್: ಚಾಪ್ಟರ್ 1 ರಲ್ಲಿ ಸ್ಪೆಷಲ್ ಸಾಂಗ್’ಗೆ ಹೆಜ್ಜೆ ಹಾಕಿದ್ದರು ತಮನ್ನಾ. ಈಗ ಎಲ್ಲಾ ಅಂದುಕೊಂಡಂತೆ ನಡೆದರೆ ಮುಂದಿನ ಚಿತ್ರದಲ್ಲಿ ಯಶ್ ಅವರೊಂದಿಗೆ ತಮನ್ನಾ ರೋಮ್ಯಾನ್ಸ್ ಮಾಡುವುದನ್ನು ನೋಡಬಹುದು.  ಇತ್ತೀಚೆಗಷ್ಟೇ ತಮನ್ನಾಗೆ ಕೆಲಸವೇ ಇಲ್ಲ, ಆದ್ದರಿಂದ ಯಾವ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂಬ ರೂಮರ್ ಹಬ್ಬಿದ್ದವು. ಆಗ ಇದಕ್ಕೆ ತಿರುಗೇಟು ನೀಡಿದ್ದ ತಮನ್ನಾ, “ಸದ್ಯ ನಾನು ನಟಿಸುತ್ತಿರುವ ಪಾತ್ರಗಳು ಬಹುಮುಖದಿಂದ ಕೂಡಿರಲು ಹಂಬಲಿಸುತ್ತಿದ್ದೇನೆ. ನಾನು ಮಾಡುವ ಚಿತ್ರಗಳನ್ನೂ ಅವಸರಿಸದೆ, ಸ್ವಲ್ಪವಾದರೂ ಆಲೋಚಿಸಿ, ಆಯ್ಕೆ ಮಾಡಿ ಒಪ್ಪಿಕೊಳ್ಳುತ್ತೇನೆ” ಎಂದು ಹೇಳಿದ್ದರು.

 

 

ತಮನ್ನಾ ಪ್ರಸ್ತುತ ಸೌತ್ ಚಿತ್ರಗಳಲ್ಲಿ ದೊಡ್ಡ ದೊಡ್ಡ ಸ್ಟಾರ್’ಗಳ ಜೊತೆ ನಟಿಸುತ್ತಿರುವುದಲ್ಲದೆ, ತೆಲುಗು ಮತ್ತು ತಮಿಳು ಎರಡರಿಂದಲೂ ಸ್ಟಾರ್ ನಟರ ಜೊತೆ ಕೆಲಸ ಮಾಡಲು ಅವಕಾಶ ಪಡೆದಿದ್ದಾರೆ.
ಈಗ ಗೋಪಿಚಂದ್ ಅವರೊಂದಿಗೆ ‘ಸೀತಿಮಾರ್’ ಚಿತ್ರದಲ್ಲಿ ಕಬಡ್ಡಿ ಕೋಚ್ ಆಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸಂಪತ್ ನಂದಿ ನಿರ್ದೇಶಿಸುತ್ತಿದ್ದು, ಚಿತ್ರಕ್ಕಾಗಿ ತಮನ್ನಾ ಸಾಕಷ್ಟು ಫಿಟ್ನೆಸ್ ಕಾಪಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಅವರು ಕಟ್ಟುನಿಟ್ಟಿನ ಆಹಾರವನ್ನು ಸೇವಿಸುತ್ತಿದ್ದಾರೆ. ಕಬ್ಬಡ್ಡಿಯನ್ನು ಎಂದಿಗೂ ಆಡದಿದ್ದರೂ ತರಬೇತಿಗಳಲ್ಲಿ ಭಾಗವಹಿಸಿ, ಕಬ್ಬಡ್ಡಿ ಆಡುವುದನ್ನು ಕಲಿತುಕೊಳ್ಳುತ್ತಿದ್ದಾರಂತೆ ತಮನ್ನಾ.

Advertisement
Share this on...