ಪುಸ್ತಕ ದಿನಾಚರಣೆ ಎಂಬ ನಿತ್ಯ ದಾಸೋಹ

in ಕನ್ನಡ ಮಾಹಿತಿ 295 views

ಅರಿವಿನ ಮೂಲ ಅಕ್ಷರ. ವೇದೋಪನಿಷತ್ತುಗಳನ್ನು ಶೂದ್ರರು ಓದಬಾರದೆಂಬ ಕಾಲ‌ ಮಾಯವಾಗಿ ಸಾವಿರ ವರ್ಷಗಳು ಗತಿಸಿದರೂ ಮನುಷ್ಯ ಇನ್ನೂ ಜ್ಞಾನ ಸಂಪಾದಿಸಲು‌ ಹರ ಸಾಹಸ ಮಾಡುತ್ತಿದ್ದಾನೆ.

Advertisement

ಗೀತೆಯ ಸಾರ ಬೋಧಿಸಿದ ಜಗದ ಮೊದಲ ಗುರು ಶ್ರೀ ಕೃಷ್ಣ, ನಂತರ ಶೂದ್ರರ ಕಿವಿಗೆ ಕಾದ ಸೀಸ ಹಾಕುವ ಬೆದರಿಕೆಯಿಂದ ಸ್ಥಗಿತಗೊಂಡ ಓದಿಗೆ ಚಾಲನೆ ಕೊಟ್ಟವರು ಅನುಭವ ಮಂಟಪದ ಬಸವಾದಿ ಶರಣರು. ಬರೀ ಶೂದ್ರರಿಗಷ್ಟೇ ಅಲ್ಲ, ಪಂಚಮರಿಗೂ ಜ್ಞಾನ ದಾಸೋಹ ಕಲ್ಪಿಸಿದರು. ಬರೀ ಓದು,ಬರಹ ಕಲಿಸಲಿಲ್ಲ ವೈಚಾರಿಕ ಚಳುವಳಿ ಮೂಲಕ ವಚನಗಳ ರಚನೆ ಮತ್ತು ಅಂತರಂಗದ ಅರಿವಿನ ಅಧ್ಯಾತ್ಮ ಹೇಳಿಕೊಟ್ಟರು. ಅದರ ಪ್ರತಿಫಲವಾಗಿ ಸಾವಿರಾರು ವಚನಕಾರರು, ಲಕ್ಷಾಂತರ ವಚನಗಳ ಜ್ಞಾನ ಫಸಲು ನಮ್ಮ ಬಳಿ ಉಳಿಯಲು ಸಾಧ್ಯವಾಯಿತು.

Advertisement

 

Advertisement

Advertisement

 

ಬ್ರಿಟಿಷರು ದೇಶ ಆಳುವಾಗ ಮತ್ತೆ ಎಲ್ಲ ವರ್ಗದವರಿಗೆ ಶಿಕ್ಷಣ ಮತ್ತು ಆರೋಗ್ಯ ಕಲ್ಪಿಸಿ ಹೊಸ ಮನ್ವಂತರಕೆ ನಾಂದಿ ಹಾಡಿದರು. ಸಂವಿಧಾನ ಶಿಲ್ಪಿ ಬಾಬಾ ಅಂಬೇಡ್ಕರ್ ಮಹಾ ಪುಸ್ತಕ ಪ್ರೇಮಿ, ಅವರಷ್ಟು ಓದಿದವರು ಜಗತ್ತಿನಲ್ಲಿ ಯಾರೂ ಇಲ್ಲ. ಅಮೆರಿಕಾ ಬೆರಗಾಗುವಂತೆ ಓದಿದ ಪ್ರತಿಭಾ ಸಂಪನ್ನ. ಅವರು ಸಂವಿಧಾನದ ಮೂಲಕ ಎಲ್ಲರಿಗೂ ಶಿಕ್ಷಣ ಕಲ್ಪಸಿ ಓದಿನ ಮಹತ್ವ ಸಾರಿದರು.
ಆಧುನಿಕ ಬದುಕಿನಲ್ಲಿ ಈಗ ಓದಿಗೆ ಹೇರಳ ಅವಕಾಶ.

 

 

ನನಗೆ ಓದುವ ಹವ್ಯಾಸ ಬಾಲ್ಯದಿಂದಲೂ ಇತ್ತು. ಮುಂದೆ ಓದಿದ ಶೇಕ್ಸ್‌ಪಿಯರ್ ನಾಟಕಗಳು ಹುಚ್ಚು ಹಿಡಿಸಿಬಿಟ್ಟವು. ಓದು,ಬರಹ ಕಲಿಸಿದ ತೋಂಟದಾರ್ಯ ಅಜ್ಜಾ ಅವರು, ವಚನಗಳ ಮಾತಿಗೆ ವೇದಿಕೆ ಕಲ್ಪಿಸಿ ಸಾವಿರಾರು ಭಾಷಣ ಮಾಡಿಸಿ ವಚನಗಳ ವಿಸ್ತಾರ ವಿವರಿಸಿದ ಇಲಕಲ್ಲ ಮಹಾಂತ ಅಪ್ಪಗಳು,ಕಾಲೇಜು ಅಧ್ಯಾಪಕರ ಜ್ಞಾನ ಸಂಪತ್ತು ನನ್ನ ವ್ಯಕ್ತಿತ್ವ ರೂಪಿಸಿತು. ಪಾಠ ಮಾಡುವಾಗ ಇಂಗ್ಲಿಷ್ ಓದು, ಸಾಹಿತ್ಯ ಕೃಷಿಗೆ ಇಳಿದ ಮೇಲೆ ಓದಿದ್ದು ನೂರಾರು ಕನ್ನಡ ಪುಸ್ತಕಗಳು. ಈಗಲೂ ಓದಲು ಕುಳಿತರೆ ಪಟ್ಟು ಹಿಡಿದು ಓದುತ್ತೇನೆ,ಬರೆದರೆ ದೈತ್ಯನಾಗಿ ಬರೆದು ಖುಷಿ ಪಡುತ್ತೇನೆ.

 

 

ಇಷ್ಟವಾದ ವ್ಯಕ್ತಿಗಳ ಜೊತೆ ಮಾತ್ರ ಗಂಭೀರ ಚರ್ಚೆ, ಇಲ್ಲದೆ ಹೋದರೆ ಬರೀ ಕಾಡು ಹರಟೆ. ಅವರನ್ನು ಖುಷಿ ಪಡಿಸಲೆಂಬಂತೆ. ಇತ್ತೀಚೆಗೆ ಬರೀ ಆಧ್ಯಾತ್ಮ ಪುಸ್ತಕಗಳ ಗೀಳು,ವಚನಗಳು, ಓಶೋ, ಬುದ್ಧ ಹೀಗೆ ಒಳ ಜಗತ್ತಿನ ಹುಚ್ಚು. ವಾಸ್ತವದ ಓಡಾಟ, ಇತರರ ಓಲೈಕೆಯಿಂದ ಏನೂ ಪ್ರಯೋಜನವಿಲ್ಲ ಅನಿಸಲಾರಂಭಿಸಿದೆ. ಮಹತ್ವದ ಪುಸ್ತಕಗಳನ್ನ ಎತ್ತಿಟ್ಟುಕೊಂಡಿದ್ದೇನೆ. ಓದುವುದು ತುಂಬಾ ಇದೆ, ಅನೇಕ ಜಗತ್ಪ್ರಸಿದ್ಧ ಬರಹಗಾರರ ಪುಸ್ತಕಗಳು ಕೈ ಮಾಡಿ ಕರೆಯತ್ತಲೇ ಇವೆ. ಓದುವ ಖುಷಿ ಕಾಪಿಟ್ಟುಕೊಂಡಿದ್ದೇನೆ.

 

 

ಸಂಗೀತ, ಧ್ಯಾನ, ಜೀವನ ಪ್ರೇಮದ ಜೊತೆಗೆ, ಒಂಟಿತನ ಏಕಾಂತವಾಗಿಸುವ ತಾಕತ್ತು, ಸ್ಥಾಯಿ ಭಾವ ಕೇವಲ ಪುಸ್ತಕಗಳಿಗೆ ಮಾತ್ರ ಇದೆ ಎಂಬುದು ಈ ಕಡ್ಡಾಯ ಮನೆ ವಾಸದಲ್ಲಿ ಇನ್ನೂ ಹೆಚ್ಚು ಅರ್ಥವಾಗಿದೆ. ಈಗ ಸದಾ ಪುಸ್ತಕದ ಮಧ್ಯೆ ಕಳೆದು ಹೋಗಿರುವಾಗ ಪುಸ್ತಕ ದಿನ ಇನ್ನೂ ವಿಶೇಷ ಅನಿಸಿದ್ದು ಸಹಜ. ಓದುಗರಿಗೆ ನಿತ್ಯವೂ ಪುಸ್ತಕ ದಿನ. ಇಂದು ಇನ್ನೂ ಕೊಂಚ ವಿಶೇಷ ಸ್ಮರಣೆ ನಮ್ಮ ಹುಟ್ಟು ಹಬ್ಬದ ಹಾಗೆ!

#ಸಿದ್ದುಯಾಪಲಪರವಿಕಾರಟಗಿ.

Advertisement
Share this on...