ಬೆಂಗಳೂರು: ಈ ದೇಶದ ಸಂಪತ್ತನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ದಾನ ಮಾಡಿ, ರೈತಾಪಿ ಕುಲವನ್ನೇ ನಾಶ ಮಾಡುತ್ತಿದ್ದಾರೆ. ಕೃಷಿಕರನ್ನು ದಾಸ್ಯದಲ್ಲಿ ಉಳಿಸಬೇಕೆಂಬ ಹುನ್ನಾರ ಮಾಡಿದ್ದಾರೆ. ಎಂತಹಾ ಅಯೋಗ್ಯ ಈ ದೇಶದ ಪ್ರದಾನಿಯಾಗಿದ್ದಾನೆ ಎಂದು ರೈತ ನಾಯಕ ಬಡಗಲಪುರ ನಾಗೇಂದ್ರ ವಾಗ್ದಾಳಿ ನಡೆಸಿದರು. ರಾಷ್ಟ್ರಧ್ವಜಾರೋಹಣ ನೆರವೇರಿಸಬೇಕಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ತಡವಾಗಿ ಬಂದ ಕಾರಣ ದೊರೆಸ್ವಾಮಿಯವರ ಬದಲಿಗೆ ಬಡಗಲ ನಾಗೇಂದ್ರ ಅವರಿಂದ ಧ್ವಜಾರೋಹಣದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ, ಈ ದೇಶದ ಸಾರ್ವಭೌಮತ್ವವನ್ನು ಮೂರು ಕಾಸಿಗೆ ಹರಾಜಾಕುತ್ತಿದ್ದಾರೆ.ಈ ದೇಶದ ಸಂಪತ್ತನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ದಾನ ಮಾಡಿ, ರೈತಾಪಿ ಕುಲವನ್ನೇ ನಾಶ ಮಾಡುತ್ತಿದ್ದಾರೆ. ಕೃಷಿಕರನ್ನು ದಾಸ್ಯದಲ್ಲಿ ಉಳಿಸಬೇಕೆಂಬ ಹುನ್ನಾರ ಮಾಡಿದ್ದಾರೆ. ಎಂತಹಾ ಅಯೋಗ್ಯ ಈ ದೇಶದ ಪ್ರದಾನಿಯಾಗಿದ್ದಾನೆ. ಈ ದೇಶದ ರೈತರ ಮೇಲೆ ದೆಹಲಿಯಲ್ಲಿ ದಬ್ವಾಳಿಕೆ ಮಾಡುತ್ತಿರುವುದನ್ನು ನೋಡಿದ್ರೆ, ಈ ದೇಶದ ರಕ್ಷಣೆ ಈ ಪ್ರದಾನಿಯಿಂದ ಸಾಧ್ಯವಿಲ್ಲ. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು ಎಂದು ನುಡಿದರು.
“ಮೋದಿ ಒಣ ಪ್ರತಿಷ್ಟೆಗೋಸ್ಕರ ರೈತ ಹೋರಾಟ ತಡೆಯಲು ಪ್ರಯತ್ನಿಸಿದ್ದಾರೆ”
ಬಳಿಕ ಕಾರ್ಯಕ್ರಮಕ್ಕೆ ಬಂದ ಸ್ವಾತಂತ್ರ್ಯ ಹೋರಾಟಗಾರ
ಹೆಚ್.ಎಸ್.ದೊರೆಸ್ವಾಮಿ ಮಾತನಾಡಿ, ಜನವಿರೋಧಿ ಸರ್ಕಾರದ ವಿರುದ್ದ ಈ ಹೋರಾಟ ನಡೆದಿರುವುದು ಸ್ತುತ್ಯಾರ್ಹ. ಇಷ್ಟೊಂದು ಸಂಘಟನೆಗಳು ಒಂದಾಗಿರೋದು ಸಂತೋಷ.
ನಿಮ್ಮ ಜತೆಗೆ ಹೋರಾಟದಲ್ಲಿ ಪಾಲ್ಗೊಳ್ಳಲು ನನಗೆ ಚೈತನ್ಯವಿಲ್ಲವೆಂಬುದೇ ನನಗೆ ಬೇಸರ ಸಂಗತಿ. ದೆಹಲಿಯಲ್ಲಿ ಚಳಿ ಮಳೆಯನ್ನು ಲೆಕ್ಕಿಸದೆ ರೈತರು ಹೋರಾಟ ಮಾಡುತ್ತಿದ್ದಾರೆ. ರೈತರ ಹೋರಾಟವನ್ನು ತಡೆಯಲು ಸರ್ಕಾರ ಪ್ರಯತ್ನಿಸಿದ್ದು ಬೇಸರ. ಪೊಲೀಸರ ಗೋಡೆಗಳು, ಬ್ಯಾರಿಕೇಡ್ ಗಳನ್ನು ಮುರಿದು ರೈತರು ಮುನ್ನುಗ್ಗಿದ್ದಾರೆ.
ಮೋದಿ ಒಣ ಪ್ರತಿಷ್ಟೆಗೋಸ್ಕರ ರೈತ ಹೋರಾಟ ತಡೆಯಲು ಪ್ರಯತ್ನಿಸಿದ್ದಾರೆ. ಇಂದು ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾಗು ರೈತಧ್ವಜಾರೋಹಣ ಮಾಡಿದ್ದಾರೆ. ಟಿಯರ್ ಗ್ಯಾಸ್ ನ್ನು ಸಹಿಸಿಕೊಂಡು ಮುನ್ನುಗಿರೋದು ಸಾಹಸ. ಇಲ್ಲೂ ಕೂಡ ಕೋಡಿಹಳ್ಳಿ ಚಂದ್ರಶೇಖರ್ ಬಣವನ್ನು ತಡೆಯುವ ಪ್ರಯತ್ನ ಮಾಡಿದ್ರು. ಅದನ್ನು ಬೇಧಿಸಿ ಚಂದ್ರಶೇಖರ್ ಸಾಹಸ ಮಾಡಿ ಬಂದಿದ್ದಾರೆ. ಈ ಸಂಘಟನೆಗಳನ್ನು ಕೂಡಿಕೊಂಡಿದ್ದಕ್ಕೆ ಅವರಿಗೆ ನೂರು ನಮಸ್ಕಾರಗಳು ಎಂದರು.
“ಅದಾನಿ ಅಂಬಾನಿಗೆ ಎಲ್ಲವನ್ನು ಕೊಡುವ ಮುನ್ಸೂಚನೆ ಇದು”
ಮುಂದುವರೆದು ಮಾತನಾಡಿದ ಹೆಚ್.ಎಸ್. ದೊರೆಸ್ವಾಮಿಯವರು, ಈ ಕಾಯ್ದೆಗಳನ್ನು ಜಾರಿಗೆ ತರುವ ಮೊದಲು. ಅಂಬಾನಿ ಅದಾನಿಗಳಿಗೆ ಸರ್ಕಾರ ರೈಲುಗಳನ್ನು, ಕಂಟೈನರ್ ಗಳನ್ನು ಕೊಟ್ಟಿದೆ. ಅದಾನಿ ಅಂಬಾನಿಗಳು 150ಔಟ್ ಲೆಟ್ ಗಳನ್ನು ಪ್ರಾರಂಭಿಸಲು ಸಜ್ಜಾಗಿದ್ದರು. ಆದರೆ ಅಷ್ಟರಲ್ಲಿ ಪಂಜಾಬ್ ಹರ್ಯಾಣ ರೈತರು ಎಚ್ಚೆತ್ತುಕೊಂಡು ಪ್ರತಿಭಟನೆ ಮಾಡಿದ್ರು. ಅದಕ್ಕೆ ನಿಂತು ಹೋಯ್ತು. ನಮ್ಮ ಹಣಕಾಸು ಸಚಿವರು ರೈತರ ಕೃಷಿ ಉತ್ಪನ್ನಗಳನ್ನು ಕೊಳ್ಳಲು ಹಣವಿಲ್ಲ ಎಂದು ಕೈ ಎತ್ತಿದ್ದರು. ಇದು ಅದಾನಿ ಅಂಬಾನಿಗೆ ಎಲ್ಲವನ್ನು ಕೊಡಲು ಮುನ್ಸೂಚನೆ ಇದು.