Dr.rajkumar coin

ಬಂಗಾರದ ನಾಣ್ಯಗಳನ್ನು ತಯಾರಿಸುವ ಮೂಲಕ ಬಂಗಾರದ ಮನುಷ್ಯನಿಗೆ ಗೌರವ ಸಲ್ಲಿಸಿದ ಕಂಪನಿ

in ಮನರಂಜನೆ/ಸಿನಿಮಾ 216 views

ಮನುಷ್ಯನಾಗಿ ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಬೇಕು ಎಂದು ಎಷ್ಟೋ ಜನರು ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಅಂದುಕೊಂಡ ಗುರಿ ಮುಟ್ಟುವ ಮೂಲಕ ಸಾಧನೆ ಮಾಡುವುದು ಸುಲಭದ ಮಾತಲ್ಲ. ಅದಕ್ಕಾಗಿ ಶ್ರಮ ಪಡಬೇಕು. ಹಂತಹಂತವಾಗಿ ಮೇಲೆ ಬರಬೇಕೇ ಹೊರತು, ರಾತ್ರಿ ಆಗಿ ಬೆಳಗ್ಗೆ ಕಳೆಯುವುದರ ಒಳಗಾಗಿ ಯಶಸ್ಸು ನಮ್ಮದಾಗುವುದಿಲ್ಲ. ಸಾಧನೆ ಮಾಡಿದ ಎಷ್ಟೋ ಕನ್ನಡಿಗರು ನಮ್ಮಲ್ಲಿದ್ದಾರೆ. ಆ ಮಹನೀಯರ ಹೆಸರನ್ನು ನಾವು ಇಂದಿಗೂ ನೆನೆಯುತ್ತಿದ್ದೇವೆ ಎಂದರೆ ಅವರು ಮಾಡಿದ ಆ ಸಾಧನೆಯೇ ಕಾರಣ. ಅಂತಹ ಸಾಧಕರಲ್ಲಿ ಕನ್ನಡ ಚಿತ್ರರಂಗದ ವರನಟ ಡಾ. ರಾಜ್​ಕುಮಾರ್ ಕೂಡಾ ಒಬ್ಬರು. ನಾಟಕಗಳಲ್ಲಿ ನಟಿಸುತ್ತಾ ಮುತ್ತುರಾಜನಾಗಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಡಾ. ರಾಜ್​ಕುಮಾರ್ ಕೂಡಾ ಬಹಳ ಕಷ್ಟಪಟ್ಟು ಮೇಲೆ ಬಂದವರು. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ. ಇಂದಿಗೂ ಜನರು ಡಾ. ರಾಜ್​ ಅವರನ್ನು ಆರಾಧಿಸುತ್ತಿದ್ದಾರೆ ಎಂದರೆ ಅವರು ತಮ್ಮ ನಟನೆಯಿಂದ ಜನರ ಮನಸ್ಸನ್ನು ಗೆದ್ದಿರುವುದೇ ಕಾರಣ.

Advertisement

Advertisement

ಡಾ. ರಾಜ್​ಕುಮಾರ್ ಅವರಿಗೆ ಸಂದ ಗೌರವ ಒಂದಲ್ಲಾ ಎರಡಲ್ಲಾ. ಮೈಸೂರು ವಿಶ್ವವಿದ್ಯಾಲಯ ಅಣ್ಣಾವ್ರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಪಾಲ್ಕೆ, ಎನ್​​ಟಿಆರ್ ರಾಷ್ಟ್ರಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳು ಅವರನ್ನು ಹುಡುಕಿಬಂದಿವೆ. ಅಣ್ಣಾವ್ರ ಮುಖಪುಟ ಇರುವ ಅಂಚೆ ಚೀಟಿ ಕೂಡಾ ಬಿಡುಗೆಯಾಗಿದೆ. ಡಾ. ರಾಜ್​ಕುಮಾರ್​ ಅವರಿಗೆ ಭಾರತ ರತ್ನ ನೀಡಬೇಕು ಎಂಬ ಒತ್ತಾಯ ಕೂಡಾ ಅಭಿಮಾನಿಗಳಿಂದ ಕೇಳಿಬರುತ್ತಿದೆ. ಈ ನಡುವೆ ಕಲೆಕ್ಟಿಬಲ್ ಮಿಂಟ್ ಎಂಬ ಕಂಪನಿಯೊಂದು ಡಾ. ರಾಜ್​ಕುಮಾರ್ ಚಿತ್ರವಿರುವ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳನ್ನು ತಯಾರಿಸುವ ಮೂಲಕ ವರನಟನಿಗೆ ಗೌರವ ಸಲ್ಲಿಸಿದೆ.

Advertisement

ಕಲೆಕ್ಟಿಬಲ್ ಮಿಂಟ್ ಕಂಪನಿ ಡಾ. ರಾಜ್​ಕುಮಾರ್ ಕುಟುಂಬದ ಅನುಮತಿ ಪಡೆದು ಅವರ ಚಿತ್ರವಿರುವ ಬೆಳ್ಳಿ ನಾಣ್ಯಗಳು ಹಾಗೂ ಚಿನ್ನದ ನಾಣ್ಯಗಳನ್ನು ತಯಾರಿಸಿದೆ. ಈ ಕಂಪನಿ ತಯಾರಿಸಿರುವ ಚಿನ್ನದ ನಾಣ್ಯಗಳ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 22 ಕ್ಯಾರೆಟ್ ಚಿನ್ನದಲ್ಲಿ ಈ ಚಿನ್ನದ ನಾಣ್ಯಗಳನ್ನು ತಯಾರಿಸಲಾಗಿದೆ. ಈ ನಾಣ್ಯಗಳ ಮೇಲೆ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯ ಅಕ್ಷರಗಳಿವೆ. ಒಂದೊಂದು ನಾಣ್ಯ 10-25 ಗ್ರಾಂ ತೂಕ ಇದೆ.

Advertisement


ತಮ್ಮ ಮೆಚ್ಚಿನ ನಟನಿಗೆ ಈ ರೀತಿಯ ಗೌರವ ಸಲ್ಲುತ್ತಿರುವುದಕ್ಕೆ ಅಭಿಮಾನಿಗಳು ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ. ಡಾ. ರಾಜ್​ಕುಮಾರ್ ಅವರ ಚಿತ್ರವಿರುವ ನಾಣ್ಯಗಳನ್ನು ಖರೀದಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಕಲೆಕ್ಟಿಬಲ್ ಮಿಂಟ್, ಸ್ವತ: ಈ ನಾಣ್ಯಗಳನ್ನು ಜನರಿಗೆ ತಲುಪುವ ವ್ಯವಸ್ಥೆ ಮಾಡಲಿದೆಯೋ ಅಥವಾ ನಾಣ್ಯಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿ ಜನರಿಗೆ ತಲುಪುವ ವ್ಯವಸ್ಥೆ ಮಾಡಲಿದೆಯೋ ಕಾದು ನೋಡಬೇಕು.

Advertisement
Share this on...