ನವರಾತ್ರಿಯ ಐದನೇಯ ದಿನ : ಜಗನ್ಮಾತೆಯ ಸ್ಕಂದ ಮಾತಾ ರೂಪ - Namma Kannada Suddi
navarathri fifth day

ನವರಾತ್ರಿಯ ಐದನೇಯ ದಿನ : ಜಗನ್ಮಾತೆಯ ಸ್ಕಂದ ಮಾತಾ ರೂಪ

in ಜ್ಯೋತಿಷ್ಯ 793 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಮಿಸ್ ಆಶ್ವಯುಜ ಮಾಸೆ, ಶುಕ್ಲ ಪಕ್ಷದ ಪಂಚಮಿ ತಿಥಿ,  ಜೇಷ್ಠ ನಕ್ಷತ್ರ,  ಶೋಭನಾ ಯೋಗ, ಬಾಲವ  ಕರಣ, ಅಕ್ಟೋಬರ್ 21  ಬುಧವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಸಂಜೆ  7 ಗಂಟೆ 5 ನಿಮಿಷದಿಂದ 8 ಗಂಟೆ 30 ನಿಮಿಷದವರೆಗೂ ಇದೆ.  ಈ ಸಮಯದಲ್ಲಿ ಸರಸ್ವತಿ ಮತ್ತು ಲಕ್ಷ್ಮೀ ಪೂಜೆಯ ಸಂಕಲ್ಪ ಮಾಡಿಕೊಳ್ಳಬಹುದು.

Advertisement

ಜಗನ್ಮಾತೆಯು ಸ್ಕಂದ ಮಾತಾ ರೂಪದಲ್ಲಿ ನಮ್ಮೆಲ್ಲರಿಗೂ ದಿವ್ಯದರ್ಶನವನ್ನು ಕೊಟ್ಟಿರುವಂತಹ ದಿನ. ನವರಾತ್ರಿಯಂದು ಇದು ಐದನೇಯ ದಿನ. ಯಾರ ಜಾತಕದಲ್ಲಿ ಚಂದ್ರ ಕುಜ ರಾಹು ಕೇತುಗಳು ಪ್ರಭಾವವಿರುತ್ತದೆ ಅಲ್ಲೊಂದು ಯು’ದ್ಧವಿರುತ್ತದೆ. ಚಂದ್ರ ಮನೋಕಾರಕ, ರಾಹು ಹುಳಿ ಕಾರಕ,  ಕುಜ ವಿ’ಸ್ಫೋ’ಟ ಕಾರಕ ಅಲ್ಲಿಗೆ ಶನಿಯ ದೃಷ್ಟಿ ಬಿದ್ದಿತೆಂದರೆ ಅಲ್ಲೊಂದು ಯು’ದ್ಧ’ವೇ. ಸ್ಕಂದನನ್ನು ಭೂಮಿಕಾ’ರಕ,  ರತ್ನಕಾ’ರಕ, ಗಣಿಕಾ’ರಕ, ಆಗರ್ಭಕಾ’ರಕ, ಮೈನಿಂಗ್ ಕಾ’ರಕ, ಟ್ರಾನ್ಸ್ ಪೋರ್ಟ್ ಕಾ’ರಕ , ಭಾತೃ ಕಾ’ರಕ ಜಗಳ ಕಾ’ರಕ,  ಕಲಹ ಕಾ’ರಕ,  ರಕ್ತ ಕಾ’ರಕ, ಇವೆಲ್ಲದರ ಪ್ರಭಾವವೇ ಸ್ಕಂದ. ಚಂದ್ರ ರಾಹು ಕುಜ ಶನಿ ಯ ಪ್ರಭಾವವಿದ್ದರೆ ಭೂಮಿ ತ’ಗಾದೆ ಅಣ್ಣತಮ್ಮಂದಿರ ಏಳಿಗೆಯಿಲ್ಲ, ಮನೆಯಲ್ಲಿ ಎಲೆಕ್ಟ್ರಿಕ್ ವಸ್ತುಗಳು ಸಮಸ್ಯೆ ಹೆಚ್ಚಾಗಿದ್ದರೆ ಆ ಮನೆಯ ಯಜಮಾನನಿಗೆ ಬಲವಿಲ್ಲ ಎಂದರ್ಥ.  ಮೂವತ್ತು ವರ್ಷ ದಾಟಿದ ಮುತ್ತೈದೆಯರನ್ನು ಮನೆಗೆ ಕರೆದು ಅರಿಶಿನ ಕುಂಕುಮ ಕೊಟ್ಟು ವಸ್ತ್ರವನ್ನುಆ ಅಮ್ಮಂದಿರಿಗೆ ಉಡಿಸಿ ಅಕ್ಷತೆ ಹಾಕಿಸಿಕೊಂಡು ಆಶೀರ್ವಾದವನ್ನು ಪಡೆಯಿರಿ ಸಕಲ ದೋಷಗಳೆಲ್ಲ ನಿವಾರಣೆಯಾಗುತ್ತದೆ. ಈ ಮುತ್ತೈದಯರ ಪೂಜೆ ಅಪರೂಪದಲ್ಲೊಂದು ಅಪರೂಪದ ಪೂಜೆ.

Advertisement

Advertisement

ಮದುವೆಯವರೆಗೂ ಬಂದು ಮದುವೆ ಮುರಿದು ಹೋಗಿದ್ದರೆ 8ವರ್ಷದ ಒಳಗಿನ ಮಕ್ಕಳನ್ನು ಕರೆದುಕೊಂಡು ಬಂದು ಅವರಿಗೆ ಒಳ್ಳೆಯ ಅಲಂಕಾರಿಕ ವಸ್ತುಗಳನ್ನು ಕೊಟ್ಟು, ಮಕ್ಕಳು ದೇವಿಯ ಅಂಶವಾಗಿರುವುದರಿಂದ ಅವರನ್ನು ಕೂರಿಸಿ ಪಾದಪೂಜೆ ಮಾಡಬೇಕು. ನಂತರ ಆ ಮಕ್ಕಳಿಗೆ ಸಿಹಿಯನ್ನು ಕೊಡಬೇಕು.  ಮಾಂಗಲ್ಯ ದೋಷಕ್ಕೆ ಕೌಮಾರಿ ಪೂಜೆಗಿಂತ ದೊಡ್ಡ ಪೂಜೆಯಿಲ್ಲ. ಸರಸ್ವತಿ ದೇವಿಯು ಲೋಕದಲ್ಲಿ ನನಗೆ ಪೂಜೆಯಿಲ್ಲ ಎಂದು ಅಮ್ಮನನ್ನು ಕೇಳಿಕೊಂಡಾಗ, ನವರಾತ್ರಿಯಲ್ಲಿ 3ದಿನ ಲಕ್ಷ್ಮಿ,  3ದಿನ ಸರಸ್ವತಿ,  3ದಿನ ದುರ್ಗಾ ಸ್ವರೂಪವಾಗಿ ನಾನು ಇರುತ್ತೇನೆ ಪೂಜಾ ಸಂಕಲ್ಪವಾಗಲಿ ಎಂದು ಅಮ್ಮನವರು ಕೊಟ್ಟಿರುವಂತಹ ಆಶೀರ್ವಾದ. ಇಂದು ಸರಸ್ವತಿ ದೇವಿಯ ಪೂಜೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋವನ್ನು ನೋಡಿ.

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಯಾರೋ ದಗಲ್ಬಾಜಿತನದಿಂದ  ನಿಮ್ಮನ್ನು ಪ್ರಚೋದಿಸಿ  ಬೆಟ್ಟಿಂಗ್  ಮುಂತಾದ ಅಂದರ್ ಬಾಹರ್ ಕೆಲಸಗಳಿಗೆ ನಿಮ್ಮನ್ನು ಸಿಕ್ಕಾಕಿಸಿ ಬಿಡುತ್ತಾರೆ ಎಚ್ಚರವಾಗಿರಿ.

ವೃಷಭ ರಾಶಿ :  ತುಂಬಾ ವಿಶೇಷವಾದ ದಿನ. ಬುದ್ಧಿ ಉಪಯೋಗಿಸಿ ಮಾಡುವ ಕೆಲಸ ಕಾರ್ಯಗಳಲ್ಲಿ ವಿಶೇಷವಾದ ಪ್ರಗತಿಯನ್ನು ಪಡೆಯುವಿರಿ. ಇಂಜಿನಿಯರಿಂಗ್  ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿರುವವರಿಗೆ ಅದ್ಬುತವಾದ ದಿನ.

ಮಿಥುನ ರಾಶಿ : ಪರಿಶ್ರಮ ಸ್ವಲ್ಪ ಜಾಸ್ತಿ ಆದರೂ ಕೂಡ ಅದೇ ರೀತಿ ಒಳ್ಳೆಯ ಫಲವನ್ನು ಕೂಡ ನೋಡುತ್ತೀರಾ.

ಕರ್ಕಾಟಕ ರಾಶಿ : ಎಕ್ಸ್ ಪೋರ್ಟ್ ಇಂಪೋರ್ಟ್ ಕೆಲಸಕಾರ್ಯಗಳಲ್ಲಿ ತೊಡಗಿರುವವರಿಗೆ ಸ್ವಲ್ಪ ತೊಳಲಾಟ. ಜಾಗ್ರತೆಯಿಂದ ಹೆಜ್ಜೆ ಇಡಿ.

ಸಿಂಹ ರಾಶಿ : ರಾಜನಂತೆ ದರ್ಪದಿಂದ ಕುಳಿತು ಸುಖವನ್ನು ಪಡೆಯುವಂಥ ಅದ್ಭುತವಾದ ದಿನ.

ಕನ್ಯಾ ರಾಶಿ :  ಬುಧ ಸ್ವಲ್ಪ ವಕ್ರವಾಗಿರುವುದರಿಂದ ವಕ್ರವಾದ ದುಡ್ಡು ವಕ್ರವಾದ ಸಂಪಾದನೆ ಕಡೆಗೆ ಮನಸ್ಸು ಇಳಿಯುತ್ತದೆ ಆದರೆ ಅದು ಬೇಡ.

ತುಲಾ ರಾಶಿ : ಇರುವ ಬಂಗಾರ ಮತ್ತು ಬೆಳ್ಳಿಯ ಮೇಲೆ ಗಮನ. ಸಾವಿರಾರು ಜನರ ಮುಂದೆ ಮದುವೆಯಾದ ಪತಿ ಪತ್ನಿಯರು ಇಬ್ಬರು ಪರಸ್ಪರ ಗೌರವ ಪ್ರೀತಿಯಿಂದ ಇರಬೇಕು. ಅನ್ಯಮಾರ್ಗದಲ್ಲಿ ಬದುಕನ್ನ ಕಟ್ಟಿಕೊಳ್ಳಲು ಹೋಗಬಾರದು.

ವೃಶ್ಚಿಕ ರಾಶಿ : ದಿನದಾರಂಭ ತೊಳಲಾಟದಿಂದ ಇದ್ದರೂ ಆನಂತರ ಅನುಕೂಲಕರ.

ಧನಸ್ಸು ರಾಶಿ : ದುಡ್ಡು ಕೊಡುವ ಮತ್ತು ತೆಗೆದುಕೊಳ್ಳುವ ವಿಚಾರದಲ್ಲಿ ಏರುಪೇರಾಗುತ್ತದೆ ಎಚ್ಚರಿಕೆಯಿಂದ ಅದನ್ನು ನಿಭಾಯಿಸಿ.

ಮಕರ ರಾಶಿ : ದಿಢೀರ್ ದುಡ್ಡು ,ದಿಢೀರ್ ಓಡಾಟದ ದಿನ.

ಕುಂಭ ರಾಶಿ : ವ್ಯವಹಾರವೆಲ್ಲ ನಿಮ್ಮ ಲೆಕ್ಕಾಚಾರಕ್ಕೆ ತಕ್ಕಂತೆ ನಡೆಯುವಂತಹ ಅದ್ಭುತವಾದ ದಿನ.

ಮೀನ ರಾಶಿ : ಪಾಟ್ನ ರ್ ಶಿಪ್ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ಯಿಂದ ಇರಿ. ಮಿಕ್ಕಂತೆ ಅದೇ ರೀತಿಯ ತೊಂದರೆಯಿಲ್ಲ. ಬಂಧುಗಳ ಜತೆಯಲ್ಲಿ,  ಆತ್ಮೀಯರ ಜೊತೆಯಲ್ಲಿ, ತಿಳಿದವರ ಜೊತೆಯಲ್ಲಿ ವ್ಯವಹಾರದ ನಿ’ಷಿ’ದ್ಧ, ವ್ಯವಹಾರ  ಮಾಡುವುದು ಒಳ್ಳೆಯದಲ್ಲ.

All Rights reserved Namma  Kannada Entertainment.

Advertisement
Share this on...

Latest from ಜ್ಯೋತಿಷ್ಯ

ಜೀವನದಲ್ಲಿ ಯಶಸ್ಸು ದೊರೆಯಲೆಂದು ಹೆಸರು ಬದಲಿಸಿಕೊಂಡಿದ್ದೀರಾ…ಹಾಗಿದ್ದಲ್ಲಿ ನೀವು ಇದನ್ನು ಓದಲೇಬೇಕು

ಯಾವುದೇ ವಸ್ತುವನ್ನಾಗಲೀ, ವ್ಯಕ್ತಿಯನ್ನಾಗಲೀ ಗುರುತಿಸಲು, ಸಂಬೋಧಿಸಲು ಹೆಸರು ಎನ್ನುವುದು ಬಹಳ ಮುಖ್ಯವಾಗಿದೆ. ಹಿಂದಿನ ಕಾಲದಲ್ಲಿ ಅದರಲ್ಲೂ…

Go to Top