ಕಿರುತೆರೆಯ ಈ ನಟಿಗೆ ಪವರ್ ಸ್ಟಾರ್ ಜೊತೆ ನಟಿಸುವ ಬಯಕೆ !

in ಮನರಂಜನೆ/ಸಿನಿಮಾ 453 views

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕಿ ಮಂಗಳಗೌರಿಯಾಗಿ ನಟಿಸಿ, ವೀಕ್ಷಕರ ಮನ ಸೆಳೆದ ಚೆನ್ನಪಟ್ಟಣದ ಚೆಲುವೆಯ ಹೆಸರು ಕಾವ್ಯಶ್ರೀ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆಯೇ ಮಂತ್ರಾಲಯ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸುವ ಮೂಲಕ ಬಣ್ಣದ ಯಾನ ಶುರು ಮಾಡಿದ ಕಾವ್ಯಶ್ರೀ ಮೊದಲ ಬಾರಿಗೆ ನಾಯಕಿಯಾಗಿ ಗುರುತಿಸಿದ್ದು ಮಂಗಳಗೌರಿಯಾಗಿ ಬದಲಾದ ಬಳಿಕವೇ! ಮಂಗಳ ಗೌರಿಯಾಗಿ ನಟಿಸಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಕಾವ್ಯಶ್ರೀಗೆ ಬಾಲ್ಯದಿಂದಲೂ ನಟನೆಯೆಂದರೆ ವಿಶೇಷ ಆಸಕ್ತಿ. ನಟಿಯಾಗಿ ಟಿವಿಯಲ್ಲಿ, ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಮಹಾದಾಸೆ ಹೊಂದಿದ್ದ ಆಕೆಗೆ ಮನೆಯವರ ಬೆಂಬಲವಿರಲಿಲ್ಲ. ಸಾಂಪ್ರದಾಯಿಕ ವಾತಾವರಣವಿದ್ದ ಕಾರಣ ಮನೆಯವರು ಅಸ್ತು ಎಂದಿರಲಿಲ್ಲ. ಪತ್ರಿಕೋದ್ಯಮ ಪದವಿ ಪಡೆದಿರುವ ಕಾವ್ಯಶ್ರೀ ಗೆ ಬಣ್ಣದ ಜಗತ್ತನ್ನು ಬಿಟ್ಟಿರಲು ಸಾಧ್ಯವೇ ಇರಲಿಲ್ಲ. ನಟಿಯಾಗದಿದ್ದರೆ ಪರವಾಗಿಲ್ಲ, ಕೊನೇ ಪಕ್ಷ ನಿರೂಪಕಿಯಾಗಿಯಾದರೂ ಕಾಣಿಸಿಕೊಳ್ಳಬೇಕು ಎಂಬ ನಿರ್ಧಾರ ಮಾಡಿದ ಆಕೆ ನಿರೂಪಣೆಯ ಮೂಲಕ ಕಿರುತೆರೆಗೆ ಕಾಲಿಟ್ಟರು‌. ನಿರೂಪಕಿಯಾಗಿ ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ ತನ್ನ ಆಸೆ ಈಡೇರಿದ್ದರೂ ಆಕೆಗೆ ನಟಿಯಾಗಬೇಕು ಎಂಬ ಆಸೆ ಕಡಿಮೆಯಾಗಿರಲಿಲ್ಲ. ತನ್ನ ಆಸೆ ನೆರವೇರಿಸುವುದಕ್ಕಾಗಿ ನಿರೂಪಣೆಯ ನಡುವೆ ಸಿನಿಮಾ ಧಾರಾವಾಹಿಗಳ ಆಡಿಶನ್ ಗಳನ್ನು ಅಟೆಂಡ್ ಮಾಡಿದ್ದಾರೆ.

Advertisement

Advertisement

ರಾಮ್ ಜೀ ನಿರ್ದೇಶನದ ಮನೆಯೇ ಮಂತ್ರಾಲಯ ಧಾರಾವಾಹಿಯಲ್ಲಿ ಪುಟ್ಟ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟ ಆಕೆ ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಮಂಗಳಗೌರಿಯಾಗಿ ನಟಿಸಿ ಮನೋಜ್ಞ ಅಭಿನಯದ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದಿರುವ ಕಾವ್ಯಶ್ರೀಗೆ ಮೊದಲ ಬಾರಿ ಬಣ್ಣ ಹಚ್ಚಿದಾಗ ಭಯವಾಗಿತ್ತು. ನಟನೆಯ ರೀತಿ ನೀತಿಗಳು, ಆಗು ಹೋಗುಗಳು ತಿಳಿಯದ ಕಾರಣ ನಟಿಸುವುದು ಹೇಗೆ ಎಂಬ ಅಳುಕು ಅವರಿಗೆ ಕಾಡಿತ್ತು. ಆದರೆ ರಾಮ್ ಜೀ, ಚಂದ್ರಕಲಾ ಮೋಹನ್, ರಕ್ಷ್, ರಂಜನಿ ಅವರು ನೀಡಿದ ಪ್ರೋತ್ಸಾಹ, ಬೆಂಬಲವೇ ಆಕೆಯಿಂದು ಮಂಗಳಗೌರಿಯಾಗಿ ಮಿಂಚಲು ಕಾರಣ.

Advertisement

 

Advertisement

“ರಾಮ್ ಜೀ ನಿರ್ದೇಶನದ ಪುಟ್ಟ ಗೌರಿ ಮದುವೆ ಧಾರಾವಾಹಿಯನ್ನು ನಾನು ಮಿಸ್ ಮಾಡದೇ ನೋಡುತ್ತಿದ್ದೆ. ಪುಟ್ಟ ಗೌರಿ ಮದುವೆಯ ಕಥ ಹಂದರವನ್ನು ನಾನು ಮೆಚ್ಚಿಕೊಂಡಿದ್ದೆ. ಆದರೆ ಇದೀಗ ಅದೇ ಧಾರಾವಾಹಿಯ ಮುಂದುವರಿದ ಭಾಗದಲ್ಲಿ ನಾನು ನಟಿಸುತ್ತಿದ್ದೇನೆ ಎನ್ನುವುದಕ್ಕೆ ತುಂಬಾನೇ ಖುಷಿಯಾಗುತ್ತಬಯಕೆ‌. ವೀಕ್ಷಕರು ಮಂಗಳಗೌರಿಯನ್ನು ಸ್ವೀಕರಿಸಿದ್ದಾರೆ ಮತ್ತು ನನ್ನ ನಟನೆಯನ್ನು ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಕಳೆದ ವರ್ಷ ಅನುಬಂಧ ಅವಾರ್ಡ್ಸ್ ನಲ್ಲಿ ನಾನು ಪಡೆದ ಮನೆ ಮೆಚ್ಚಿದ ಮಗಳು ಪ್ರಶಸ್ತಿಯೇ ಕಾರಣ” ಎನ್ನುತ್ತಾರೆ ಕಾವ್ಯಶ್ರೀ.

ಸದ್ಯ ಮಂಗಳ ಗೌರಿ ಮದುವೆಯಾಗಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಕಾವ್ಯಶ್ರೀ ಉತ್ತಮ ಅವಕಾಶ ದೊರೆತರೆ ಸಿನಿಮಾದಲ್ಲಿ ಅಭಿನಯಿಸುವ ಮಹಾದಾಸೆ ಇದೆ. ಒಮ್ಮೆಯಾದರೂ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಹೊಂದಿದ್ದ ಚೆನ್ನಪಟ್ಟಣದ ಚೆಲುವೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ತೆರೆ ಹಂಚಿಕೊಳ್ಳುವ ಬಯಕೆ‌.
– ಅಹಲ್ಯಾ

Advertisement
Share this on...