ಸ್ವಲ್ಪ ಮೈಮರೆತಿದ್ದರೂ ಅಪಾಯ ಸಂಭವಿಸುತ್ತಿತ್ತು ಎಂದ ‘ಹೀರೋ’…

in ಮನರಂಜನೆ/ಸಿನಿಮಾ 975 views

ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದ ರಿಷಬ್ ಶೆಟ್ಟಿ ಇದೀಗ ’ಹೀರೋ’ ಆಗಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಬೆಲ್ ಬಾಟಂ ಚಿತ್ರದ ಮೂಲಕ ನಾಯಕ ನಟನಾಗಿ ಸೈ ಎನಿಸಿಕೊಂಡ ರಿಷಬ್ ಶೆಟ್ಟಿ ಇದೀಗ ತುಂಬಾ ಬ್ಯುಸಿ ನಾಯಕರಲ್ಲಿ ಒಬ್ಬರು. ಸದಾ ಲವಲವಿಕೆಯಿಂದ ಕೂಡಿರುವ ರಿಷಬ್ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲೂ ಸುಮ್ಮನಿರದೇ ’ಹೀರೋ’ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಂದಹಾಗೇ ರಿಷಬ್ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್ ಅಭಿನಯದ ಈ ಚಿತ್ರ ಮಾರ್ಚ್ 5ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ರಿಷಬ್ ಹೀರೋಯಿಸಮ್ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಈ ನಡುವೆ ಹೀರೋ ಚಿತ್ರದ ಶೂಟಿಂಗ್ ವೇಳೆ ಬೆಂ’ಕಿ ಅ’ವಘ’ಡ ಸಂ’ಭವಿಸಿ ನಟ ರಿಷಬ್ ಶೆಟ್ಟಿಗೆ ಗಾ’ಯಗಳಾಗಿವೆ ಎಂಬ ಸುದ್ದಿ ಹರಡಿದ್ದು, ಅಭಿಮಾನಿಗಳಲ್ಲಿ ಆ’ತಂ’ಕವನ್ನುಂಟು ಮಾಡಿದೆ.

Advertisement

Advertisement

ಹಾಸನದಲ್ಲಿ ನಡೆದಿದ್ದ ಹೀರೋ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಡೆದ ಅ’ವ’ಘ’ಡದ ಬಗ್ಗೆ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಂದು ಪೆಟ್ರೋಲ್ ಬಾಂ’ಬ್ ಬಳಸಿ ಶೂಟಿಂಗ್ ಮಾಡಲಾಗುತ್ತಿತ್ತು. ರಿಹರ್ಸಲ್ ಮಾಡುವಾಗ ಎಲ್ಲವೂ ಸರಿಯಾಗೇ ಇತ್ತು. ಚಿತ್ರೀಕರಣ ಮಾಡುವಾಗ ದು’ರ್ಘ’ಟನೆ ಸಂಭವಿಸಿದೆ ಎಂದಿದ್ದಾರೆ.

Advertisement

ಪೆಟ್ರೋಲ್ ಬಾಂ’ಬ್ ಬಳಸಿ ಚಿತ್ರೀಕರಣ ಮಾಡುತ್ತಿದ್ದೆವು. ಛಾಯಾಗ್ರಾಹಕನ ಕಾಲು ಕೆಸರಲ್ಲಿ ಮುಳುಗಿ ಹೋಗಿತ್ತು. ಹಾಗಾಗಿ ಮುಂದೆ ಹೋಗಲು ಸಾಧ್ಯವಾಗಿಲ್ಲ. ನನಗೆ ಬೆಂಕಿ ಶಾಖ ತಾಗುತ್ತಿದ್ದಂತೆ ಎನೋ ತೊಂದರೆಯಾಗಿದೆ ಎಂದು ಗೊತ್ತಾಗಿತ್ತು. ಆದರೆ ಕೆಸರಿದ್ದ ಕಾರಣ ಅಲ್ಲಿಂದ ಹೊರ ಬರಲು ಆಗಲಿಲ್ಲ. ಹಾಗಾಗಿ ಪೆಟ್ರೋಲ್ ಬಾಂ’ಬ್ ಸಿ’ಡಿ’ದ ವೇಳೆ ಬೆನ್ನು ಮತ್ತು ಕೂದಲಿಗೆ ಬೆಂ’ಕಿ ಹತ್ತಿತ್ತು. ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ರಿಂದ ಅಷ್ಟೊಂದು ತೊಂದರೆಯಾಗಿಲ್ಲ ಎಂದಿದ್ದಾರೆ.

Advertisement

ಚಿತ್ರೀಕರಣದ ವೇಳೆ ನಾವು ತೆಗೆದುಕೊಂಡಿದ್ದ ಮುನ್ನೆಚ್ಚರಿಕೆಯೇ ನಮ್ಮನ್ನು ಕಾಪಾಡಿದೆ. ಸ್ವಲ್ಪ ಮೈಮರೆತಿದ್ದರೂ ಅ’ಪಾ’ಯ ಸಂಭವಿಸುತ್ತಿತ್ತು. ನಮಗೆ ಬೆಂ’ಕಿ ತಾಗಿದ್ದರಿಂದ ಒಂದು ಕ್ಷಣ ಎಲ್ಲರೂ ಭಯಗೊಂಡರು. ನಂತರ ಆ ದೃಶ್ಯ ಮತ್ತೆ ಶೂಟ್ ಮಾಡಲಾಗಿದೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ ಎಂದು ಹೇಳಿದ್ದಾರೆ.

Advertisement