ಸಮ್ಮಿಶ್ರ ಸರ್ಕಾರಗಳಿಂದ ಜೆಡಿಎಸ್ ಹಾಳಾಯಿತು – ವೈ.ಎಸ್.ವಿ ದತ್ತ

in ರಾಜಕೀಯ 255 views

ಈ ಹಿಂದೆ ದೇವೇಗೌಡರ ನಾಯಕತ್ವದಲ್ಲಿ ಜೆಡಿಎಸ್ ಕರ್ನಾಟಕದಲ್ಲಿ ಪ್ರಬಲ ಪ್ರಾದೇಶಿಕ ಶಕ್ತಿಯಾಗಿತ್ತು. ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರು ಅಖಂಡ ಕರ್ನಾಟಕದ ಪ್ರಬಲ ನಾಯಕರಾಗಿ ಜನಮಾನಸದಲ್ಲಿ ನೆಲೆಗೊಂಡಿದ್ದರು. ನಂತರ ದಿನಗಳಲ್ಲಿ ನಡೆದ ರಾಜಕೀಯ ಸ್ಥಿತ್ಯಂತರಗಳು ಜಾತ್ಯಾತೀತ ಜನತಾದಳದ ಶಕ್ತಿಯನ್ನು ಕುಂದಿಸಿವೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಇಂದು ಪ್ರಬಲ ಪ್ರಾದೇಶಿಕ ಶಕ್ತಿಯೊಂದು ಇಲ್ಲದಂತಾಗಿದೆ. ಜೆಡಿಎಸ್ ಪಕ್ಷ ಸಮ್ಮಿಶ್ರ ಸರ್ಕಾರಗಳಿಂದ ದೊಡ್ಡ ಮಟ್ಟದ ಹೊಡೆತ ತಿದ್ದಿದೆ. ಇದರಿಂದ ಜೆಡಿಎಸ್ ಪಕ್ಷದ ಸಂಘಟನೆಯ ಮೇಲೆ ಬಲವಾದ ಹೊಡೆತ ಬಿದ್ದಿದೆ ಎಂದು ಮಾಜಿ ಶಾಸಕರಾದ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ ದತ್ತ ಅಭಿಪ್ರಾಯಪಟ್ಟರು. ಕಲಬುರಗಿಯ ಜೆಡಿಎಸ್ ಕಚೇರಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಹತ್ತಿಕ್ಕುವ ಕೆಲಸ ಮಾಡಿವೆ. ಇನ್ನು ಸಮ್ಮಿಶ್ರ ಸರ್ಕಾರದ ಹೆಸರಿನಲ್ಲಿ ಜೆಡಿಎಸ್ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿದ್ದೇ ತಪ್ಪು. ಇದರಿಂದಾಗಿಯೇ ಜೆಡಿಎಸ್‌ನ ಸಂಘಟನಾತ್ಮಕ ಶಕ್ತಿ ಕುಸಿಯಿತು ಎಂದು ವೈ.ಎಸ್.ವಿ ದತ್ತ ಹೇಳಿದರು.

Advertisement

Advertisement

ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೊಂದಿಗೆ ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚನೆ ಮಾಡುವ ಮುನ್ನ ಜಾತ್ಯಾತೀತ ಜನತಾದಳ ಕರ್ನಾಟಕದಲ್ಲಿ ಅತ್ಯಂತ ಬಲಿಷ್ಠವಾಗಿತ್ತು. ಆದರೆ ಬಿಜೆಪಿ ಜತೆ ಸೇರಿ ೨೦ ತಿಂಗಳ ಸರ್ಕಾರ ಮತ್ತು ಕಾಂಗ್ರೆಸ್‌ನೊAದಿಗೆ ೧೦ ತಿಂಗಳ ಸರ್ಕಾರ ನಡೆಸಿದ್ದು ಎರಡೂ ತಪ್ಪು. ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪ್ರಬಲವಾಗಿತ್ತು. ಅನೇಕ ಸ್ಥಳೀಯ ನಾಯಕರು ಇದ್ದರು. ಸಮ್ಮಿಶ್ರ ಸರ್ಕಾರಗಳ ಪ್ರಬಾವದಿಂದ ಅವರೆಲ್ಲಾ ಈಗ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿಕೊಂಡಿದ್ದಾರೆ. ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಮಾಡದೆ ಇದ್ದರೆ, ಈ ರೀತಿಯ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಎಷ್ಟೇ ಸ್ಥಾನಗಳು ಗೆದ್ದರೂ ಪ್ರತಿ ಪಕ್ಷವಾಗಿ ಹೋರಾಟ ಮಾಡಬಹುದಾಗಿತ್ತು ಎಂದು ದತ್ತ ಅಭಿಪ್ರಾಯಪಟ್ಟರು.

Advertisement

ಈಗ ಮತ್ತೆ ಜೆಡಿಎಸ್ ಪಕ್ಷವನ್ನು ಪುನರ್ ಸಂಘಟಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಬಲಪಡಿಸುವ ಕಾರ್ಯವಾಗುತ್ತಿದೆ. ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಕೆಗೆ ಒತ್ತು ಕೊಡಲಾಗುತ್ತಿದ್ದು, ಪ್ರತಿ ಹಳ್ಳಿಗಳಲ್ಲಿ ಯುವಕರ ಪಡೆ ಕಟ್ಟಲಾಗುತ್ತಿದೆ. ಪ್ರಾದೇಶಿಕ ಪಕ್ಷದ ಅಗತ್ಯತೆಯನ್ನು ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟಿçÃಯ ಪಕ್ಷಗಳು ತಮ್ಮ ರಾಷ್ಟಿçÃಯ ನೀತಿಗಳಿಗಾಗಿ ನಮ್ಮ ಪ್ರಾದೇಶಿಕ ಅಗತ್ಯತೆಗಳನ್ನು ಬಲಿ ಕೊಡುತ್ತಿವೆ. ಇದರಿಂದಾಗಿಯೇ ರಾಜ್ಯದ ಅನೇಕ ನೀರಾವರಿ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ರಾಜ್ಯದಲ್ಲಿ ಪ್ರಬಲ ಪ್ರಾದೇಶಿಕ ಪಕ್ಷ ಇದ್ದಿದ್ದರೆ ಮಹದಾಯಿಯಂತ ಸಮಸ್ಯೆಗಳು ಇರುತ್ತಿರಲಿಲ್ಲ. ಇನ್ನಾದರು ಕನ್ನಡಿಗರು ಎಚ್ಚೆತ್ತುಕೊಂಡು ನಮ್ಮದೇ ಪ್ರಾದೇಶಿಕ ಶಕ್ತಿಯಾದ ಜೆಡಿಎಸ್ ಪಕ್ಷವನ್ನು ಬಲ ಪಡಿಸಬೇಕೆಂದು ಕರೆ ನೀಡಿದರು.

Advertisement

Advertisement
Share this on...