ಹಿಟ್ ಮೆಗಾ ಧಾರಾವಾಹಿಯ ನಾಯಕಿ ಇಂದು ಬೇರೆ ಭಾಷೆಯಲ್ಲಿ ಮಿಂಚುತ್ತಿದ್ದಾರೆ…..

in ಮನರಂಜನೆ/ಸಿನಿಮಾ 304 views

ಕೆಲ ವರ್ಷಗಳ ಹಿಂದೆ ಮೆಗಾ ಧಾರಾವಾಹಿಗಳು ಪ್ರಸಾರ ಆಗುತ್ತಿದ್ದವು. ಆವಾಗ ಸೋಶಿಯಲ್ ಮೀಡಿಯಾ ಅಷ್ಟೊಂದು ಗಟ್ಟಿ ಆಗಿರಲಿಲ್ಲ. ಯಾವುದೇ ಆಪ್ ಕೂಡಾ ಇರಲಿಲ್ಲ. ಹಾಗಾಗಿ ಸೀರಿಯಲ್ ನೋಡಬೇಕೆಂದರೆ ಅದು ಪ್ರಸಾರವಾಗುತ್ತಿದ್ದ ಟೈಮ್ ಅಲ್ಲಿಯೇ ನೋಡಬೇಕಿತ್ತು. ಅಂತಹ ಟೈಮ್ ಅಲ್ಲಿ ರಂಗೋಲಿ, ಮನೆಯೊಂದು ಮೂರು ಬಾಗಿಲು, ಬದುಕು ಮುಂತಾದ ಧಾರಾವಾಹಿಗಳು ಬಂದವು. ಆ ಸೀರಿಯಲ್ ಅಲ್ಲಿ ಮಿಂಚಿದ ನಾಯಕಿ ಈಗ ಪರಭಾಷೆ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ.ಇವರ ಹೆಸರು ಸಿರಿ ಅತಿ ಚಿಕ್ಕ ವಯಸ್ಸಲ್ಲಿ ಅಭಿನಯ ಮಾಡುವ ಅವಕಾಶ ಒದಗಿ ಬಂದಿತ್ತು. ಇವರು 9 ನೇ ತರಗತಿಯಲ್ಲಿ ಇರುವಾಗ ‘ ಅಂಬಿಕಾ ‘ ಧಾರವಾಹಿಯಲ್ಲಿ ನಾಯಕಿ ಆಗಿ ನಟಿಸುವ ಅವಕಾಶ ಸಿಕ್ಕಿತ್ತು ಆದ್ರೆ ಆಗ  ಓದಿನ ಕಡೆ ಗಮನ ಕೊಡುವ ಸಲುವಾಗಿ ಇವರು ಅದರಲ್ಲಿ ಪೋಷಕ ಪಾತ್ರವನ್ನು ಮಾಡಿದರು. ಇದಾದ ನಂತರ ಸಿನಿಮಾದಲ್ಲಿ ಮತ್ತು ಧಾರವಾಹಿಯಲ್ಲಿ ನಟಿಸಿದರು.ಇವರು ನಟಿಸಿದ ಧಾರಾವಾಹಿಗಳಲ್ಲಿ ಎಲ್ಲವೂ ಕೂಡ ಹಿಟ್ ಧಾರಾವಾಹಿಗಳು.ಅಂಬಿಕಾ ಧಾರಾವಾಹಿ ನಂತರ ಇವರ ಫೋಟೋ ತೆಲುಗು ಚಿತ್ರ ರಂಗಕ್ಕೆ ಹೋಯ್ತು. ಹೇಗೆ ಹೋಯ್ತು ಎಂಬುದು ಇವರಿಗೂ ಸಹ ಗೊತ್ತಿಲ್ಲ ಎನ್ನುತ್ತಾರೆ. ತೆಲುಗು ಚಿತ್ರರಂಗದ ಕಡೆಯಿಂದಲೂ ಸಾಕಷ್ಟು ಅವಕಾಶಗಳು ಅರಸಿ ಬಂದವು.

Advertisement

Advertisement

ಉಷಾ ಕಿರಣ್ ಅವರ ಬ್ಯಾನರ್ ಅದು ಜೂನಿಯರ್ ಎನ್ಟಿಆರ್ ಅವರ ‘ ನಿನ್ನ ಚೂಡಾಲನಿ ‘ ಸಿನಿಮಾದಲ್ಲಿ ನಟಿಸಿದರು.ಇವರು ಅದರಲ್ಲಿ ನಾಯಕಿಯಾಗಿ ನಟಿಸಬೇಕಿತ್ತು ಆದ್ರೆ ಇವರಿಗೆ ಆ ಭಾಷೆ ಅಷ್ಟೊಂದು ಸರಿಯಾಗಿ ಬರದೇ ಇದ್ದುದರಿಂದ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು.ಆಮೇಲೆ.ಇವರು ತೆಲುಗಿನಲ್ಲಿ 4 ಸಿನಿಮಾಗಳನ್ನು ನಾಯಕಿಯಾಗಿ ನಟಿಸಿದರು. ಆಮೇಲೆ ಕನ್ನಡದಲ್ಲಿ ‘ ಸಿಂಹಾದ್ರಿಯ ಸಿಂಹ ‘, ಚಂದು ಮುಂತಾದ ಸಿನಿಮಾಗಳಲ್ಲಿ ನಟಿಸಿದರು. ಇದರ ಜೊತೆ ಜೊತೆಗೆ ಕಿರುತೆರೆಯನ್ನು ಮರೆಯದೆ ಧಾರಾವಾಹಿಗಳಲ್ಲಿ ನಟನೆಯನ್ನು ಮಾಡಿದರು.ಸಿನಿಮಾದಲ್ಲಿ ಅಭಿನಯಿಸಿದ ನಂತರ ಇವರು ನಂತರ 30 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದರು. ಇವರು ನಟಿಸಿದ ಪ್ರತಿಯೊಂದು ಧಾರಾವಾಹಿ ಕೂಡಾ 1000 ಎಪಿಸೋಡ್ ದಾಟಿತ್ತು.

Advertisement

ಒಮ್ಮೊಮ್ಮೆ ಇವರು ಒಂದೇ ಸರಿ 3 ರಿಂದ 4 ಧಾರಾವಾಹಿಗಳಲ್ಲಿ ಬ್ಯುಸಿ ಆಗುತ್ತಿದ್ದರು. ಏಕಕಾಲಕ್ಕೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಧಾರಾವಾಹಿಗಳನ್ನು ಮಾಡುತ್ತಿದ್ದರು.ಅದರ ಮದ್ಯೆ ಇವರಿಗೆ ಮನೆಯ ಕಡೆ ಟೈಮ್ ಕೊಡೋದು ಇವರಿಗೆ ಆಗುತ್ತಿರಲಿಲ್ಲ. ಇವಗ್ಲೂ ಕೂಡಾ ಆಫರ್ ಸಾಕಷ್ಟು ಬಂದಿವೆ ಎಂದು ಹೇಳುತ್ತಾರೆ ಆದರೆ ಈ ಕೋರೋನಾ ಕಾರಣದಿಂದ ಯಾವುದಕ್ಕೂ ಹೋಗದೆ ಮನೆಯಲ್ಲಿಯೇ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ. ಕೆಲಸವನ್ನು ಮೊದಲು ಪ್ರೀತಿಸಬೇಕು. ಬೆಳ್ಳಿತೆರೆ ಅಂತ ಹೆಚ್ಚು ನಟಿಸೋದು,ಕಿರುತೆರೆ ಅಂತ ಕಡಿಮೆ ನಟಿಸೋದು ಮಾಡಿದಲ್ಲ. ಸಿನಿಮಾ ಕ್ಲಿಕ್ ಆದರೆ ಓಕೆ ಇಲ್ಲ ಎಂದರೆ ಮತ್ತೆ ಕಿರುತೆರೆಗೆ ವಾಪಸ್ ಬರಬೇಕಾಗುತ್ತದೆ.

Advertisement

ಸಿನಿಮಾ ಹಿಟ್ ಆದರೆ ಸ್ಟಾರ್ ಆಗ್ತಿವಿ.ಆದ್ರೆ ಧಾರಾವಾಹಿ ಹಿಟ್ ಆದರೆ ಮನೆ ಮತ್ತು ಜನಗಳ ಮನಸ್ಸಿನಲ್ಲಿ ಸದಾ ಕಾಲ ಮನೆ ಮಾಡಿಕೊಂಡು ಇರುತ್ತೇವೆ ಎನ್ನುತ್ತಾರೆ ಇವರು. ದೊಡ್ಡ ಸ್ಟಾರ್ ಆಗಬೇಕು ದುಡ್ಡು ಮಾಡ್ಬೇಕು ಅಂತ ದೊಡ್ಡ ದೊಡ್ಡ ಅವಕಾಶಗಳನ್ನು ಕಾಯ್ತಾ ಇರಬಾರದು ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಸಾಧನೆಯ ದಾರಿಯಲ್ಲಿ ಸಾಗುತ್ತಾ ಇರಬೇಕು. ನಮ್ಮ ಪರಿಶ್ರಮ ಸರಿಯಾಗಿದ್ದರೆ ಎಲ್ಲದೂ ಕೂಡಾ ನಮ್ಮೊಂದಿಗೆ ಹೆಜ್ಜೆ ಹಾಕುತ್ತದೆ.
ಕಲ್ಲು  ಉಳಿಪೆಟ್ಟನ್ನು ತಿಂದ ಮೇಲೆ ಶಿಲೆಯಾಗಿ ಬದಲ್ಲಾಗುತ್ತದೆಯೋ ಹಾಗೆಯೇ ನಾವು ಸುಂದರ ಶಿಲ್ಪ ಆಗಬೇಕಾದರೆ ಮೊದಲು ಕಷ್ಟಗಳನ್ನು ದಾಟಿ ನಿಲ್ಲಬೇಕು ಆಗ ಮಾತ್ರ ಯಶಸ್ಸು ನಮ್ಮನ್ನು ಮುಂದಿನ ದಾರಿಯ ಕಡೆಗೆ ಕರೆದುಕೊಂಡು ಹೋಗುತ್ತದೆ.

Advertisement
Share this on...