80 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಗೆ ನೆಲೆಯಾಗಿರುವ ಈ ಆಲದ ಮರ ಎಲ್ಲಿದೆ ಗೊತ್ತಾ?

in ಕನ್ನಡ ಮಾಹಿತಿ 93 views

ದೀರ್ಘಕಾಲ ಬಾಳಿಕೆ ಬರುವ ಬೃಹತ್ ಗಾತ್ರದ ಆಲದ ಮರವನ್ನು ನಮ್ಮ ಸಂಪ್ರದಾಯದಲ್ಲಿ ಹಿಂದಿನಿಂದಲೂ ಪೂಜಿಸಲಾಗುತ್ತಿದೆ. ಆಲದ ಮರವನ್ನು ಹಿಂದೂ ಸಂಪ್ರದಾಯದ ಪ್ರಕಾರ ಪೂಜ್ಯವೆಂದು ಪರಿಗಣಿಸಲಾಗಿದೆ.

Advertisement

 

Advertisement

Advertisement

 

Advertisement

ಆಲದ ಮರಗಳು ಪ್ರಪಂಚದಾದ್ಯಂತ ಕಂಡುಬರುತ್ತವೆಯಾದರೂ, ವಿಶ್ವದ ಅತಿದೊಡ್ಡ ಆಲದ ಮರವಿರುವುದು ಭಾರತದ ಪಶ್ಚಿಮ ಬಂಗಾಳದಲ್ಲಿ ಮಾತ್ರ. ಈ ಆಲದ ಮರದ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸಹ ದಾಖಲಿಸಲಾಗಿದೆ. ಈ ಮರವನ್ನು ‘ದಿ ಗ್ರೇಟ್ ಬನ್ಯಾನ ಟ್ರೀ’ ಎಂದೂ ಕರೆಯಲಾಗುತ್ತದೆ. ಈ ಮರವು 250 ವರ್ಷಗಳಿಗಿಂತಲೂ ಹಳೆಯದು. ಈ ದೈತ್ಯ ಆಲದ ಮರ ಕೋಲ್ಕತ್ತಾದ ಆಚಾರ್ಯ ಜಗದೀಶ್ ಚಂದ್ರ ಬೋಸ್ ಬೊಟಾನಿಕಲ್ ಗಾರ್ಡನ್ನಲ್ಲಿದೆ. ಈ ಮರವನ್ನು ಇಲ್ಲಿ 1787 ರಲ್ಲಿ ಸ್ಥಾಪಿಸಲಾಯಿತು. ಈ ಮರವು ಅನೇಕ ಬೇರುಗಳನ್ನು ಮತ್ತು ಕೊಂಬೆಗಳನ್ನು ಹೊಂದಿದ್ದು, ಇದನ್ನು ನೋಡಿದಾಗ, ಇದು ಕೇವಲ ಒಂದು ಮರ ಎಂದು ಊಹಿಸಲು ಸಾಧ್ಯವಿಲ್ಲ.

 

 

14,500 ಚದರ ಮೀಟರ್ ವಿಸ್ತೀರ್ಣದಲ್ಲಿರುವ ಈ ಮರ ಸುಮಾರು 24 ಮೀಟರ್ ಎತ್ತರವಿದೆ. ಇದನ್ನು ವಿಶ್ವದ ಅಗಲವಾದ ಮರ ಅಥವಾ ವಾಕಿಂಗ್ ಟ್ರೀ ಎಂದೂ ಕರೆಯುತ್ತಾರೆ. ಈ ಒಂದು ಮರದ ಮೇಲೆ 80 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ವಾಸಿಸುತ್ತಿವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. 1884 ಮತ್ತು 1925 ರಲ್ಲಿ ಕೋಲ್ಕತ್ತಾದ ಚಂಡಮಾರುತವು ಈ ದೈತ್ಯ ಮರಕ್ಕೆ ದೊಡ್ಡ ಹಾನಿಯನ್ನುಂಟುಮಾಡಿತು. ಈ ಕಾರಣದಿಂದಾಗಿ, ಅನೇಕ ಕೊಂಬೆಗಳನ್ನು ಕತ್ತರಿಸಬೇಕಾಯಿತು. ಇದರ ಹೊರತಾಗಿಯೂ, ಈ ಮರವು ವಿಶ್ವದ ಅತಿದೊಡ್ಡ ಮರವೆಂದು ಪ್ರಸಿದ್ಧವಾಗಿದೆ.

 

 

 

1987 ರಲ್ಲಿ ಭಾರತ ಸರ್ಕಾರವು ಈ ದೈತ್ಯ ಆಲದ ಗೌರವಾರ್ಥವಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಇದನ್ನು ಬೊಟಾನಿಕಲ್ ಸರ್ವೆ ಆಫ್ ಇಂಡಿಯಾದ ಸಂಕೇತವೆಂದು ಪರಿಗಣಿಸಲಾಗಿದೆ. ಈ ಮರವನ್ನು ಸಸ್ಯವಿಜ್ಞಾನಿಗಳಿಂದ ಹಿಡಿದು ತೋಟಗಾರರವರೆಗೆ 13 ಜನರ ತಂಡ ನಿರ್ವಹಿಸುತ್ತಿದ್ದು, ಇದನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತದೆ.
ಹೌರಾದಿಂದ 7 ಕಿ.ಮೀ. ದೂರದಲ್ಲಿರುವ ಈ ಗಾರ್ಡನ್ ಸಸ್ಯ ವಿಜ್ಞಾನಿಗಳು ಮತ್ತು ಸಸ್ಯದ ಬಗ್ಗೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಒಂದು ಅತ್ಯುತ್ತಮ ತಾಣವಾಗಿದೆ. ನೆಮ್ಮದಿಯ ವಾತಾವರಣವನ್ನು ಬಯಸುವವರು, ಪ್ರಕೃತಿಗೆ ಹತ್ತಿರವಾಗಲು ಇಷ್ಪಪಡುವವರಿಗೂ ಇದೊಂದು ನೆಚ್ಚಿನ ಸ್ಥಳವಾಗಿದೆ.

Advertisement
Share this on...