ashabhat robert actress

ರಾಬರ್ಟ್ ನ ನಾಯಕಿ ಮಲೆನಾಡಿನ ಈ ಆಶಾ ಭಟ್…ಕನ್ನಡದ ಚೊಚ್ಚಲ ಸಿನೆಮಾ !

in ಮನರಂಜನೆ/ಸಿನಿಮಾ 159 views

ಆಶಾ ಭಟ್ 2014ರ ಮಿಸ್ ಸೂಪರ್ ನ್ಯಾಶನಲ್ ಪಟ್ಟ ಮುಡಿಗೇರಿಸಿಕೊಂಡ ಮಲೆನಾಡಿನ ಕನ್ನಡತಿ. ಹಲವಾರು ಬ್ಯೂಟಿ ಕಂಟೆಸ್ಟ್‌ಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಮೊದಲ ಚಿತ್ರ ಹಿಂದಿಯ ‘ಜಂಗ್ಲಿ’ ಇದಕ್ಕೆ ಅಮೆರಿಕನ್ ನಿರ್ಮಾಪಕ ಚುಕ್ ರುಸ್ಸೆಲ್ ನಿರ್ದೇಶನ ಮಾಡಿದ್ದರು. ವಿದ್ಯುತ್ ಜಮ್ವಾಲ್ ಈ ಚಿತ್ರದ ನಾಯಕ ನಟ 2019ರಲ್ಲಿ ತೆರೆ ಕಂಡ ಈ ಚಿತ್ರ ಹೇಳುವಷ್ಟು ಯಶಸ್ಸು ಕಂಡಿರಲಿಲ್ಲ. ಆಶಾ ಭಟ್ ಇವರದ್ದೇ ಆದಾ ಸ್ವಂತ ಎನ್‌ಜಿಒ ಹೊಂದಿದ್ದು ಇದರ ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುತ್ತಾರೆ. ಅಂದಹಾಗೆ ಇವರು 5 ಸೆಪ್ಟೆಂಬರ್ 1992 ರಲ್ಲಿ ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜನಿಸಿದರು ಇವರ ತಂದೆ ಸುಬ್ರಮಣ್ಯ ಭಟ್, ತಾಯಿ ಶ್ಯಾಮಲ ಭಟ್ ಇವರಿಬ್ಬರು ಭದ್ರಾವತಿಯ ಮೆಡಿಕಲ್ ಲ್ಯಾಬ್ ಅಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ಇವರಿಗೆ ಒಬ್ಬರು ಸಹೋದರಿ ಸಹ ಇದ್ದಾರೆ. ಅವರು ಶಿಶು ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಭದ್ರಾವತಿಯಲ್ಲಿ ಮುಗಿಸುತ್ತಾರೆ ನಂತರ ತಮ್ಮ ಪಿಯುಸಿ ಅನ್ನು ಮೂಡುಬಿದರೆಯ ಆಳ್ವಾಸ್ ಕಾಲೆಜಿನಲ್ಲಿ ಮಾಡುತ್ತಾರೆ ಅದಾದ ಮೇಲೆ ಬ್ಯಾಚುರಲ್ ಡಿಗ್ರಿ ಅನ್ನು ಆರ್.ವಿ ಕಾಲೇಜ್ ಅಲ್ಲಿ ತಮ್ಮ ಇಲೆಕ್ಟ್ರಾನಿಕ್ ಇಂಜಿನಿರಿಂಗ್ ಅನ್ನು ಮುಗಿಸುತ್ತಾರೆ.

Advertisement

Advertisement

ಇನ್ನು ತಮ್ಮ ಕಾಲೇಜ್ ಅಲ್ಲಿ ಇರುವಾಗಲೇ ಅನೇಕ ಬ್ಯೂಟಿ ಕಾಂಟೆಸ್ಟ್ ಅಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ ಅನ್ನು ಪಡೆದು ಕೊಂಡಿದ್ದಾರೆ. ಅಷ್ಟಲ್ಲದೆ  ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ ಅಲ್ಲಿ ಸೇರಿಕೊಂಡು ರಿಪಬ್ಲಿಕ್ ಡೇ ಕ್ಯಾಂಪ್ ಅಲ್ಲಿ ಭಾಗವಹಿಸುತ್ತಾರೆ . ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ ನಿಯೋಗ ಸಾರ್ಕ್ ಸದಸ್ಯ ರಾಷ್ಟ್ರದಲ್ಲಿ ಅಲ್ಲಿ ಸದಸ್ಯರಾಗಿದ್ದಾರೆ. ಇವರು ಶ್ರೀಲಂಕಾದ ಮಿಲಿಟರಿ ಅಕಾಡೆಮಿಗೆ ಹೋಗಿ ಅಲ್ಲಿ ಆಲ್ ರೌಂಡರ್ ಅವಾರ್ಡ್ ಅನ್ನು ಪಡೆಯುತ್ತಾರೆ ಇದನ್ನು ಕೊಟ್ಟವರು ಶ್ರೀಲಂಕಾದ ಪ್ರೆಸಿಡೆಂಟ್.

Advertisement

2014 ರಲ್ಲಿ ಮಿಸ್ ಡಿವಾ ಅವಾರ್ಡ್ ಪಡೆದು ಕೊಂಡಿದ್ದಾರೆ.ಅದಲ್ಲದೆ  ಪ್ರಮುಖವಾಗಿ ಮಿಸ್ ಕಾಂಜಿನಿಯಲಿಟಿ ಮಿಸ್ ಬ್ಯೂಟಿಫುಲ್ ಸ್ಮೈಲ್ ,ಮಿಸ್ ಫ್ಯಾನ್ಸಿ ನೇಟಿಂಗ್ ಎಂಬ ಸ್ಪೆಷಲ್ ಅವಾರ್ಡ್ ಅನ್ನು ಪಡೆದು ಕೊಂಡಿದ್ದಾರೆ. ಅದಲ್ಲದೆ  2014/15 ರ ಅನೇಕ ದೇಶಗಳಿಗೆ ತೆರಳಿ ಅನೇಕ ಪ್ರಶಸ್ತಿ ಅನ್ನು ಪಡೆದುಕೊಂಡಿರುತ್ತಾರೆ. ಬಾಲಿವುಡ್‌ನಲ್ಲಿ ತಮ್ಮ ಸಿನೆಮಾ ಜೀವನ ಶುರು ಮಾಡಿದ ಆಶಾ ಭಟ್, ಈಗ ಕನ್ನಡದಲ್ಲಿ ತಮ್ಮ ಮೊಟ್ಟ ಮೊದಲ ಚೊಚ್ಚಲ ಸಿನೆಮಾವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಮಾಡುವ ಅವಕಾಶ ಗಿಟ್ಟಿಸಿಕೊಂಡು ನಟಿಸಿದ್ದಾರೆ.

Advertisement

ಬೇರೆ ಭಾಷೆಗಳ ನಟಿಯರು ನಟಿಸುತ್ತಾರೆ ಎಂಬ ಸುದ್ದಿ ಮೊದಲು ಹರಿದಾಡಿತ್ತು ಆದರೆ ಕನ್ನಡದವರಾದ ಇವರೇ ಆಯ್ಕೆ ಆಗಿ ನಟಿಸಿದ್ದು ಎಲ್ಲರಿಗೂ ಸಂತಸ ತಂದಿದೆ .ರಾಬರ್ಟ್ ಸಿನೆಮಾದ ಫಸ್ಟ್ ಲುಕ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ದಾಸನ ಅಭಿಮಾನಿಗಳು ಈ ಲುಕ್ ನೋಡಿ ಫುಲ್ ಥ್ರಿಲ್ ಆಗಿದ್ದರು. ಹೀಗಾಗಿ ‘ರಾಬರ್ಟ್’ ಸಿನೆಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರಕ್ಕೆ ಉಮಾಪತಿ ಬಂಡವಾಳ ಹೂಡಿದ್ದಾರೆ.

ಈಗಾಗಲೇ ಚಿತ್ರೀಕರಣ ಮುಗಿಸಿ ತೆರೆ ಮೇಲೆ ಅಪ್ಪಳಿಸಬೇಕಿತ್ತು ಆದರೆ ಕೋರೋನದಿಂದಾಗಿ ಸ್ವಲ್ಪ ತೊಂದರೆ ಉಂಟಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಇವರನ್ನು ತಾವು ಬೆಳ್ಳಿ ಪರದೆಯ ಮೇಲೆ ಕಾಣಬಹುದು.ಏನೇ ಆದರೂ ಇವರ ಕನ್ನಡದ ಮೊದಲ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಇನ್ನೂ ಅನೇಕ ಚಿತ್ರಗಳನ್ನು ಇವರು ಕನ್ನಡದಲ್ಲಿ ಮಾಡಿ ಕನ್ನಡಿಗರ ಮನಸ್ಸು ಗೆಲ್ಲಲಿ, ಭವಿಷ್ಯಕ್ಕೂ ಒಳ್ಳೆಯದಾಗಲಿ.

Advertisement
Share this on...